Site icon Vistara News

Fact Check: ಪ್ರಧಾನಿ ಮೋದಿ ಮುಸ್ಲಿಮರ ಟೋಪಿ ಧರಿಸಿದ್ದು ನಿಜವೇ? ಇಲ್ಲಿದೆ ನೋಡಿ ವೈರಲ್ ಫೋಟೋದ ಅಸಲಿಯತ್ತು

#image_title

ಮುಂಬೈ: ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 10ರಂದು ಮಹಾರಾಷ್ಟ್ರದ ಮುಂಬೈನಲ್ಲಿ ಅಲ್ಜಮಿಯಾ-ತುಸ್-ಸೈಫಿಯಾ ಅರೇಬಿಕ್ ಅಕಾಡೆಮಿಯನ್ನು ಉದ್ಘಾಟಿಸಿದ್ದರು. ಈ ಕಾರ್ಯಕ್ರಮದಲ್ಲಿ ಮೋದಿ ಅವರು ಮುಸ್ಲಿಂ ಧರ್ಮದ ಬಿಳಿ ಟೋಪಿಯನ್ನು ಧರಿಸಿದ್ದರು ಎನ್ನುವಂತಹ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ನಿಜಕ್ಕೂ ಪ್ರಧಾನಿಯವರು ಟೋಪಿ ಧರಿಸಿದ್ದರೆ ಎನ್ನುವ ಅಂಶ ಫ್ಯಾಕ್ಟ್ ಚೆಕ್‌ನಿಂದ (Fact Check) ಹೊರಬಿದ್ದಿದೆ.

ಇದನ್ನೂ ಓದಿ: Ritesh Agarwal: ನರೇಂದ್ರ ಮೋದಿಗೆ ಮದುವೆ ಆಮಂತ್ರಣ ನೀಡಿದ OYO ಸಂಸ್ಥಾಪಕ ರಿತೇಶ್‌ ಅಗರ್ವಾಲ್‌‌

ಪ್ರಧಾನಿ ಅವರು ಟೋಪಿ ಧರಿಸಿರುವ ಎರಡು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಅದರಲ್ಲಿ ಒಂದರಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರೂ ಮೋದಿ ಅವರೊಂದಿಗಿರುವುದನ್ನು ಕಾಣಬಹುದು. ಈ ಫೋಟೋಗಳನ್ನು ಇಟ್ಟುಕೊಂಡು ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಧಾನಿ ಅವರ ವಿರುದ್ಧ ಟೀಕೆಗಳನ್ನೂ ಆರಂಭಿಸಿದ್ದರು.

ಈ ವೈರಲ್ ಫೋಟೋಗಳ ಕುರಿತಾಗಿ ಒನ್ ಒಂಡಿಯಾ ಸಂಸ್ಥೆ ಫ್ಯಾಕ್ಟ್ ಚೆಕ್ ಮಾಡಿದೆ. ಕಾರ್ಯಕ್ರಮದ ಎಲ್ಲ ಮೂಲ ಫೋಟೋಗಳನ್ನು ಪರಿಶೀಲನೆ ಮಾಡಲಾಗಿದ್ದು, ಅದರಲ್ಲಿ ಎಲ್ಲಿಯೂ ಮೋದಿ ಅವರು ಟೋಪಿ ಧರಿಸಿರುವುದು ಕಂಡುಬಂದಿಲ್ಲ. ಬೇಕೆಂದಲೇ ಕಿಡಿಗೇಡಿಗಳು ಈ ರೀತಿ ಟೋಪಿಯನ್ನು ಮೋದಿ ಅವರ ಫೋಟೋಕ್ಕೆ ಎಡಿಟ್ ಮಾಡಿದ್ದಾರೆ ಎನ್ನುವ ಸತ್ಯಾಂಶ ಫ್ಯಾಕ್ಟ್ ಚೆಕ್ ಇಂದಾಗಿ ತಿಳಿದುಬಂದಿದೆ.

Exit mobile version