Site icon Vistara News

Video: ಗೃಹ ಸಚಿವ ಅಮಿತ್‌ ಶಾ ಎದುರೇ 30 ಸಾವಿರ ಕೆಜಿ ಮಾದಕ ದ್ರವ್ಯ ಸುಟ್ಟುಹಾಕಿದ ಎನ್‌ಸಿಬಿ

Amit Shah

ನವ ದೆಹಲಿ: ಇಂದು ಎನ್‌ಸಿಬಿ (ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ) 30 ಸಾವಿರ ಕೆಜಿ ನಿಷೇಧಿತ ಪದಾರ್ಥಗಳನ್ನು (ಮಾದಕ ವಸ್ತುಗಳು) ಗೃಹ ಸಚಿವ ಅಮಿತ್‌ ಶಾ ಎದುರೇ ಸುಟ್ಟು ಬೂದಿ ಮಾಡಿದೆ. ದೆಹಲಿ, ಚೆನ್ನೈ, ಗುವಾಹಟಿ ಮತ್ತು ಕೋಲ್ಕತ್ತದಲ್ಲಿ ಎನ್‌ಸಿಬಿ ಅಧಿಕಾರಿಗಳು ಡ್ರಗ್ಸ್‌ಗೆ ಬೆಂಕಿ ಹಚ್ಚಿದ್ದಾರೆ. ಈ ಕ್ಷಣಕ್ಕೆ ಅಮಿತ್‌ ಶಾ ವರ್ಚ್ಯುವಲ್‌ ಆಗಿ ಸಾಕ್ಷಿಯಾಗಿದ್ದಾರೆ. ಹಾಗೇ, ಎನ್‌ಸಿಬಿ ಅಧಿಕಾರಿಗಳು ಅಪಾರ ಪ್ರಮಾಣದ ಡ್ರಗ್ಸ್‌ನ್ನು ಬೆಂಕಿ ಹಚ್ಚಿ ಸುಡುವ ವಿಡಿಯೋಗಳನ್ನು ಅಮಿತ್‌ ಶಾ ಟ್ವೀಟ್‌ ಮಾಡಿಕೊಂಡಿದ್ದಾರೆ.

ಗೃಹ ಸಚಿವ ಅಮಿತ್‌ ಶಾ ಚಂಡಿಗಢ್‌ನಲ್ಲಿ ನಡೆದ ಮಾದಕವಸ್ತು ಕಳ್ಳಸಾಗಣೆ ಮತ್ತು ರಾಷ್ಟ್ರೀಯ ಭದ್ರತೆ ಕುರಿತ ರಾಷ್ಟ್ರೀಯ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು. ಇದೇ ವೇಳೆ ಅವರ ಎದುರು ದೊಡ್ಡದಾದ ಪರದೆಯಲ್ಲಿ, ದೆಹಲಿ, ಕೋಲ್ಕತ್ತ, ಗುವಾಹಟಿ, ಚೆನ್ನೈಗಳಲ್ಲಿ ಎನ್‌ಸಿಬಿ ಸಿಬ್ಬಂದಿ ಮಾದಕವಸ್ತುಗಳಿಗೆ ಬೆಂಕಿ ಹಚ್ಚಿ ಸುಡುವ ವಿಡಿಯೋಗಳನ್ನು ಪ್ರದರ್ಶಿಸಲಾಯಿತು. ವಿಡಿಯೋ ಶೇರ್‌ ಮಾಡಿಕೊಂಡಿರುವ ಅವರು, ʼಮಾದಕ ವಸ್ತುಗಳ ಕಳ್ಳಸಾಗಣೆ ಸಮಾಜಕ್ಕೆ ಮಾರಕ. ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಈ ವಿಚಾರದಲ್ಲಿ ಶೂನ್ಯ ಸಹಿಷ್ಣು ನೀತಿಯನ್ನು ಹೊಂದಿರಬೇಕುʼ ಎಂದು ಕ್ಯಾಪ್ಷನ್‌ ಬರೆದುಕೊಂಡಿದ್ದಾರೆ. ಹಾಗೇ, ಇಂದಿನವರೆಗೆ 82 ಸಾವಿರ ಕೆಜಿಗಳಷ್ಟು ಡ್ರಗ್ಸ್‌ ಸುಟ್ಟುಹಾಕಿದ್ದೇವೆ. ಆಗಸ್ಟ್‌ 15ರ ಹೊತ್ತಿಗೆ 1 ಲಕ್ಷ ಗಡಿ ದಾಟುತ್ತೇವೆ ಎಂಬ ನಂಬಿಕೆ ಇದೆ ಎಂದೂ ಹೇಳಿದ್ದಾರೆ.

ಹಾಗೇ ಸಮ್ಮೇಳನದಲ್ಲಿ ಮಾತನಾಡಿದ ಅಮಿತ್‌ ಶಾ, ʼ2014ರಲ್ಲಿ ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಾದಕ ವಸ್ತುಗಳ ನಿಯಂತ್ರಣಕ್ಕೆ ಪ್ರಮುಖ ಕ್ರಮಗಳನ್ನು ಕೈಗೊಂಡಿದೆ. ಅದರ ಫಲಿತಾಂಶ ಎಲ್ಲರಿಗೂ ಕಾಣುತ್ತಿದೆ ಎಂದು ಹೇಳಿದರು. ಹಾಗೇ, ಈ ಡ್ರಗ್ಸ್‌ನಿಂದ ಹುಟ್ಟಿದ ಹಣವನ್ನೆಲ್ಲ ದೇಶವಿರೋಧಿ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ ಎಂದೂ ತಿಳಿಸಿದರು.

ಇದನ್ನೂ ಓದಿ: Kashmir Drugs | ಕಾಶ್ಮೀರದಲ್ಲಿ ಮಾದಕದ್ರವ್ಯಗಳ ಭಯೋತ್ಪಾದನೆ!

Exit mobile version