ಶ್ರೀನಗರ: ಭಾರತ ಜಾಗತಿಕವಾಗಿ ಮುಂಚೂಣಿಯಲ್ಲಿರುವ ರಾಷ್ಟ್ರಗಳಲ್ಲಿ ಒಂದಾಗುವತ್ತ ದಾಪುಗಾಲು ಇಡುತ್ತಿದೆಯಾದರೂ ಇಂದಿಗೂ ನಮ್ಮಲ್ಲಿನ ಹಲವು ಪ್ರದೇಶಗಳ ಹಳ್ಳಿಗಳಲ್ಲಿ ಮೂಲಭೂತ ಸೌಕರ್ಯವೂ ದೊಡ್ಡ ಸವಾಲಾಗಿದೆ. ಅದೇ ರೀತಿ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರೂ ಇನ್ನೂ ವಿದ್ಯುತ್ ಸಂಪರ್ಕ(Electricity) ಕಾಣದೆ ಕತ್ತಲಲ್ಲೇ ಇದ್ದ ಜಮ್ಮು ಮತ್ತು ಕಾಶ್ಮೀರದ ಹಳ್ಳಿಯೊಂದರ ಜನರು ಇದೀಗ ಬೆಳಕನ್ನು ಕಂಡಿದ್ದು, ಕುಣಿದು ಕುಪ್ಪಳಿಸಲಾರಂಭಿಸಿದ್ದಾರೆ.
ಇದನ್ನೂ ಓದಿ: Walking story | ಮನಾಲಿಯಿಂದ ಶ್ರೀನಗರಕ್ಕೆ ಕಾಲ್ನಡಿಗೆಯಲ್ಲಿ 3200 ಕಿಮೀ ನಡೆದ ಜೋಡಿ!
ಅನಂತ್‌ನಾಗ್ ಜಿಲ್ಲೆಯ ದೂರು ಹೆಸರಿನ ಬ್ಲಾಕ್‌ನಲ್ಲಿರುವ ತೆಥಾನ್ ಗ್ರಾಮ ವಿದ್ಯುತ್ ಸಂಪರ್ಕವನ್ನೇ ಕಂಡಿರಲಿಲ್ಲ. ಈ ಗ್ರಾಮಕ್ಕೆ ಪ್ರಧಾನ ಮಂತ್ರಿ ಅವರ ಗ್ರಾಮೀಣ ಅಭಿವೃದ್ಧಿ ಯೋಜನೆಗಳ ಅಡಿಯಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡಲಾಗಿದೆ. ಗುಡ್ಡಗಾಡು ಪ್ರದೇಶದಲ್ಲಿರುವ ಈ ಹಳ್ಳಿಯಲ್ಲಿ, 60 ಮನೆಗಳಿದ್ದು, 200 ಜನರಿದ್ದಾರೆ. ಒಟ್ಟು 95 ಕಂಬಗಳನ್ನು ನಿಲ್ಲಿಸಿ, ವಿದ್ಯುತ್ ಸಂಪರ್ಕ ನೀಡಲಾಗಿದೆ.
ಇದನ್ನೂ ಓದಿ: Earthquake In Delhi | ದೆಹಲಿ, ಜಮ್ಮು ಕಾಶ್ಮೀರದಲ್ಲಿ ಭೂಕಂಪ, ಜನರಲ್ಲಿ ಹೆಚ್ಚಿದ ಆತಂಕ
ಊರಿಗೆ ವಿದ್ಯುತ್ ಬೆಳಕು ಬಂದಾಕ್ಷಣ ಪೂರ್ತಿ ಗ್ರಾಮವೇ ಸಂತಸದಲ್ಲಿ ಮೈ ಮರೆತಿದೆ. ಆ ಖುಷಿಯನ್ನು ಹಂಚಿಕೊಂಡಿರುವ ಗ್ರಾಮಸ್ಥರಾದ ಜಫರ್ ಖಾನ್ ಅವರು, “ನನಗೀಗ 60 ವರ್ಷ. ಇದೇ ಮೊದಲನೇ ಬಾರಿಗೆ ನಾನು ವಿದ್ಯುತ್ ಬೆಳಕು ನೋಡುತ್ತಿದ್ದೇನೆ. ಇದನ್ನು ಸಾಧ್ಯ ಮಾಡಿಕೊಟ್ಟ ಅಧಿಕಾರಿಗೆ ಹಾಗೂ ವಿದ್ಯುತ್ ಇಲಾಖೆಗೆ ನನ್ನ ಧನ್ಯವಾದಗಳು. ನನ್ನ ಹಿಂದಿನ ತಲೆಮಾರಿನವರಿಗೆ ಈ ಸುಂದರ ದೃಶ್ಯಗಳನ್ನು ನೋಡುವ ಅದೃಷ್ಟವಿರಲಿಲ್ಲ. ನಾವು ನಿಜಕ್ಕೂ ಅದೃಷ್ಟವಂತರು” ಎಂದು ಹೇಳಿದ್ದಾರೆ.