Site icon Vistara News

Anil Ambani: ಅಂಬಾನಿ ದಂಪತಿಗೆ ಇ ಡಿ ಸಂಕಷ್ಟ; ಇಂದು ಟೀನಾ ಅಂಬಾನಿ ವಿಚಾರಣೆ

Anil Ambani Tina Ambani

ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಕೇಶ್ ಅಂಬಾನಿ ಸಹೋದರ, ಉದ್ಯಮಿ ಅನಿಲ್​ ಅಂಬಾನಿ (Anil Ambani) ಮತ್ತು ಅವರ ಪತ್ನಿ ಟೀನಾ ಅಂಬಾನಿ (Tina Ambani)ಯವರನ್ನು ಜಾರಿ ನಿರ್ದೇಶನಾಲಯ (ಇ.ಡಿ) ವಿಚಾರಣೆಗೆ ಒಳಪಡಿಸಿದೆ. ವಿದೇಶಿ ವಿನಿಮಯ ನಿರ್ವಹಣೆ ಕಾಯ್ದೆ (FEMA -Foreign Exchange Violation Case)ಯ ನಿಯಮಗಳನ್ನು ಉಲ್ಲಂಘಿಸಿದ ಆರೋಪದಡಿ ಅನಿಲ್ ಅಂಬಾನಿಯವರನ್ನು ಮಂಗಳವಾರ ಇ.ಡಿ.ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿ, ಹೇಳಿಕೆ ಪಡೆದಿದ್ದರು. ಇಂದು ಅವರ ಪತ್ನಿ ಟೀನಾ ಅಂಬಾನಿಯವರನ್ನು ವಿಚಾರಣೆ ನಡೆಸಿದ್ದಾರೆ. ಇವರಿಬ್ಬರ ವಿರುದ್ಧ ಫೆಮಾ (FEMA) ಕಾಯ್ದೆಯ ವಿವಿಧ ವಿಭಾಗಗಳಡಿ ಕೇಸ್ ದಾಖಲಾಗಿದೆ.

2021ರಲ್ಲಿ ಪಂಡೋರಾ ಪೇಪರ್​ನ ವರದಿ ದೊಡ್ಡಮಟ್ಟದ ಸಂಚಲನ ಮೂಡಿತ್ತು. ಒಂದು ತನಿಖಾ ಪತ್ರಿಕೆಯಾದ ಪಂಡೋರಾ ಪೇಪರ್​​, ‘ಸಾಗರೋತ್ತರ ಪ್ರದೇಶಗಳಲ್ಲಿ ಆಸ್ತಿ ಸಂಗ್ರಹ ಮಾಡುವ ಮೂಲಕ ತಮ್ಮ ದೇಶಗಳಿಗೆ ತೆರಿಗೆ ವಂಚನೆ ಮಾಡುತ್ತಿರುವ​ ಜಾಗತಿಕ ಶ್ರೀಮಂತರು, ಗಣ್ಯರ ಹೆಸರನ್ನು ಉಲ್ಲೇಖಿಸಲಾಗಿತ್ತು. ಅದರಲ್ಲಿ ಅನಿಲ್ ಅಂಬಾನಿ ಹೆಸರೂ ಇತ್ತು. ಅನಿಲ್ ಅಂಬಾನಿ ಅವರು 2021ರ ಅಕ್ಟೋಬರ್​ನಲ್ಲಿ ಯುಕೆ ನ್ಯಾಯಾಲಯದಲ್ಲಿ ತಾವು ದಿವಾಳಿ ಎಂದು ಘೋಷಿಸಿಕೊಂಡಿದ್ದರು. ಆದರೆ ಅವರು ಜರ್ಸಿ, ಬ್ರಿಟಿಷ್​ ವರ್ಜಿನ್ ದ್ವೀಪಗಳು ಮತ್ತು ಸಿಪ್ರಸ್​​ನಲ್ಲಿ ಆಸ್ತಿ ಗಳಿಕೆ ಮಾಡಿದ್ದಾರೆ. ಕಡಲಾಚೆಯ ಈ ದೇಶಗಳಲ್ಲಿ 18 ಕಂಪನಿಗಳನ್ನು ಹೊಂದಿದ್ದಾರೆ. ಇವೆಲ್ಲವರೂ 2007-2010ರ ಅವಧಿಯಲ್ಲಿ ನಿರ್ಮಾಣ ಮಾಡಿದಂಥವು. ಈ ಕಂಪನಿಗಳಿಗಾಗಿ ಮಾಡಿದ ಸಾಲ, ಹೂಡಿಕೆ ಎಲ್ಲ ಸೇರಿ 106,5 ಕೋಟಿ ರೂಪಾಯಿ ಎಂದು ಪೆಂಡೋರಾ ಪೇಪರ್​ ಉಲ್ಲೇಖ ಮಾಡಿತ್ತು. ಇದೀಗ ಇ.ಡಿ. ಬೆನ್ನುಬಿದ್ದಿರುವುದು ಇದೇ ಪೆಂಡೋರಾ ಪೇಪರ್​ ಕೇಸ್​ಗೆ ಸಂಬಂಧಪಟ್ಟಂತೆ.

ಇದನ್ನೂ ಓದಿ: Black money | ಸ್ವಿಸ್‌ ಬ್ಯಾಂಕ್‌ ಖಾತೆಯಲ್ಲಿ ಅನಿಲ್ ಅಂಬಾನಿ 814 ಕೋಟಿ ರೂ, ಐಟಿ ನೋಟಿಸ್

ಕಡಲಾಚೆ ಹೂಡಿಕೆ, ಆಸ್ತಿ ಗಳಿಕೆ ಮಾಡುವಾಗ ಅನಿಲ್ ಅಂಬಾನಿ ಭಾರತದ ವಿದೇಶಿ ವಿನಿಮಯ ನಿರ್ವಹಣೆ ಕಾಯ್ದೆ ನಿಯಮ ಉಲ್ಲಂಘಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅನಿಲ್ ಅಂಬಾನಿ ಉದ್ಯಮದಲ್ಲಿ ಅವರ ಪತ್ನಿ ಟೀನಾ ಅಂಬಾನಿಯೂ ಪಾಲುದಾರರು. ಇದೀಗ ಇ.ಡಿ. ಈ ಕೇಸ್​ಗೆ ಸಂಬಂಧಪಟ್ಟ ತನಿಖೆ ನಡೆಸುತ್ತಿದೆ. ಈಗಾಗಲೇ ನಷ್ಟ ಘೋಷಿಸಿಕೊಂಡ ಅನಿಲ್ ಅಂಬಾನಿಗೆ ಮತ್ತೀಗ ಇ.ಡಿ. ಹಿಡಿತಕ್ಕೆ ಸಿಲುಕಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್​ನಲ್ಲಿ ಅನಿಲ್ ಅಂಬಾನಿ ತೆರಿಗೆ ವಂಚನೆ ಕೇಸ್​ನಲ್ಲಿ ಸಿಲುಕಿದ್ದರು. ಸುಮಾರು 420 ಕೋಟಿ ರೂಪಾಯಿ ತೆರಿಗೆ ವಂಚನೆ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್ ಅವರಿಗೆ ತಾತ್ಕಾಲಿಕ ರಿಲೀಫ್ ನೀಡಿತ್ತು. ಅವರ ಯಾವುದೇ ಆಸ್ತಿ ಮುಟ್ಟುಗೋಲು ಹಾಕದಂತೆ ತಡೆದಿತ್ತು.

Exit mobile version