ಮಧ್ಯಪ್ರದೇಶದ ರೇವಾ ಜಿಲ್ಲೆಯ ಬಿಜೆಪಿ ಸಂಸದ ಜನಾರ್ಧನ್ ಮಿಶ್ರಾ ಅವರು, ನೀರು ಸಂರಕ್ಷಣೆ ಕುರಿತಾಗಿ ಒಂದು ವಿಚಿತ್ರ ಹೇಳಿಕೆ ನೀಡಿದ್ದಾರೆ. ಅಲ್ಲಿನ ಕೃಷ್ಣರಾಜ್ ಕಪೂರ್ ಅಡಿಟೋರಿಯಂನಲ್ಲಿ ಆಯೋಜಿಸಲಾಗಿದ್ದ, ಜಲ ಜೀವನ್ ಮಿಶನ್ ಸಂಬಂಧಿತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೀವು ಮದ್ಯವನ್ನಾದರೂ ಸೇವಿಸಿ, ತಂಬಾಕನ್ನಾದರೂ ತಿನ್ನಿ, ಆದರೆ ನೀರಿನ ಮಹತ್ವ ಅರಿತುಕೊಳ್ಳಿ’ ಎಂದು ಕರೆ ಕೊಟ್ಟಿದ್ದಾರೆ. ಆ ವಿಡಿಯೊ ವೈರಲ್ ಆಗಿದ್ದು, ಸಂಸದನ ಭಾಷಣ ತುಸು ಅಸಂಬದ್ಧ ಎನ್ನಿಸಿದೆ.
‘ಅಂತರ್ಜಲ ಬತ್ತಿ ಹೋಗುತ್ತಿದೆ. ಭೂಮಿ ಮೇಲೆ ನೀರು ಇಲ್ಲದಂತಾಗುತ್ತಿದೆ. ಹಾಗಾಗಿ ಅದನ್ನು ಸಂರಕ್ಷಿಸಬೇಕು. ಗುಟ್ಕಾವನ್ನಾದರೂ ತಿನ್ನಿ, ಲಿಕ್ಕರ್ ಆದ್ರೂ ಕುಡಿಯಿರಿ, ಐಯೋಡೆಕ್ಸ್ ಬೇಕಿದ್ದರೂ ಸೇವಿಸಿ..ಆದರೆ ನೀರಿನ ಮಹತ್ವ ಅರ್ಥ ಮಾಡಿಕೊಳ್ಳಿ ಎಂಬುದು ಜನಾರ್ದನ ಮಿಶ್ರಾರ ಮಾತಿನ ಸಾರಾಂಶ’. ಅಷ್ಟೇ ಅಲ್ಲ ಇನ್ನೂ ಕೆಲವು ಅಮಲು ಬರುವ ಪದಾರ್ಥವನ್ನು ಉಲ್ಲೇಖಿಸಿ, ‘ನೀವು ಏನೇ ಚಟವನ್ನಾದರೂ ಮಾಡಿ, ನೀರನ್ನು ಉಳಿಸಿ’ ಎಂದಿದ್ದಾರೆ. ಅಷ್ಟೇ ಅಲ್ಲ, ‘ನೀರಿನ ತೆರಿಗೆಯನ್ನು ಸರ್ಕಾರ ಮನ್ನಾ ಮಾಡಿದರೂ ಜನರು ಅದನ್ನು ಕಟ್ಟಬೇಕು’ ಎಂದೂ ಹೇಳಿದರು.
ಸಂಸದ ಜನಾರ್ದಮ ಮಿಶ್ರಾ ಈ ಮಾತುಗಳು ಅರ್ಥವಾಗುತ್ತಿಲ್ಲ. ಗುಟ್ಕಾ, ಅಲ್ಕೋಹಾಲ್ ಸೇವನೆಗೂ, ನೀರಿನ ಸಂರಕ್ಷಣೆಗೂ ಎಲ್ಲಿಂದೆಲ್ಲಿಯ ಸಂಬಂಧ ಎಂದು ಜನ ಪ್ರಶ್ನೆ ಕೇಳುತ್ತಿದ್ದಾರೆ. ಅಂದಹಾಗೇ, ಮಿಶ್ರಾ ಸದಾ ವಿವಾದ ಸೃಷ್ಟಿಸುತ್ತಲೇ ಬಂದಿರುವ ರಾಜಕೀಯ ನಾಯಕ. ಹಲವು ವರ್ಷಗಳ ಹಿಂದೆ ಕಾರ್ಯಕ್ರಮವೊಂದರಲ್ಲಿ ಐಎಎಸ್ ಅಧಿಕಾರಿಗೆ ಬಹಿರಂಗವಾಗಿಯೇ ಬೆದರಿಕೆ ಹಾಕಿದ್ದರು. ‘ಕೊಂದು, ಇಲ್ಲಿಯೇ ಸಮಾಧಿ ಮಾಡಿಬಿಡುತ್ತೇನೆ’ ಎಂದು ಕೂಗಾಡಿದ್ದರು.
ಇದನ್ನೂ ಓದಿ: Rajnath Singh | ಕಾಂಗ್ರೆಸ್ ವೈಡ್, ಆಪ್ ನೋ ಬಾಲ್, ಹಾಗಾದರೆ ಬಿಜೆಪಿ ಏನು? ರಾಜನಾಥ್ ಸಿಂಗ್ ಹೇಳಿದ್ದೇನು?