ತಿರುವನಂತಪುರಂ, ಕೇರಳ: ತಾಂತ್ರಿಕ ತೊಂದರೆ ಎದುರಿಸುತ್ತಿದ್ದ ವಿಮಾನವೊಂದನ್ನು ಕೇರಳದ ರಾಜಧಾನಿ ತಿರುವನಂಥಪುರ ವಿಮಾನನಿಲ್ದಾಣಕ್ಕೆ ಡೈವರ್ಟ್ ಮಾಡಿದ ಬೆನ್ನಲ್ಲೇ, ಇಡೀ ಏರ್‌ಪೋರ್ಟ್‌ನಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದ ಘಟನೆ ಶುಕ್ರವಾರ ನಡೆಯಿತು. ಕಲ್ಲಿಕೋಟೆಯಿಂದ ದಮ್ಮಾಮ್‌ಗೆ ತೆರಳುತ್ತಿದ್ದ ವಿಮಾನದ ಹೈಡ್ರಾಲಿಕ್ ಸೋರಿಕೆ ಸಂಭವಿಸಿತು. ಇದರಿಂದಾಗಿ ಈ ವಿಮಾನವನ್ನು ತಿರುವನಂಥಪುರಂ ವಿಮಾನ ನಿಲ್ದಾಣಕ್ಕೆ ಡೈವರ್ಟ್ ಮಾಡಲಾಯಿತು. ಮಧ್ಯಾಹ್ನ 12.15ಕ್ಕೆ ಫ್ಲೈಟ್ ಏರ್‌ಪೋರ್ಟ್‌ನಲ್ಲಿ ಲ್ಯಾಂಡಿಂಗ್ ಮಾಡಿತು.
182 ಜನರು ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಐಎಕ್ಸ್ 385 ವಿಮಾನವು ಬೆಳಗ್ಗೆ ಕಲ್ಲಿಕೋಟೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟೇಕ್ ಆಫ್ ಮಾಡಿತ್ತು. ಆಗ ವಿಮಾನದ ಹಿಂಭಾಗಕ್ಕೆ ಹೊಡೆತ ಬಿದ್ದಿತ್ತು.
ಇದನ್ನೂ ಓದಿ: Spice jetನಲ್ಲಿ ಮತ್ತೆ ತಾಂತ್ರಿಕ ಸಮಸ್ಯೆ, ದಿಲ್ಲಿಯಿಂದ ದುಬೈಗೆ ಹೊರಟ ವಿಮಾನ ಕರಾಚಿಯಲ್ಲಿ ಲ್ಯಾಂಡಿಂಗ್
ಹಾನಿಗೊಳಗಾದ ವಿಮಾನದ ಭಾಗದಿಂದ ಇಂಧನವು ಅರೆಬಿಯನ್ ಸಮುದ್ರದ ಮೇಲೆ ಸೋರಿಕೆಯಾಗಲಾರಂಭಿಸಿತು. ಹಾಗಾಗಿ, ವಿಮಾನವನ್ನು ತಿರುವನಂಥಪುರಂ ಏರ್‌ಪೋರ್ಟ್‌ಗೆ ಡೈವರ್ಟ್ ಮಾಡಲಾಯಿತು ಮತ್ತು ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಲಾಯಿತು. ಈ ವೇಳೆ, ಇಡೀ ಏರ್‌ಪೋರ್ಟ್‌ನಲ್ಲಿ ಎಮರ್ಜೇನ್ಸಿ ಘೋಷಿಸಲಾಗಿತ್ತು.