Site icon Vistara News

Maharashtra Cabinet | ಫಡ್ನವಿಸ್‌ಗೆ ಗೃಹ, ನಗರಾಭಿವೃದ್ಧಿ ಖಾತೆ ಉಳಿಸಿಕೊಂಡ ಶಿಂಧೆ

Shinde Fadnavis

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಅವರು ಖಾತೆ (Maharashtra Cabinet) ಹಂಚಿಕೆ ಮಾಡಿದ್ದು, ನಿರೀಕ್ಷೆಯಂತೆಯೇ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ (Devendra Fadnavis) ಅವರಿಗೆ ಗೃಹ ಖಾತೆ ನೀಡಲಾಗಿದೆ. ನಗರಾಭಿವೃದ್ಧಿ ಹಾಗೂ ಪರಿಸರ ಖಾತೆಯನ್ನು ಏಕನಾಥ್‌ ಶಿಂಧೆ ಉಳಿಸಿಕೊಂಡಿದ್ದಾರೆ.

ಮಹಾ ವಿಕಾಸ ಅಘಾಡಿ ಸರಕಾರದಲ್ಲಿ ಪರಿಸರ ಖಾತೆಯನ್ನು ಉದ್ಧವ್‌ ಠಾಕ್ರೆ ಪುತ್ರ ಆದಿತ್ಯ ಠಾಕ್ರೆ ಅವರಿಗೆ ನೀಡಲಾಗಿತ್ತು. ಮತ್ತೊಂದೆಡೆ, ದೇವೇಂದ್ರ ಫಡ್ನವಿಸ್‌ ಅವರಿಗೆ ಗೃಹ ಖಾತೆ ಜತೆಗೆ ಹಣಕಾಸು ಖಾತೆಯನ್ನೂ ನೀಡಲಾಗಿದೆ. ಉಪ ಮುಖ್ಯಮಂತ್ರಿ ಅವರಿಗೆ ಗೃಹ ಖಾತೆ ನೀಡಲಾಗುತ್ತದೆ ಎಂದು ಮೊದಲೇ ಅಂದಾಜಿಸಲಾಗಿತ್ತು. ಈಗ ಮತ್ತೊಂದು ಪ್ರಮುಖ ಖಾತೆಯೂ ಬಿಜೆಪಿ ನಾಯಕನಿಗೆ ಲಭಿಸಿದೆ.

ಬಿಜೆಪಿಯ ಸುಧೀರ್ ಮುಂಗಾಟಿವಾರ್‌ ಅವರಿಗೆ ಅರಣ್ಯ, ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಚಂದ್ರಕಾಂತ್‌ ಪಾಟೀಲ್‌ ಅವರಿಗೆ ಉನ್ನತ ಹಾಗೂ ತಾಂತ್ರಿಕ ಶಿಕ್ಷಣ ಖಾತೆ ನೀಡಲಾಗಿದೆ. ಆಗಸ್ಟ್‌ ೯ರಂದು ಶಿಂಧೆ ಅವರು ಸಂಪುಟ ವಿಸ್ತರಣೆ ಮಾಡಿದ್ದರು. ಬಿಜೆಪಿಯ ೯ ಹಾಗೂ ಶಿವಸೇನೆಯ ೯ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಮಹಾ ವಿಕಾಸ ಅಘಾಡಿ ಸರಕಾರವನ್ನು ಪತನಗೊಳಿಸಿ ಏಕನಾಥ್‌ ಶಿಂಧೆ ಮುಖ್ಯಮಂತ್ರಿಯಾಗಿ, ದೇವೇಂದ್ರ ಫಡ್ನವಿಸ್‌ ಉಪ ಮುಖ್ಯಮಂತ್ರಿಯಾಗಿ ಜೂನ್‌ ೩೦ರಂದು ಪ್ರಮಾಣವಚನ ಸ್ವೀಕರಿಸಿದ್ದರು.

ಇದನ್ನೂ ಓದಿ | Maharashtra Cabinet Expansion | ಏಕನಾಥ ಶಿಂಧೆ ಸಂಪುಟ ಸೇರಿದ 18 ಸಚಿವರು; 9+9 ಸೂತ್ರ

Exit mobile version