Site icon Vistara News

PM Narendra Modi | ಸಿನಿಮಾಗಳ ವಿರುದ್ದ ಅನಗತ್ಯ ಟೀಕೆ! ಪಿಎಂ ಮೋದಿ ಮಾತುಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಚಿತ್ರೋದ್ಯಮ

PM Narendra Modi

ನವದೆಹಲಿ: ಸಿನಿಮಾಗಳು ಮತ್ತು ನಟ-ನಟಿಯರ ಕುರಿತು ಅನಗತ್ಯ ಟೀಕೆ ಮಾಡಲು ಹೋಗಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ಕಾರ್ಯಕರ್ತರು, ನಾಯಕರಿಗೆ ಕಿವಿಮಾತು ಹೇಳಿದ್ದಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ವಿಶೇಷವಾಗಿ, ಚಿತ್ರರಂಗದ ಅನೇಕ ಸಂಘಟನೆಗಳು, ಮೋದಿ ಮಾತಿನಿಂದ ವಿಶ್ವಾಸ ಹೆಚ್ಚಾಗಿದೆ ಎಂದು ಅಭಿಪ್ರಾಯಪಟ್ಟಿವೆ.

ಇಂಡಿಯಾ ಫಿಲ್ಮ್ ಆ್ಯಂಡ್ ಟೆಲಿವಿಷನ್ ಡೈರೆಕ್ಟರ್ಸ್ ಅಸೋಶಿಯೇಷನ್(IFTDA) ಅಧ್ಯಕ್ಷ ಹಾಗೂ ಚಿತ್ರಕರ್ಮಿ ಅಶೋಕ್ ಪಂಡಿತ್ ಅವರು, ಪ್ರಧಾನಿ ಮೋದಿ ಅವರು ಮಾತುಗಳು ಹಿಂದಿ ಚಿತ್ರರಂಗದ ವಿಶ್ವಾಸವನ್ನು ಇಮ್ಮಡಿಗೊಳಿಸಿದೆ ಎಂದು ತಿಳಿಸಿದ್ದಾರೆ.

ಮೋದಿ ಅವರು ಹೆಚ್ಚಿನ ಕಾಳಜಿಯನ್ನು ತೋರಿಸಿದ್ದಾರೆ. ಪ್ರಧಾನಿ ಅವರು ತಮ್ಮ ಜನರನ್ನೇ ನಿರ್ಲಕ್ಷ್ಯ ಮಾಡಿ, ಬಾಯಿ ಮುಚ್ಚಿಸುವ ಮಾತನ್ನಾಡಿದ್ದಾರೆ. ಅಲ್ಲದೇ, ಚಿತ್ರೋದ್ಯಮದ ವಿರುದ್ಧ ಅನಗತ್ಯ ಟೀಕೆ ಮಾಡಬೇಡಿ ಎಂದು ಹೇಳಿದ್ದಾರೆ. ವಾಸ್ತವದಲ್ಲಿ ಈ ವಿಷಯವು ಅವರಿಗೆ ಸಂಬಂಧಸಿದ್ದಲ್ಲ. ಹಾಗಿದ್ದೂ, ಅವರು ಕಿವಿಮಾತು ಹೇಳಿದ್ದಾರೆ. ಇದರಿಂದ ಚಿತ್ರೋದ್ಯಮಕ್ಕೆ ಬಲ ಬಂದಿದೆ. ಮೋದಿ ಅವರ ಈ ಸಂದೇಶವು ರಾಜಕಾರಣಿಗಳಿಗೆ ಮಾತ್ರವಲ್ಲದೇ, ಮಾಧ್ಯಮ ಮತ್ತು ಚಿತ್ರೋದ್ಯಮದ ಮಂದಿಗೆ ತಲುಪಲಿದೆ ಎಂದು ಹೇಳಿದ್ದಾರೆ.

ಫೆಡರೇಷನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯ್(FWICE) ಅಧ್ಯಕ್ಷ ಬಿ ಎನ್ ತಿವಾರಿ ಅವರೂ ಮೋದಿ ಅವರ ಮಾತುಗಳನ್ನು ಸ್ವಾಗತಿಸಿದ್ದಾರೆ.

ಇದನ್ನೂ ಓದಿ | PM Narendra Modi | ಸಿನಿಮಾಗಳ ವಿರುದ್ಧ ಅನಗತ್ಯ ಟೀಕೆ ಬೇಡ: ಬಿಜೆಪಿ ಕಾರ್ಯಕರ್ತರು, ನಾಯಕರಿಗೆ ಮೋದಿ ಕಿವಿಮಾತು

Exit mobile version