ಕೋಲ್ಕತ್ತ: ಪಶ್ಚಿಮ ಬಂಗಾಳದ ಪುರ್ಬಾ ಮೇದಿನಿಪುರ ಜಿಲ್ಲೆಯ ಭೂಪತಿನಗರದಲ್ಲಿರುವ ತೃಣಮೂಲ ಕಾಂಗ್ರೆಸ್ ನಾಯಕ ರಾಜಕುಮಾರ್ ಮನ್ನಾ ಎಂಬುವರ ಮನೆಯಲ್ಲಿ ಶನಿವಾರ ಮುಂಜಾನೆ ಸ್ಫೋಟ ಉಂಟಾಗಿದ್ದು, ಇದರಲ್ಲಿ ರಾಜಕುಮಾರ್ ಸೇರಿ ಮೂವರು ಮೃತಪಟ್ಟಿದ್ದಾರೆ. ಹಾಗೇ, ಇಬ್ಬರು ಗಾಯಗೊಂಡಿದ್ದಾಗಿ ವರದಿಯಾಗಿದೆ. ರಾಜ್ಕುಮಾರ್ ಅವರು ತೃಣಮೂಲ ಕಾಂಗ್ರೆಸ್ನ ಸ್ಥಳೀಯ ಅಧ್ಯಕ್ಷರಾಗಿದ್ದರು ಮತ್ತು ಬೂತ್ ಅಧ್ಯಕ್ಷರೂ ಹೌದು.
ರಾಜ್ಕುಮಾರ್ ಮನೆಯಲ್ಲಿ ಸ್ಫೋಟ ಉಂಟಾಗಿದ್ದಕ್ಕೆ ಕಾರಣ ಇನ್ನೂ ಗೊತ್ತಾಗಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತೃಣಮೂಲ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರು ಇಂದು ಇಲ್ಲಿ ಸಾರ್ವಜನಿಕ ಸಭೆ ನಡೆಸುವವರು ಇದ್ದರು. ಅದಕ್ಕೂ ಮುನ್ನವೇ ಮನೆಯಲ್ಲಿ ಸ್ಫೋಟವಾಗಿದೆ. ಯಾರಾದರೂ ಹೊರಗಿನವರು ಬಾಂಬ್ ಎಸೆದಿರುವ ಶಂಕೆಯೂ ವ್ಯಕ್ತವಾಗಿದೆ.
ಎನ್ಐಎ ತನಿಖೆಗೆ ಆಗ್ರಹಿಸಿದ ಬಿಜೆಪಿ
ತೃಣಮೂಲ ಕಾಂಗ್ರೆಸ್ ನಾಯಕನ ಮನೆಯಲ್ಲಿ ಸ್ಫೋಟವಾದ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳ (ಎನ್ಐಎ) ತನಿಖೆ ನಡೆಸಬೇಕು ಎಂದು ಬಿಜೆಪಿ ಆಗ್ರಹ ಮಾಡಿದೆ. ಬಿಜೆಪಿ ಶಾಸಕ, ಪಶ್ಚಿಮ ಬಂಗಾಳ ಪ್ರತಿಪಕ್ಷ ನಾಯಕ ಸುವೇಂದು ಅಧಿಕಾರಿ ಟ್ವೀಟ್ ಮಾಡಿ, ‘ಪುರ್ಬಾ ಮೇದಿನಿಪುರ ಜಿಲ್ಲೆಯ ಭೂಪತಿನಗರದ ಭಾಗನ್ಪುರ ಎರಡನೇ ಬ್ಲಾಕ್ನಲ್ಲಿರುವ ಟಿಎಂಸಿ ನಾಯಕನ ಮನೆಯಲ್ಲಿ ಸ್ಫೋಟವಾಗಿ, ಮೂವರು ಮೃತಪಟ್ಟು, ಇಬ್ಬರು ಗಾಯಗೊಂಡಿದ್ದಾರೆ. ಈ ಮನೆ ಟಿಎಂಸಿ ನಾಯಕ ರಾಜ್ಕುಮಾರ್ ಮನ್ನಾರದ್ದು. ಅವರು ಮನೆಯಲ್ಲೇ ಬಾಂಬ್ ತಯಾರಿಕೆ ಮಾಡುತ್ತಿದ್ದರು. ಅದೇ ಬಾಂಬ್ ಈಗ ಸ್ಫೋಟವಾಗಿದೆ. ಎನ್ಐಎ ತನಿಖೆ ಆಗಲೇಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಪಶ್ಚಿಮ ಬಂಗಾಳ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ತರುವ ಫೋಟೋಗಳು ವೈರಲ್