Site icon Vistara News

ನನ್ನ ಮುಖವೇನಾದರೂ ಅದಾನಿ ಮುಖದಂತೆಯೇ ಇದೆಯಾ?; ಇ.ಡಿ. ದಾಳಿ ಬಗ್ಗೆ ವ್ಯಂಗ್ಯ ಮಾಡಿದ ಲಾಲು ಪುತ್ರ ತೇಜಸ್ವಿ ಯಾದವ್​

ED have Either got confused or my face matches with Adani Says Tejashwi Yadav

#image_title

ನವ ದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣಕ್ಕೆ ಸಂಬಂಧಪಟ್ಟಂತೆ ಜಾರಿ ನಿರ್ದೇಶನಾಲಯ ಬಿಹಾರದಲ್ಲಿ ಲಾಲೂಪ್ರಸಾದ್ ಯಾದವ್​ ಮತ್ತು ರಾಬ್ರಿ ದೇವಿ ನಿವಾಸ, ಅವರ ಪುತ್ರ, ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್, ಪುತ್ರಿಯರಾದ ರಾಗಿಣಿ, ಚಂದಾ, ಹೇಮಾ ಯಾದವ್‌, ರಾಗಿಣಿ ಪತಿ ಜಿತೇಂದ್ರ ಯಾದವ್ ಹಾಗೂ ಲಾಲು ಆಪ್ತ ಅಬು ದೊಜಾನ ಅವರಿಗೆ ಸೇರಿದ ನಿವಾಸ, ಕಚೇರಿ ಸೇರಿ ಒಟ್ಟು 24 ಕಡೆ ಇ.ಡಿ ದಾಳಿ ನಡೆಸಿತ್ತು. ಈ ವೇಳೆ 70 ಲಕ್ಷ ರೂಪಾಯಿ ನಗದು, ಒಂದೂವರೆ ಕೆ.ಜಿ ಚಿನ್ನ ಪತ್ತೆಯಾಗಿದ್ದಾಗಿ ವರದಿಯಾಗಿದೆ.

ತಮ್ಮ ಕುಟುಂಬದವರ ಮೇಲೆ ಆಗುತ್ತಿರುವ ಇ.ಡಿ.ದಾಳಿ ಬಗ್ಗೆ ಸೋಮವಾರ ಡಿಸಿಎಂ ತೇಜಸ್ವಿ ಯಾದವ್​ ಕಿಡಿಕಾರಿದ್ದಾರೆ. ಬಿಹಾರ ವಿಧಾನಸಭೆ ಹೊರಭಾಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ನನ್ನ ಸಹೋದರಿಯರು, ಸಂಬಂಧಿಕರ ಮನೆಗಳಲ್ಲಿ ಕೋಟ್ಯಂತರ ರೂಪಾಯಿ, ಚಿನ್ನದ ಒಡವೆಗಳನ್ನು ವಶಪಡಿಸಿಕೊಂಡಿದ್ದಾಗಿ ಇ.ಡಿ. ಹೇಳಿದೆ. ಆದರೆ ಅವರೇನೂ ವಶಪಡಿಸಿಕೊಳ್ಳಲು ಅಲ್ಲೇನೂ ಸಿಕ್ಕಿಲ್ಲ. ನನ್ನ ಸಹೋದರಿಯರು, ಸಂಬಂಧಿಕರ ಬಳಿ ಅವರ ಒಡವೆಯನ್ನೆಲ್ಲ ತೆಗೆಸಲಾಯಿತು. ಬಳಿಕ ಅದನ್ನು ಇ.ಡಿ.ಅಧಿಕಾರಿಗಳು ಫೋಟೋ ತೆಗೆದುಕೊಂಡು, ಅದೇ ಫೋಟೋವನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಿದರು ಮತ್ತು ಅದು ತಾವು ವಶಪಡಿಸಿಕೊಂಡ ಬಂಗಾರ ಎಂದು ಹೇಳಿದ್ದಾರೆ’ ಎಂಬ ಆರೋಪವನ್ನು ತೇಜಸ್ವಿ ಯಾದವ್​ ಮಾಡಿದ್ದಾರೆ. ಅಷ್ಟೇ ಅಲ್ಲ, ‘ಇ.ಡಿ.ಅಧಿಕಾರಿಗಳು ತಾವು ವಶಪಡಿಸಿಕೊಂಡಿದ್ದಾಗಿ ಹೇಳುತ್ತಿರುವ ವಸ್ತುಗಳ ಪಟ್ಟಿ ಬಿಡುಗಡೆ ಮಾಡಲಿ’ ಎಂದು ಸವಾಲು ಕೂಡ ಹಾಕಿದರು.

ಇದನ್ನೂ ಓದಿ: Land For Job Case: ತೇಜಸ್ವಿ ನಿವಾಸದಲ್ಲಿ ಬಗೆದಷ್ಟೂ ಹಣ, 600 ಕೋಟಿ ರೂ. ಅಕ್ರಮ ಆಸ್ತಿ ಪತ್ತೆ

ಸಿಬಿಐ ಮತ್ತು ಇಡಿ ಅಧಿಕಾರಿಗಳಿಗೆ ಅದಾನಿ ಮತ್ತು ನನ್ನ ನಡುವೆ ಗೊಂದಲ ಆಗಿರಬೇಕು. ನನ್ನ ಮುಖವೇನಾದರೂ ಅದಾನಿ ಮುಖದಂತೆ ಇದೆಯೇ? ಅಲ್ಲಿನ 80 ಸಾವಿರ ಕೋಟಿ ರೂಪಾಯಿಯ ಹಗರಣವನ್ನು ಬಿಟ್ಟು, ಪ್ರತಿ ಎರಡು-ಮೂರು ದಿನಗಳಿಗೆ ಒಮ್ಮೆ ನನ್ನ ಮನೆಯನ್ನು ಅವರು ರೇಡ್ ಮಾಡುತ್ತಿದ್ದಾರೆ. ಕಳೆದ ವಾರ ನನ್ನ ಮನೆಯಲ್ಲಿ ಶೋಧ ಕಾರ್ಯ ನಡೆಸಿದ ಅಧಿಕಾರಿಗಳು, ಸುಮಾರು ಅರ್ಧಗಂಟೆ ಸುಮ್ಮನೆ ಕಾದರು. ಮೇಲಿಂದ ಒಪ್ಪಿಗೆ ಬಂದ ವಿನಃ ಅವರು ಅಲ್ಲಿಂದ ಹೋಗುವಂತಿರಲಿಲ್ಲ’ ಎಂದು ತೇಜಸ್ವಿ ಯಾದವ್ ವ್ಯಂಗ್ಯವಾಡಿದ್ದಾರೆ.

Exit mobile version