ಶ್ರೀನಗರ: ಜಮ್ಮು-ಕಾಶ್ಮೀರದ ದೋಡಾದಲ್ಲಿ ಇಂದು ಪ್ರಬಲ ಭೂಕಂಪ ಆಗಿದೆ (Jammu Kashmir Earthquake). ರಿಕ್ಟರ್ ಮಾಪಕದಲ್ಲಿ 5.4ರಷ್ಟು ತೀವ್ರತೆ ದಾಖಲಾಗಿದೆ. ಭೂಮೇಲ್ಮೈನಿಂದ 6 ಕಿಮೀ ಆಳದಲ್ಲಿ ಭೂಮಿ ನಡುಗಿದೆ. ದೋಡಾದ ಭೂಕಂಪನದ ಪರಿಣಾಮವಾಗಿ ದೆಹಲಿ, ಪಂಜಾಬ್ಗಳ ಕೆಲವು ಭಾಗಗಳಲ್ಲೂ ಭೂಮಿ ಕಂಪಿಸಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ. ಜಮ್ಮು-ಕಾಶ್ಮೀರ ಮತ್ತು ಭೂಮಿ ಕಂಪನವಾದ ಉತ್ತರ ಭಾರತದ ರಾಜ್ಯಗಳ ಅನೇಕ ಜನರು ಸೋಷಿಯಲ್ ಮೀಡಿಯಾಗಳಲ್ಲಿ ಕೆಲವು ಫೋಟೋ, ವಿಡಿಯೊಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಯಾವುದೇ ದೊಡ್ಡಮಟ್ಟದ ಅಪಾಯ ಉಂಟಾದ ಬಗ್ಗೆ ವರದಿಯಾಗಿಲ್ಲ. ಆದರೆ ಜನರು ಧಾವಂತದಿಂದ ಮನೆಯಿಂದ ಹೊರಗೆ ಓಡಿದ್ದಾರೆ.
Strong Earthquake Tremors !! Who felt it ? pic.twitter.com/KCxAaDe3V5
— Gagandeep Singh (@Gagan4344) June 13, 2023
#earthquake in Chandigarh ! My God pic.twitter.com/JPn0SOmj5k
— Sara Gurpal (@SGurpal) June 13, 2023
ಇತ್ತೀಚಿನ ದಿನಗಳಲ್ಲಿ ಜಮ್ಮು-ಕಾಶ್ಮೀರ ಮತ್ತು ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಪದೇ ಪದೆ ಭೂಕಂಪನವಾಗುತ್ತಿದೆ. ಜನವರಿಯಲ್ಲಿ ಜಮ್ಮು-ಕಾಶ್ಮೀರದಲ್ಲಿ 5.9 ಮ್ಯಾಗ್ನಿಟ್ಯೂಡ್ಗಳಷ್ಟು ತೀವ್ರತೆಯಲ್ಲಿ ಭೂಮಿ ನಡುಗಿತ್ತು. ಆಗಲೂ ದೆಹಲಿ, ಗುರುಗ್ರಾಮ, ನೊಯ್ಡಾ, ಫರೀದಾಬಾದ್, ಘಾಜಿಯಾಬಾದ್ ಸೇರಿ ವಿವಿಧೆಡೆ ಭೂಮಿ ಕಂಪಿಸಿತ್ತು. ಅಫ್ಘಾನಿಸ್ತಾನದಲ್ಲಿ ಕೂಡ ಹೆಚ್ಚಿನ ಪ್ರಮಾಣದಲ್ಲಿ ಭೂಮಿ ನಡುಗಿತ್ತು. ಇನ್ನು ಮಾರ್ಚ್ ತಿಂಗಳಲ್ಲಿ ಅಫ್ಘಾನಿಸ್ತಾನದಲ್ಲಿ 7.7ರಷ್ಟು ತೀವ್ರತೆಯಲ್ಲಿ ಭೂಮಿ ನಡುಗಿತ್ತು. ಅದರ ಪರಿಣಾಮ ಭಾರತದಲ್ಲೂ ದೆಹಲಿ ಸೇರಿ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಭೂಕಂಪನ ಉಂಟಾಗಿತ್ತು.
ಇತ್ತೀಚೆಗೆ ಮೇ 29ರಂದು ಈಶಾನ್ಯ ರಾಜ್ಯ ಅಸ್ಸಾಂನಲ್ಲಿ 4.4 ತೀವ್ರತೆಯ ಭೂಕಂಪನವಾಗಿತ್ತು. ಅದೇ ದಿನ ಭೂತಾನ್, ಚೀನಾ, ಬಾಂಗ್ಲಾದೇಶದಲ್ಲೂ ಭೂಮಿ ಕಂಪಿಸಿತ್ತು. ಅದಕ್ಕೂ ಮೊದಲು ಭಾನುವಾರ ಅಂದರೆ ಮೇ 28ರಂದು ಮೇಘಾಲಯದ ಖಾಸಿ ಹಿಲ್ಸ್ ಜಿಲ್ಲೆಯಲ್ಲಿ 3.6 ತೀವ್ರತೆಯಲ್ಲಿ ಭೂಕಂಪವಾಗಿತ್ತು. ಅಫ್ಘಾನಿಸ್ತಾನದಲ್ಲೂ ಅಂದೇ ಭೂಮಿ ನಡುಗಿತ್ತು.
ಇದನ್ನೂ ಓದಿ: Indonesia Earthquake: ಇಂಡೋನೇಷ್ಯಾದಲ್ಲಿ 7.3 ತೀವ್ರತೆಯ ಭೂಕಂಪ; ಸುನಾಮಿ ಏಳುವ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ