ರಾಂಚಿ: ಜಾರ್ಖಂಡ್ನ ಧನ್ಬಾದ್ನಲ್ಲಿ ಖಾಸಗಿ ನರ್ಸಿಂಗ್ ಹೋಮ್ಗೆ ಬೆಂಕಿ ಬಿದ್ದು, ಇಬ್ಬರು ವೈದ್ಯರು ಸೇರಿ, ಐವರು ಮೃತಪಟ್ಟಿದ್ದಾರೆ. ಇಂದು ಮುಂಜಾನೆ ಈ ಬೆಂಕಿ ಅವಘಡ ನಡೆದಿದ್ದು, ಘಟನೆಯಲ್ಲಿ ನರ್ಸಿಂಗ್ ಹೋಮ್ನ ಮಾಲೀಕ ಡಾ.ವಿಕಾಸ್ ಹಾಜ್ರಾ, ಆಕೆಯ ಪತ್ನಿ ಡಾ. ಪ್ರೇಮಾ ಹಾಜ್ರಾ, ಅವರ ಸಂಬಂಧಿ ಸೋಹನ್ ಕುಮಾರಿ ಮತ್ತು ಕೆಲಸದಾಕೆ ತಾರಾ ದೇವಿ ಮೃತಪಟ್ಟಿದ್ದಾರೆ. ಇನ್ನೊಬ್ಬರ ಗುರುತು ಪತ್ತೆಯಾಗಿಲ್ಲ ಎಂದು ಧನ್ಬಾದ್ ಜಿಲ್ಲಾಧಿಕಾರಿ ಪ್ರೇಮ್ ಕುಮಾರ್ ತಿವಾರಿ ತಿಳಿಸಿದ್ದಾರೆ.
ಮನೆ ಮತ್ತು ಆಸ್ಪತ್ರೆ ಒಟ್ಟಿಗೇ ಇರುವ ನರ್ಸಿಂಗ್ ಹೋಂ ಇದಾಗಿದೆ. ಮನೆಯ ಸ್ಟೋರ್ ರೂಮ್ನಲ್ಲಿ ತಡರಾತ್ರಿ 2 ಗಂಟೆ ಹೊತ್ತಿಗೆ ಬೆಂಕಿ ಕಾಣಿಸಿಕೊಂಡಿದ್ದು, ನಿಖರ ಕಾರಣ ತಿಳಿದುಬಂದಿಲ್ಲ. ಡಾ.ವಿಕಾಸ್ ಹಾಜ್ರಾ, ಆಕೆಯ ಪತ್ನಿ ಡಾ. ಪ್ರೇಮಾ ಹಾಜ್ರಾ ಉಸಿರುಗಟ್ಟಿ ಮೃತಪಟ್ಟಿದ್ದರೆ, ಉಳಿದ ಮೂವರು ಬೆಂಕಿಯಿಂದಾದ ಸುಟ್ಟಗಾಯಗಳಿಂದ ಸಾವನ್ನಪ್ಪಿದ್ದಾರೆ. ಅಗ್ನಿಶಾಮಕದಳದ ಸಿಬ್ಬಂದಿ ಅಲ್ಲಿಗೆ ಧಾವಿಸಿ ಬೆಂಕಿ ನಂದಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.