ನವ ದೆಹಲಿ: ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ (Amrit Mahotsav) ಹಿನ್ನೆಲೆಯಲ್ಲಿ ದೇಶದ ಜನರನ್ನುದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಾತನಾಡಿದ್ದು, ಸ್ವಾತಂತ್ರ್ಯ ದಿನಾಚರಣೆಯ (Independence Day 2022) ಶುಭಾಶಯ ತಿಳಿಸಿದ್ದಾರೆ. ರಾಷ್ಟ್ರಪತಿಯಾಗಿ ಆಯ್ಕೆಯಾದ ಬಳಿಕ ಇದೇ ಮೊದಲ ಬಾರಿಗೆ ಮುರ್ಮು ಅವರು ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಭಾಷಣ ಮಾಡಿದ್ದಾರೆ.
“ದೇಶದ ಸಮಸ್ತ ಜನತೆಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು. ಭಾರತ ಸ್ವಾತಂತ್ರ್ಯ ಗಳಿಸಿ ೭೫ ವರ್ಷ ತುಂಬುತ್ತಿರುವ ಹೊತ್ತಿನಲ್ಲಿ ದೇಶಾದ್ಯಂತ ತಿರಂಗಾ ಹಾರಾಡುತ್ತಿದೆ. ಪ್ರತಿ ಮನೆ, ಮನದ ಮೂಲೆಯಲ್ಲಿಯೂ ಧ್ವಜಾರೋಹಣ ಮಾಡಲಾಗಿದೆ. ಕೊರೊನಾ ಬಿಕ್ಕಟ್ಟಿನ ಬಳಿಕ ಏಳಿಗೆಯ ಹಾದಿಯಲ್ಲಿ ಸಾಗುತ್ತಿರುವ ದೇಶದ ಶ್ರೇಯೋಭಿವೃದ್ಧಿಗೆ ಇನ್ನಷ್ಟು ಶ್ರಮಿಸೋಣ” ಎಂದು ತಿಳಿಸಿದ್ದಾರೆ.
“ಭಾರತವು ಎಂತಹ ಸಮಸ್ಯೆಯನ್ನೂ ಮೆಟ್ಟಿ ಮುಂದೆ ಸಾಗುತ್ತದೆ ಎಂಬುದಕ್ಕೆ ಕೊರೊನಾ ಬಿಕ್ಕಟ್ಟೇ ಉದಾಹರಣೆಯಾಗಿದೆ. ಸಾಂಕ್ರಾಮಿಕ ತಂದೊಡ್ಡಿದ್ದ ಸಂಕಷ್ಟದ ಸಮಯದಲ್ಲಿ ಇಡೀ ದೇಶ ಒಗ್ಗೂಡಿದ ರೀತಿ, ಹೋರಾಟದ ಮಾದರಿಯೇ ನಮ್ಮ ಸತ್ವವಾಗಿದೆ. ಮುಂದಿನ ದಿನಗಳಲ್ಲೂ ದೇಶದ ಉನ್ನತಿಗಾಗಿ ಮುಂದಡಿ ಇಡುತ್ತಲೇ ಇರೋಣ. ಭಾರತದ ಹೆಗ್ಗಳಿಕೆಯನ್ನು ಇಮ್ಮಡಿಗೊಳಿಸೋಣ” ಎಂದು ಕರೆ ನೀಡಿದ್ದಾರೆ.
ಇದನ್ನೂ ಓದಿ | Draupadi Murmu | ಅಮೃತಕಾಲದಲ್ಲಿ ರಾಷ್ಟ್ರಪತಿ ಹುದ್ದೆ ಕೊಟ್ಟಿದ್ದಕ್ಕೆ ಧನ್ಯವಾದಗಳು: ದ್ರೌಪದಿ ಮುರ್ಮು