Site icon Vistara News

Electric Shock: ಮಹಾಶಿವರಾತ್ರಿ ಮೆರವಣಿಗೆಯಲ್ಲಿ ಕರೆಂಟ್‌ ಶಾಕ್‌, 14 ಮಕ್ಕಳು ಆಸ್ಪತ್ರೆಗೆ

current schok in kota rajasthan

ಹೊಸದಿಲ್ಲಿ: ಮಹಾ ಶಿವರಾತ್ರಿ (Maha Shivaratri) ಮೆರವಣಿಗೆ (Procession) ವೇಳೆ ಕರೆಂಟ್‌ ಶಾಕ್‌ (Electric Shock) ಹೊಡೆದು ಹದಿನಾಲ್ಕು ಮಕ್ಕಳು ತೀವ್ರವಾಗಿ ಅಸ್ವಸ್ಥಗೊಂಡ ಘಟನೆ (Children hospitalized) ರಾಜಸ್ಥಾನದ ಕೋಟಾದಲ್ಲಿ ನಡೆದಿದೆ. ಇವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ರಾಜ್ಯ ಆರೋಗ್ಯ ಸಚಿವ ಹೀರಾಲಾಲ್ ನಗರ್ ತಿಳಿಸಿದ್ದಾರೆ.

ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆಸ್ಪತ್ರೆಯ ಕೆಲವು ದೃಶ್ಯಗಳ ವಿಡಿಯೋ ದೊರೆತಿದ್ದು, ಕೆಲವು ಮಕ್ಕಳನ್ನು ತುರ್ತು ಚಿಕಿತ್ಸೆ ಕೋಣೆಗೆ ಒಯ್ಯುತ್ತಿರುವುದನ್ನು ತೋರಿಸಿವೆ.

“ಇದೊಂದು ಅತ್ಯಂತ ದುಃಖಕರ ಘಟನೆ. ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದು, ಒಬ್ಬರಿಗೆ ಶೇಕಡಾ 100ರಷ್ಟು ಸುಟ್ಟ ಗಾಯಗಳಾಗಿವೆ. ಸಾಧ್ಯವಿರುವ ಎಲ್ಲ ಚಿಕಿತ್ಸೆ ನೀಡಲು ವಿಶೇಷ ತಂಡವನ್ನು ರಚಿಸಲಾಗಿದೆ. ಯಾವುದೇ ರೀತಿಯ ನಿರ್ಲಕ್ಷ್ಯ ಕಂಡುಬಂದಲ್ಲಿ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ” ಎಂದು ನಗರ್‌ ಹೇಳಿದ್ದಾರೆ.

ಮೂಲಗಳ ಪ್ರಕಾರ, ಮೆರವಣಿಗೆಯ ಸಂದರ್ಭದಲ್ಲಿ ಹೈ-ಟೆನ್ಷನ್ ಓವರ್‌ಹೆಡ್ ವಿದ್ಯುತ್ ತಂತಿಯು ಸಂಪರ್ಕಕ್ಕೆ ಬಂದುದೇ ವಿದ್ಯುತ್ ಆಘಾತಕ್ಕೆ ಕಾರಣವಾಗಿದೆ. ಇಬ್ಬರು ಮಕ್ಕಳು ಶೇಕಡಾ 50 ಮತ್ತು 100ರಷ್ಟು ಸುಟ್ಟಗಾಯಗಳನ್ನು ಅನುಭವಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಉಳಿದವರು ಶೇಕಡಾ 50ಕ್ಕಿಂತ ಕಡಿಮೆ ಸುಟ್ಟಗಾಯಗಳನ್ನು ಹೊಂದಿದ್ದಾರೆ.

ಇದನ್ನೂ ಓದಿ: Kota Coaching: ಆತ್ಮಹತ್ಯೆ ಆತಂಕ; ಕೋಟಾದಲ್ಲಿ 2 ತಿಂಗಳು ಪರೀಕ್ಷೆ ನಿಷೇಧಿಸಿದ ರಾಜಸ್ಥಾನ ಸರ್ಕಾರ

Exit mobile version