ನವ ದೆಹಲಿ : ಗಡಿ ಭದ್ರತಾ ಪಡೆಯ (Border Security Force) ಮಹಾನಿರ್ದೇಶಕರಾಗಿ ನಿವೃತ್ತಿ ಹೊಂದಿದ ಪಂಕಜ್ ಕುಮಾರ್ ಸಿಂಗ್ ಅವರನ್ನು ರಾಷ್ಟ್ರೀಯ ಭದ್ರತಾ ಇಲಾಖೆಯ ಸಹಾಯ ಸಲಹೆಗಾರರನ್ನಾಗಿ ನೇಮಕ ಮಾಡಲಾಗಿದೆ. ಮಾಹಿತಿ ಪ್ರಕಾರ ಎರಡು ವರ್ಷಗಳ ಗುತ್ತಿಗೆ ಆಧಾರದಲ್ಲಿ ಅವರನ್ನು ಈ ಹುದ್ದೆಗೆ ನೇಮಕ ಮಾಡಲಾಗಿದೆ.
1988ರ ರಾಜಸ್ಥಾನ ಕೇಡರ್ ಐಪಿಎಸ್ ಅಧಿಕಾರಿಯಾಗಿರುವ ಸಿಂಗ್ ಅವರು ಬಿಎಸ್ಎಫ್ ಮುಖ್ಯಸ್ಥ ಸ್ಥಾನದಿಂದ 2022ರ ಡಿಸೆಂಬರ್31ರಂದು ನಿವೃತ್ತಿ ಹೊಂದಿದ್ದರು. ಅದಕ್ಕಿಂತ ಮೊದಲು ಅವರು 2021ರ ಆಗಸ್ಟ್ 31ರಂದು ಮುಖ್ಯಸ್ಥ ಸ್ಥಾನವನ್ನು ವಹಿಸಿಕೊಂಡಿದ್ದರು. ಇದೇ ವೇಳೆ ಅವರು ತಂದೆ ಹಾಗೂ ಮಗ ಪ್ಯಾರಾಮಿಲಿಟರಿ ವಿಭಾಗದ ಅತ್ಯುನ್ನದ ಹುದ್ದೆಯನ್ನು ನಿರ್ವಹಿಸಿದ ದಾಖಲೆ ಸೃಷ್ಟಿಸಿದ್ದರು.
ಪಂಕಜ್ ಕುಮಾರ್ ಸಿಂಗ್ ಅವರ ತಂದೆ 1959ರ ಐಪಿಎಲ್ ಬ್ಯಾಚ್ನ ಪ್ರಕಾಶ್ ಸಿಂಗ್ ಅವರು 1993ರಿಂದ 1994ರವರೆಗೆ ಬಿಎಸ್ಎಫ್ನ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ದರು. ಪ್ರಕಾಶ್ ಸಿಂಗ್ ಅವರನ್ನು ಭಾರತೀಯ ಪೊಲೀಸ್ ಇಲಾಖೆಯ ಸುಧಾರಣೆಯ ಶಿಲ್ಪಿ ಎಂದೇ ಕರೆಯಲಾಗುತ್ತದೆ.
ಇದನ್ನೂ ಓದಿ | ಮಾರಕಾಸ್ತ್ರ ಹಿಡಿದು ಪಾಕಿಸ್ತಾನದಿಂದ ಭಾರತಕ್ಕೆ ನುಸುಳಿದ್ದವನ ಹತ್ಯೆಗೈದ ಬಿಎಸ್ಎಫ್; ಈ ವರ್ಷದ ಮೊದಲ ಪ್ರಕರಣ