Site icon Vistara News

Fire Engulfs: ಮೂರಂತಸ್ತಿನ ಕಟ್ಟಡಕ್ಕೆ ಬೆಂಕಿ; ಮಹಿಳೆ ಸೇರಿ ನಾಲ್ವರು ಸಜೀವ ದಹನ

Firefighters In Building

ಉತ್ತರ ಪ್ರದೇಶದ ಝಾನ್ಸಿಯ ಸಿಪ್ರಿ ಭಜಾರ್​​ನಲ್ಲಿರುವ ಎಲೆಕ್ಟ್ರಾನಿಕ್ಸ್ ಶೋರೂಮ್​​ಗೆ ಬೆಂಕಿ ಬಿದ್ದು (Fire Engulfs), ಮಹಿಳೆ ಸೇರಿ ನಾಲ್ವರು ಸಜೀವ ದಹನಗೊಂಡಿದ್ದಾರೆ. ಸೋಮವಾರ ತಡರಾತ್ರಿ ಈ ಭೀಕರ ಘಟನೆ ನಡೆದಿದೆ. ಇದು ಮೂರು ಅಂತಸ್ತಿನ ಕಟ್ಟಡವಾಗಿದ್ದು, ಎಲೆಕ್ಟ್ರಾನಿಕ್​ ವಸ್ತುಗಳು ಮತ್ತು ಕ್ರೀಡಾ ಸಾಮಗ್ರಿಗಳ ಶಾಪ್​ ಇಲ್ಲಿದ್ದವು. ಸೋಮವಾರ ತಡರಾತ್ರಿ ಬೆಂಕಿ ಹೊತ್ತಿ ಉರಿದಿದೆ. ಇಡೀ ಕಟ್ಟಡ ಬೆಂಕಿಗಾಹುತಿಯಾಗಿದೆ. ಈ ಕಟ್ಟಡದಲ್ಲಿದ್ದ ಜನರನ್ನು ರಕ್ಷಿಸುವ ಕಾರ್ಯಾಚರಣೆ ಸುಮಾರು 10 ತಾಸುಗಳ ಕಾಲ ನಡೆಯಿತು. ಹಲವರು ಗಾಯಗೊಂಡಿದ್ದಾರೆ. ಸದ್ಯ ನಾಲ್ವರ ಶವ ಸಿಕ್ಕಿದ್ದು, ಇನ್ನಷ್ಟು ಮೃತದೇಹಗಳು ಪತ್ತೆಯಾಗುವ ಸಾಧ್ಯತೆಯೂ ಇದೆ.

ಕಟ್ಟಡಕ್ಕೆ ಬೆಂಕಿ ಬೀಳುತ್ತಿದ್ದಂತೆ ಪೊಲೀಸರು ಮತ್ತು ಅಗ್ನಿಶಾಮಕ ದಳದವರಿಗೆ ಕರೆ ಮಾಡಲಾಯಿತು. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು. ಅಷ್ಟರಲ್ಲಿ ಮೂರು ಜನರ ಮೃತದೇಹ ಪತ್ತೆಯಾಗಿತ್ತು. ಹಾಗೇ, ಈ ಎಲೆಕ್ಟ್ರಾನಿಕ್ಸ್ ಶೋ ರೂಮ್​ನಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿದ್ದ ಮಹಿಳೆ ಪೂರ್ತಿಯಾಗಿ ಬೆಂದು ಹೋದ ಸ್ಥಿತಿಯಲ್ಲಿ ಸಿಕ್ಕಿದ್ದರು. ಸಣ್ಣಗೆ ಉಸಿರಾಡುತ್ತಿದ್ದರು. ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಬದುಕುಳಿದಿಲ್ಲ.

ಇದನ್ನೂ ಓದಿ: ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಭಾರತೀಯ ದೂತವಾಸ ಕಚೇರಿಗೆ ಬೆಂಕಿ; 5 ತಿಂಗಳಲ್ಲಿ 2ನೇ ಬಾರಿ ಖಲಿಸ್ತಾನಿಗಳ ದಾಳಿ

ಶೋರೂಮ್​​ನಲ್ಲಿ ಇಷ್ಟು ದೊಡ್ಡಮಟ್ಟದಲ್ಲಿ ಬೆಂಕಿ ಹೊತ್ತಿ ಉರಿಯಲು ಕಾರಣವೇನು ಎಂಬುದು ಇನ್ನೂ ಗೊತ್ತಾಗಿಲ್ಲ. ಕಟ್ಟಡದ ಬಳಿ ಇನ್ನೂ ಪೊಲೀಸರು ಇದ್ದಾರೆ. ಬಹುತೇಕ ಎಲ್ಲ ಸಾಮಗ್ರಿಗಳೂ ಸುಟ್ಟುಕರಕಲಾಗಿವೆ. ಅಲ್ಲಿ ಹುಡುಕಾಟ ನಡೆಯುತ್ತಿದೆ. ಇನ್ನೊಮ್ಮೆ ಇಡೀ ಕಟ್ಟಡವನ್ನು ಪರಿಶೀಲನೆ ಮಾಡಲಾಗುವುದು ಎಂದು ಝಾನ್ಸಿ ಪೊಲೀಸ್ ಅಧಿಕಾರಿ ರಾಜೇಶ್ ಎಸ್. ತಿಳಿಸಿದ್ದಾರೆ.

ಕಳೆದ ತಿಂಗಳ ಗುಜರಾತ್​​ನ ರಾಜಕೋಟ್​​ನಲ್ಲಿರುವ ಗಾಲಾ ಗ್ರಾಮದ ಬಳಿಯ ಮೋರ್ಬಿ ಮಲಿಯಾ ಹೈವೇದಲ್ಲಿರುವ ಸಿಲಿಂಡರ್​ ಗೋದಾಮು ಸಂಪೂರ್ಣ ಸುಟ್ಟು ಬೂದಿಯಾಗಿತ್ತು. ಈ ಭಯಾನಕ ಬೆಂಕಿಯಿಂದ ಯಾರ ಜೀವವೂ ಹೋಗಿರಲಿಲ್ಲ. ಆದರೆ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸಂಪೂರ್ಣ ನಾಶವಾಗಿದ್ದವು.

Exit mobile version