ದೆಹಲಿ: ದಕ್ಷಿಣ ದೆಹಲಿಯ ಟ್ರಾಫಿಕ್ ಸಿಗ್ನಲ್‌ನಲ್ಲಿ ಮೋಟಾರ್‌ಸೈಕಲ್ (Bike Accident) ಹಾಗೂ ಬೈಕ್ ಡಿಕ್ಕಿ ಹೊಡೆದು ಸಾಕ್ಷ್ಯಚಿತ್ರ ನಿರ್ಮಾಪಕ ಪಿಯೂಷ್ ಪಾಲ್ (30) ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ. ಅವರು ಗಾಯಗೊಂಡ ನಂತರ ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗಿದೇ ಮೃತಪಟ್ಟಿರುವುದಾಗಿ ಪೊಲೀಸರು ಹೇಳಿಕೆ ನೀಡಿದ್ದಾರೆ.
ಅಕ್ಟೋಬರ್ 28ರಂದು ರಾತ್ರಿ 10 ಗಂಟೆ ಸುಮಾರಿಗೆ ಅಪಘಾತ ನಡೆದಿದ್ದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪಂಚಶೀಲ್ ಎನ್‌ಕ್ಲೇವ್ ಬಳಿಯ ಜನನಿಬಿಡ ರಸ್ತೆಯಲ್ಲಿ ಚಲನಚಿತ್ರ ನಿರ್ಮಾಪಕರ ಮೋಟಾರ್‌ಸೈಕಲ್ ಲೇನ್ ಬದಲಾಯಿಸುವುದನ್ನು ವೀಡಿಯೊ ತೋರಿಸುತ್ತದೆ. ಆಗ ಹಿಂದೆ ಬರುವ ಮತ್ತೊಂದು ಬೈಕಿಗೆ ಡಿಕ್ಕಿ ಹೊಡೆದಿದೆ. ಬೈಕ್‌ಗಳು ಡಿಕ್ಕಿಯಾಗುತ್ತಿದ್ದಂತೆ, ಚಲನಚಿತ್ರ ನಿರ್ಮಾಪಕರು ಮೋಟಾರ್‌ಸೈಕಲ್ ಸ್ಕಿಡ್ ಆಗಿ ದೂರದಲ್ಲಿ ಬಿದ್ದಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದರುವ ಪಿಯೂಷ್ ಪಾಲ್ ಅವರನ್ನು ಆಸ್ಪತ್ರೆಗೆ ಸಾಗಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪಾಲ್ ಗುರುಗ್ರಾಮ್‌ನಲ್ಲಿ ಚಲನಚಿತ್ರ ನಿರ್ಮಾಪಕರಾಗಿ ಕೆಲಸ ಮಾಡಿದರು. ದಕ್ಷಿಣ ದೆಹಲಿಯ ಕಲ್ಕಾಜಿಯಲ್ಲಿ ವಾಸಿಸುತ್ತಿದ್ದರು.
ಇದನ್ನೂ ಓದಿ: ಮಗುವಿಗೆ ಅಪರೂಪದ ಕಾಯಿಲೆ; ಇಂಜೆಕ್ಷನ್‌ಗೆ ಆಮದು ಸುಂಕ ವಿನಾಯಿತಿ ನೀಡಲು ಮೋದಿಗೆ ಸಿಎಂ ಮನವಿ
ಅಲ್ಲೇ ನೆರದಿದ್ದ ಜನರು ತಕ್ಷಣ ಸಹಾಯ ಮಾಡಿದರೆ ಅವರ ಜೀವ ಉಳಿಸಬಹುದಿತ್ತು ಎಂದು ಚಿತ್ರ ನಿರ್ಮಾಪಕರ ಸ್ನೇಹಿತ ಹೇಳಿಕೊಂಡಿದ್ದಾರೆ. ಅವರು ಬಿದ್ದಾಗ ಸಹಾಯ ಮಾಡಲು ಯಾರೂ ಮುಂದಾಗಲಿಲ್ಲ ಎಂದು ಅವರು ಆರೋಪಿಸಿದ್ದಾರೆ. ಕೇವಲ ಫೋಟೊ ಕ್ಲಿಕ್ಕಿಸಲು ಜನರು ಅವರ ಸುತ್ತಲೂ ಜಮಾಯಿಸಿದ್ದರು. 20 ನಿಮಿಷಗಳ ಕಾಲ ರಸ್ತೆಯ ಬದಿಯಲ್ಲಿ ರಕ್ತದ ಮುಡುವಿನಲ್ಲೇ ಇದ್ದರು. ಅವರ ಮೊಬೈಲ್ ಫೋನ್ ಮತ್ತು ಗೋ-ಪ್ರೊ ಕ್ಯಾಮೆರಾವನ್ನು ಸಹ ಜನ ಕಳವು ಮಾಡಿರುವುದಾಗಿ ಆರೋಪಿಸಿದ್ದಾರೆ.
ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ಬೈಕ್ ಸವಾರನ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ