ಮುಂಬೈ: ಸೈಬರ್ ಭಯೋತ್ಪಾದನೆ ಪ್ರಕರಣದಲ್ಲಿ (Cyberterrorism Conviction) ಆರೋಪಿಗೆ ದೇಶದಲ್ಲೇ ಮೊದಲ ಬಾರಿಗೆ ಶಿಕ್ಷೆಗೆ ಗುರಿಪಡಿಸಲಾಗಿದೆ. ಮುಂಬೈನ ಬಾಂದ್ರಾ ಕುರ್ಲಾದಲ್ಲಿರುವ ಅಮೆರಿಕನ್ ಸ್ಕೂಲ್‌ನಲ್ಲಿರುವ ಮಕ್ಕಳನ್ನು ಕೊಲ್ಲು ಸಂಚುರೂಪಿಸಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅನೀಸ್ ಅನ್ಸಾರಿ ಎಂಬ ಕಂಪ್ಯೂಟರ್ ಎಂಜಿನಿಯರ್ ಸೈಬರ್ ಟೆರರಿಸಮ್ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾದ ಮೊದಲ ಅಪರಾಧಿಯಾಗಿದ್ದಾರೆ.
32 ವರ್ಷದ ಅನೀಸ್ ಅನ್ಸಾರಿ ಥರ್ಮೈಟ್ ಬಾಂಬ್ ಬಳಸಿ ಮಕ್ಕಳನ್ನು ಕೊಲ್ಲಲು ಸಂಚು ರೂಪಿಸಿ, ಸಿಕ್ಕಿ ಬಿದ್ದಿದ್ದ. ಆತ 2014 ಅಕ್ಟೋಬರ್ ತಿಂಗಳಿನಿಂದಲೂ ಜೈಲಿನಲ್ಲಿದ್ದಾನೆ.
ಇನ್ಫಾರ್ಮೇಶನ್ ಟೆಕ್ನಾಲಜಿ ಕಾಯ್ದೆಯ 66(ಎಫ್) ಸೆಕ್ಷನ್ ಅಡಿ ಅನೀಸ್ ಅನ್ಸಾರಿಯನ್ನು ದೋಷಿ ಎಂದು ಸ್ಥಳೀಯ ಕೋರ್ಟ್ ಘೋಷಿಸಿದೆ. ನ್ಯಾಯಾಧೀಶ ಎ ಎ ಜೋಗಳೆಕರ್ ಅವರು ನಿಷೇಧಿತ ಐಎಸ್ ಸಂಘಟನೆ ಬೋಧಿಸುವ ಉಗ್ರತ್ವದ ಆಧಾರದ ಮೇಲೆಯೇ ಭಯೋತ್ಪಾದನೆಯನ್ನು ನಡೆಸುವ ಸಂಚು ರೂಪಿಸಿದ್ದ ಸಾಬೀತಾಗಿದೆ ಎಂದು ತಮ್ಮ ತೀರ್ಪಿನಲ್ಲಿ ತಿಳಿಸಿದ್ದಾರೆ.
ನಿಷೇಧಿತ ಐಎಸ್ ಸಂಘಟನೆಯ ಉಮರ್ ಇಲ್ಹಾಜ್ ಜತೆ ನಿರಂತರವಾಗಿ ಅಪರಾಧಿ ಅನೀಸ್ ಅನ್ಸಾರಿ ಸಂಪರ್ಕದಲ್ಲಿದ್ದ. ಐಎಸ್‌ನ ಸಿದ್ದಾಂತ, ಅಪಾಯಕಾರಿ ಮೇಸೆಜ್‌ಗಳನ್ನು ಆತ ಕಳುಹಿಸತ್ತಿದ್ದ. ಆ ಮೂಲಕ, ಅನ್ಸಾರಿ ಭಾರತದ ಸಾರ್ವಭೌಮ ಮತ್ತು ಏಕತೆಗೆ ಭಂಗ ತರುವ ಉದ್ದೇಶವನ್ನು ಹೊಂದಿದ್ದ. ಇದಕ್ಕಾಗಿ ಆತ ತನ್ನ ಕಂಪನಿಯ ಕಂಪ್ಯೂಟರ್‌ಗಳನ್ನು ಅನಧಿಕೃತಾಗಿ ಬಳಸಿಕೊಳ್ಳುತ್ತಿದ್ದ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ | ಇಮ್ರಾನ್ ವಿರುದ್ಧ ಭಯೋತ್ಪಾದನೆ ವಿರೋಧಿ ಕಾನೂನಿನಡಿ ಕೇಸ್, ಬಂಧನ ಸಾಧ್ಯತೆ