Site icon Vistara News

PM Modi | ಮೋದಿ ನೀವು ಪ್ರತಿಪಕ್ಷದ ನಾಯಕರನ್ನು ಆಗಾಗ ಭೇಟಿ ಮಾಡಬೇಕು! ಪ್ರಧಾನಿಗೆ ವೆಂಕಯ್ಯ ನಾಯ್ಡು ಸಲಹೆ

Ex Vice President Venkaiah Naidu Advice to PM Modi

ನವ ದೆಹಲಿ: ದೇಶದ ನಾಯಕ ಪ್ರಧಾನಮಂತ್ರಿ ನರೇಂದ್ರ ಮೋದಿ (PM Modi)ಯವರಿಗೆ ಮಾಜಿ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರು ಸಲಹೆಯೊಂದನ್ನು ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು 2019ರ ಮೇ ತಿಂಗಳಿಂದ 2020ರ ಮೇ ತಿಂಗಳವರೆಗೆ ಮಾಡಿದ ಭಾಷಣಗಳನ್ನೆಲ್ಲ ಸೇರಿಸಿ, ಸಂಪಾದಿಸಿದ ಪುಸ್ತಕ ‘ಸಬ್​ ಕಾ ಸಾಥ್, ಸಬ್ ಕಾ ವಿಕಾಸ್​, ಸಬ್​ ಕಾ ವಿಶ್ವಾಸ್​’ನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು ನರೇಂದ್ರ ಮೋದಿಯವರನ್ನು ಹೊಗಳಿದರು. ಆರೋಗ್ಯ, ವಿದೇಶಾಂಗ ವ್ಯವಹಾರಗಳ ನೀತಿ, ತಂತ್ರಜ್ಞಾನ ಕ್ಷೇತ್ರಗಳಲ್ಲಿ ಭಾರತ ಮಾಡುತ್ತಿರುವ ಸಾಧನೆ ಮತ್ತು ವಿಶ್ವ ಮಟ್ಟದಲ್ಲಿ ಭಾರತ ಅಭಿವೃದ್ಧಿಯಾಗುತ್ತಿರುವುದಕ್ಕೆ ಪ್ರಧಾನಿ ಮೋದಿ ಕಾರಣ ಎಂದು ಹೇಳಿದರು.

ಇಷ್ಟೆಲ್ಲ ಆದ ಮೇಲೆ ವೆಂಕಯ್ಯ ನಾಯ್ಡು, ಪ್ರಧಾನಿ ಮೋದಿಯವರಿಗೆ ಒಂದು ಸಲಹೆಯನ್ನೂ ಕೊಡ ಕೊಟ್ಟಿದ್ದಾರೆ. ‘ನರೇಂದ್ರ ಮೋದಿಯವರು ಎಷ್ಟೆಲ್ಲ ಸಾಧನೆ, ಒಳ್ಳೆಯ ಕೆಲಸಗಳನ್ನು ಮಾಡಿದಾಗ್ಯೂ ಪ್ರತಿಪಕ್ಷಗಳ ನಾಯಕರು, ಒಂದು ವರ್ಗದ ಜನರಿಗೆ ಅವರ ಮೇಲೆ ಇನ್ನೂ ಅಸಮಾಧಾನ ಉಳಿದಿದೆ. ಹೀಗಾಗಿ ಪ್ರತಿಪಕ್ಷಗಳ ಪ್ರಮುಖ ನಾಯಕರನ್ನೂ ಮೋದಿಯವರು ಆಗಾಗ ಭೇಟಿಯಾಗುತ್ತಿರಬೇಕು. ಅವರೊಂದಿಗೆ ಮಾತುಕತೆ ನಡೆಸುತ್ತಿರಬೇಕು. ಹೀಗೆ ಮಾಡುವುದರಿಂದ ಕಾಲಾಂತರದಲ್ಲಿ ಪ್ರಧಾನಿ ಮೋದಿ ಮತ್ತು ಪ್ರತಿಪಕ್ಷಗಳ ಪ್ರಮುಖರ ನಡುವೆ ಇರುವ ಭಿನ್ನಾಭಿಪ್ರಾಯ ಶಮನ ಆಗಬಹುದು’ ಎಂದು ವೆಂಕಯ್ಯ ನಾಯ್ಡು ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೇರಳ ರಾಜ್ಯಪಾಲ ಮೊಹಮ್ಮದ್​ ಆರೀಫ್​ ಖಾನ್​ ಮಾತನಾಡಿ ನರೇಂದ್ರ ಮೋದಿಯವರನ್ನು ಹೊಗಳಿದರು. ತ್ರಿವಳಿ ತಲಾಖ್​​ ರದ್ದುಗೊಳಿಸಿದ್ದನ್ನು ಪ್ರಸ್ತಾಪಿಸಿ, ‘ಮುಸ್ಲಿಂ ಮಹಿಳೆಯರಿಗೆ ನ್ಯಾಯ ಒದಗಿಸುವ ಧೈರ್ಯವನ್ನು ಜವಾಹರ್​ಲಾಲ್​ ನೆಹರೂ ಮಾಡಲಿಲ್ಲ. ಆದರೆ ಪ್ರಧಾನಿ ಮೋದಿ ಅದನ್ನು ತೋರಿಸಿದರು. ತ್ರಿವಳಿ ತಲಾಖ್​ ತೆಗೆದು ಹಾಕಿದರು’ ಎಂದು ಹೇಳಿದರು.

ಇದನ್ನೂ ಓದಿ: ಪ್ರಧಾನಿ ಮೋದಿ ಬಿಹಾರ ಭೇಟಿ ವೇಳೆ ಪಿಎಫ್​ಐ ಪ್ಲ್ಯಾನ್​ ಏನಿತ್ತು? ಸತ್ಯ ಬಾಯ್ಬಿಟ್ಟ ಬಂಧಿತ ನಾಯಕ !

Exit mobile version