Site icon Vistara News

ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಇ ಡಿ ವಿಚಾರಣೆ ಮುಕ್ತಾಯ; ಸದ್ಯಕ್ಕಿಲ್ಲ ಹೊಸ ಸಮನ್ಸ್​

ED questions Sonia Gandhi for 3 hours no Fresh Summons

ನವ ದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಇ ಡಿ ವಿಚಾರಣೆ ಇಂದು ಮುಕ್ತಾಯಗೊಂಡಿದೆ. ಬೆಳಗ್ಗೆಯಿಂದ ಮೂರು ತಾಸುಗಳ ಕಾಲ ಅವರಿಗೆ ಪ್ರಶ್ನೆಗಳನ್ನು ಕೇಳಲಾಯಿತು. ಹಾಗೇ, ಮತ್ತೆ ವಿಚಾರಣೆಗೆ ಆಗಮಿಸುವಂತೆ ಯಾವುದೇ ಸಮನ್ಸ್ ನೀಡಿಲ್ಲ. ರಾಹುಲ್​ ಗಾಂಧಿಗೆ ಐದು ಸುತ್ತುಗಳಲ್ಲಿ ವಿಚಾರಣೆ ನಡೆಸಿದ್ದ ಇ ಡಿ ಅಧಿಕಾರಿಗಳು ಸೋನಿಯಾ ಗಾಂಧಿ ವಿಚಾರಣೆಯನ್ನು ಮೂರು ಸುತ್ತುಗಳಲ್ಲಿ ಮುಗಿಸಿದ್ದಾರೆ. ಸೋನಿಯಾ ಗಾಂಧಿ ಇಂದು ಬೆಳಗ್ಗೆ 11 ಗಂಟೆಗೆ, ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ರಾಹುಲ್ ಗಾಂಧಿಯೊಂದಿಗೆ ಇ ಡಿ ಕಚೇರಿಗೆ ತೆರಳಿದ್ದರು. 11.15 ರಿಂದ ಪ್ರಶ್ನಾವಳಿ ಪ್ರಾರಂಭವಾಗಿತ್ತು. ಇದೀಗ ಅವರು ಇ ಡಿ ಕಚೇರಿಯಿಂದ ವಾಪಸ್ ಮನೆಗೆ ತೆರಳಿದ್ದಾರೆ.

ನ್ಯಾಷನಲ್ ಹೆರಾಲ್ಡ್ ಕೇಸ್​​ನಲ್ಲಿ ಸೋನಿಯಾ ಗಾಂಧಿ ಮೊದಲು ವಿಚಾರಣೆಗೆ ಹಾಜರಾಗಿದ್ದು ಜುಲೈ 21ರಂದು. ಅಂದೂ ಸಹ ಮೂರು ತಾಸುಗಳಲ್ಲಿ ವಿಚಾರಣೆ ಮುಕ್ತಾಯವಾಗಿತ್ತು. ಅದಾದ ಬಳಿಕ ಜುಲೈ 25ಕ್ಕೆ ಮತ್ತೆ ಇ ಡಿ ಎದುರು ಹಾಜರಾಗಿ 5 ಗಂಟೆಗಳ ವಿಚಾರಣೆ ಎದುರಿಸಿದ್ದಾರೆ. ಈ ಎರಡೂ ಹಂತಗಳಿಂದ ಸೋನಿಯಾ ಗಾಂಧಿ ಇ ಡಿ ಅಧಿಕಾರಿಗಳು ಕೇಳಿದ 65-70 ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಹಾಗೆ, ಇಂದು (ಜುಲೈ 26) 30-40 ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ ಎಂದು ಇ ಡಿ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಅಂದಹಾಗೇ, ಈ ಮೂರು ಹಂತಗಳಿಂದ ಸೋನಿಯಾ ಗಾಂಧಿ ಸುಮಾರು 11 ತಾಸುಗಳ ವಿಚಾರಣೆಗೆ ಒಳಪಟ್ಟಂತಾಗಿದೆ.

ಈ ಹಿಂದೆ ರಾಹುಲ್​ ಗಾಂಧಿಯನ್ನು ಇ ಡಿ ವಿಚಾರಣೆ ನಡೆಸಿದಾಗಲೂ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಹಾಗೇ, ಈಗ ಸೋನಿಯಾ ಗಾಂಧಿ ವಿಚಾರಣೆ ವೇಳೆಯೂ ಅದನ್ನೇ ಮಾಡಿದ್ದಾರೆ. ಕೇಂದ್ರ ಸರ್ಕಾರ ಇ ಡಿ ಸೇರಿ ಎಲ್ಲ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್​ ನಾಯಕರು, ದೇಶಾದ್ಯಂತ ಸತ್ಯಾಗ್ರಹ, ಪ್ರತಿಭಟನೆ ನಡೆಸಿದ್ದಾರೆ.

ಇದನ್ನೂ ಓದಿ: ಪುತ್ರನನ್ನೇ ಅನುಸರಿಸಿದ ಸೋನಿಯಾ ಗಾಂಧಿ; ಇ ಡಿ ಅಧಿಕಾರಿಗಳ ಎದುರು ಮತ್ತದೇ ವ್ಯಕ್ತಿ ಹೆಸರು ಪ್ರಸ್ತಾಪ !

Exit mobile version