Site icon Vistara News

Exit Poll Results 2023: ಪಂಚ ರಾಜ್ಯ ಚುನಾವಣೆ ಮುಕ್ತಾಯ; ಕೆಲವೇ ಕ್ಷಣಗಳಲ್ಲಿ ಮತಗಟ್ಟೆ ಸಮೀಕ್ಷೆ

Assembly Election Results 2023 Live

Election Results 2023: How Is The Political Scenario In Four States? Who Will Win?

ನವದೆಹಲಿ: 2024ರ ಲೋಕಸಭೆ ಚುನಾವಣೆ ದೃಷ್ಟಿಯಿಂದ ಮಹತ್ವ ಪಡೆದಿರುವ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯು (Assembly Elections 2023) ಮುಕ್ತಾಯಗೊಂಡಿದೆ. ತೆಲಂಗಾಣದಲ್ಲಿ ಗುರುವಾರ (ನವೆಂಬರ್‌ 30) ಸಂಜೆ ಮತದಾನ ಮುಗಿಯುವುದರೊಂದಿಗೆ ಐದೂ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ಮುಕ್ತಾಯವಾದಂತಾಗಿದೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಪಂಚ ರಾಜ್ಯಗಳ ಮತಗಟ್ಟೆ ಸಮೀಕ್ಷೆ (Exit Poll Results 2023) ಲಭ್ಯವಾಗಲಿದ್ದು, ಯಾವ ರಾಜ್ಯದಲ್ಲಿ ಯಾವ ಪಕ್ಷಕ್ಕೆ ಮುನ್ನಡೆ ಸಿಗಲಿದೆ ಎಂಬುದರ ಅಂದಾಜು ಚಿತ್ರಣ ದೊರೆಯಲಿದೆ. ಇದಕ್ಕೂ ಮೊದಲು ಯಾವ ರಾಜ್ಯದಲ್ಲಿ ಯಾವ ಪಕ್ಷದ ರಣತಂತ್ರ ಏನಿತ್ತು? ಯಾವ ಪಕ್ಷಗಳ ಮಧ್ಯೆ ರಣಾಂಗಣ ಏರ್ಪಟ್ಟಿದೆ ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಮಧ್ಯಪ್ರದೇಶ

ಮಧ್ಯಪ್ರದೇಶದ 230 ವಿಧಾನಸಭೆ ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, ಬಹುತೇಕ ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಮಧ್ಯೆ ನೇರ ಪೈಪೋಟಿ ಇದೆ. ಅದರಲ್ಲೂ, ಕಳೆದ ಬಾರಿ ಬಿಜೆಪಿಗಿಂತ ಹೆಚ್ಚಿನ ಸ್ಥಾನ ಪಡೆದಿದ್ದ ಕಾಂಗ್ರೆಸ್‌ಅನ್ನು ಬಿಜೆಪಿ ಓವರ್‌ಟೇಕ್‌ ಮಾಡಿ ಅಧಿಕಾರ ಹಿಡಿದಿದೆ. ಈಗ ಮತ್ತೆ ಬಹುಮತ ಸಾಧಿಸಿ ಅಧಿಕಾರದ ಗದ್ದುಗೆಯೇರಲು ಕಾಂಗ್ರೆಸ್‌ ಇನ್ನಿಲ್ಲದ ರಣತಂತ್ರ ರೂಪಿಸಿದೆ. ಮತ್ತೊಂದೆಡೆ, ಕಳೆದ ಬಾರಿ ಸಾಧಿಸದ ಬಹುಮತವನ್ನು ಈ ಬಾರಿ ಸಾಧಿಸುವ ಮೂಲಕ ಮತ್ತೆ ಅಧಿಕಾರ ಹಿಡಿಯಲು ಹವಣಿಸುತ್ತಿದೆ. ಹಾಗಾಗಿ, ಈ ಬಾರಿಯ ಚುನಾವಣೆಯು ತೀವ್ರ ಹಣಾಹಣಿಯಿಂದ ಕೂಡಿದೆ. ರಾಜ್ಯದಲ್ಲಿ ಶೇ.71ರಷ್ಟು ಮತದಾನವಾಗಿದೆ.

KCR

ಒಟ್ಟು ಸ್ಥಾನ 230
ಮ್ಯಾಜಿಕ್‌ ನಂಬರ್‌ 116

ರಾಜಸ್ಥಾನ

ರಾಜಸ್ಥಾನದಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ಮಧ್ಯೆ ನೇರ ಹಣಾಹಣಿ ಇದೆ. ಅಶೋಕ್‌ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್‌ ಸರ್ಕಾರವು ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದು, ಈ ಬಾರಿಯೂ ಗೆದ್ದು ಬೀಗುವ ಉತ್ಸಾಹದಲ್ಲಿದೆ. ಮತ್ತೊಂದೆಡೆ, 2018ರಲ್ಲಿ ಅಧಿಕಾರ ಕಳೆದುಕೊಂಡಿರುವ ಬಿಜೆಪಿಯು ಈ ಬಾರಿ ಗೆದ್ದು, ಮತ್ತೆ ಅಧಿಕಾರ ಪಡೆಯಲು ಯತ್ನಿಸುತ್ತಿದೆ. ಹಾಗಾಗಿಯೇ, ಚುನಾವಣೆ ಪ್ರಚಾರದ ವೇಳೆ ಕಾಂಗ್ರೆಸ್‌ ಹಾಗೂ ಬಿಜೆಪಿಯು ಜನರಿಗೆ ಉಚಿತ ಕೊಡುಗೆಗಳ ಮಹಾಪೂರವೇ ಹರಿಸಿವೆ. ಹಾಗಾಗಿ, ಈ ಬಾರಿ ಮತದಾರನ ಒಲವು ಯಾರ ಪರ ಇದೆ ಎಂಬುದು ಕುತೂಹಲ ಕೆರಳಿಸಿದೆ. ರಾಜಸ್ಥಾನದಲ್ಲಿ ಶೇ.75ರಷ್ಟು ಮತದಾನ ನಡೆದಿದೆ.

KCR

ಒಟ್ಟು ಕ್ಷೇತ್ರ: 200
ಮ್ಯಾಜಿಕ್‌ ನಂಬರ್‌: 101

ಛತ್ತೀಸ್‌ಗಢ

ಛತ್ತೀಸ್‌ಗಢದಲ್ಲಿ ಅಧಿಕಾರ ಉಳಿಸಿಕೊಳ್ಳುವ ತವಕದಲ್ಲಿ ಕಾಂಗ್ರೆಸ್‌ ಇದ್ದರೆ, ಮರಳಿ ಗದ್ದುಗೆ ಪಡೆಯುವ ಉತ್ಸಾಹ ಬಿಜೆಪಿಯಲ್ಲಿದೆ. ಸ್ಥಳೀಯ ಪಕ್ಷಗಳು ಕೂಡ ಪೈಪೋಟಿ ನೀಡಲು ಸಜ್ಜಾಗಿವೆ. ಇದರಿಂದಾಗಿ ಛತ್ತೀಸ್‌ಗಢ ವಿಧಾನಸಭೆ ಚುನಾವಣೆ ಫಲಿತಾಂಶವು ಕುತೂಹಲ ಕೆರಳಿಸಿದೆ. ‌ಛತ್ತೀಸ್‌ಗಢದಲ್ಲಿ ಶೇ.68ರಷ್ಟು ಮತದಾನ ದಾಖಲಾಗಿದೆ.

KCR

ಒಟ್ಟು ಕ್ಷೇತ್ರ: 90
ಮ್ಯಾಜಿಕ್‌ ನಂಬರ್‌: 46

ತೆಲಂಗಾಣ

ತೆಲಂಗಾಣದಲ್ಲೂ ಸರ್ಕಾರ ರಚನೆಗೆ ಹಲವು ಕಸರತ್ತು ನಡೆಸಲಾಗಿದ್ದು, ಫಲಿತಾಂಶದತ್ತ ಎಲ್ಲರ ಗಮನ ನೆಟ್ಟಿದೆ. ತೆಲಂಗಾಣದಲ್ಲಿ ಬಿಆರ್‌ಎಸ್‌, ಕಾಂಗ್ರೆಸ್‌ ಹಾಗೂ ಬಿಜೆಪಿ ಮಧ್ಯೆ ಫೈಟ್‌ ಇದೆ. ಅತ್ತ, ಸಿಎಂ ಕೆ.ಚಂದ್ರಶೇಖರ್‌ ರಾವ್‌ ಅವರಿಗೆ ಹ್ಯಾಟ್ರಿಕ್‌ ಕನಸು ಚಿಗುರೊಡೆದಿದ್ದರೆ, ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ಮುನ್ನಡೆ ಸಾಧಿಸುವ ನಿರೀಕ್ಷೆ ಇದೆ.

KCR

ಒಟ್ಟು ಕ್ಷೇತ್ರ 119
ಮ್ಯಾಜಿಕ್‌ ನಂಬರ್‌ 60

ಇದನ್ನೂ ಓದಿ: ಪಂಚ ರಾಜ್ಯ ಚುನಾವಣೆ: ಎಷ್ಟು ಗಂಟೆಗೆ Exit Poll? ವಿಸ್ತಾರ ನ್ಯೂಸ್‌ನಲ್ಲಿ ವಿಸ್ತೃತ ಮಾಹಿತಿ ನಿರೀಕ್ಷಿಸಿ!

ಮಿಜೋರಾಂ

ಮುಖ್ಯಮಂತ್ರಿ ಜೊರಾಮ್‌ಥಂಗ ನೇತೃತ್ವದ ಮಿಜೋ ನ್ಯಾಷನಲ್‌ ಫ್ರಂಟ್‌ (MNF) ಪಕ್ಷವು ಮಿಜೋರಾಂನಲ್ಲಿ ಬಲಿಷ್ಠವಾಗಿದೆ. ಕೇಂದ್ರದಲ್ಲಿ ಮಿಜೋ ನ್ಯಾಷನಲ್‌ ಫ್ರಂಟ್‌, ಎನ್‌ಡಿಎ ಜತೆ ಕೈಜೋಡಿಸಿದರೂ ಇಲ್ಲಿ ಬಿಜೆಪಿಯ ಒಬ್ಬರೇ ಶಾಸಕರಿದ್ದಾರೆ. ಕಾಂಗ್ರೆಸ್‌ ಕೂಡ ಮೂರನೇ ಸ್ಥಾನದಲ್ಲಿದೆ. ಹಾಗಾಗಿ, ಈ ಬಾರಿ ಯಾರ ಕೈ ಮೇಲಾಗಲಿದೆ ಎಂಬ ಕುತೂಹಲ ಇದೆ. ಮಿಜೋರಾಂನದಲ್ಲಿ ಶೇ.77ರಷ್ಟು ಮತದಾನ ನಡೆದಿದೆ.

ಒಟ್ಟು ಕ್ಷೇತ್ರ: 40
ಮ್ಯಾಜಿಕ್‌ ನಂಬರ್‌: 21

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version