Site icon Vistara News

Coimbatore Blast | ಕೊಯಮತ್ತೂರು ಸ್ಫೋಟ ಕೇಸಿನಲ್ಲಿ ನಾಲ್ವರ ಬಂಧನ, ಮುಬಿನ್ ಮನೆಗೆ ಕರೆದೊಯ್ದು ತನಿಖೆ

Coimbatore Blast

ನವದೆಹಲಿ: ಕೊಯಮತ್ತೂರು ಸಿಲಿಂಡರ್ ಸ್ಫೋಟ (Coimbatore Blast) ಪ್ರಕರಣಕ್ಕೆ ಸಂಬಂಧಿಸಿದ ರಾಷ್ಟ್ರೀಯ ತನಿಖಾ ಸಂಸ್ಥೆ(NIA) ನಾಲ್ವರನ್ನು ಬಂಧಿಸಿದೆ. ಸ್ಫೋಟದಲ್ಲಿ ಮೃತಪಟ್ಟ ಪ್ರಮುಖ ಆರೋಪಿ ಮುಬಿನ್ ಮನೆಗೆ ಬಂಧಿತರನ್ನು ತೆಗೆದುಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.

ಹೆಚ್ಚಿನ ವಿಚಾರಣೆಗಾಗಿ ಮತ್ತು ಸ್ಫೋಟ ಪ್ರಕರಣದ ಹಿಂದಿನ ಎಲ್ಲಾ ಲಿಂಕ್‌ಗಳನ್ನು ಪತ್ತೆಹಚ್ಚಲು ಆರೋಪಿಗಳನ್ನು ಮುಬಿನ್ ಮನೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ. ಕಳೆದ ವರ್ಷ ಸಂಭವಿಸಿದ ಈ ಸ್ಫೋಟವನ್ನು ಮೊದಲಿಗೆ ಸಿಲಿಂಡರ್ ಸ್ಫೋಟ ಎಂದು ಪರಿಗಣಿಸಲಾಗಿತ್ತು. ಆದರೆ, ವಿಚಾರಣೆ ಮುಂದುವರಿಸಿದಂತೆ, ಅದೊಂದು ಭಯೋತ್ಪಾದನಾ ಕೃತ್ಯ ಎಂಬುದು ಸಾಬೀತಾಗುತ್ತಿದ್ದಂತೆ ಎನ್ಐಎ ತನಿಖೆ ನಡೆಸುತ್ತಿದೆ.

ಈ ಸ್ಫೋಟದಲ್ಲಿ ಮೃತಪಟ್ಟ ಮುಬಿನ್ ಮನೆಯಿಂದ, ನಾಡ ಬಾಂಬ್ ತಯಾರಿಸಲು ಬೇಕಾದ ಪೊಟ್ಯಾಷಿಯಮ್ ನೈಟ್ರೇಟ್, ಅಲ್ಯುಮಿನಿಯಂ ಪುಡಿ, ಇದ್ದಿಲು ಮತ್ತು ಸಲ್ಫರ್ ಸೇರಿದ ಇನ್ನಿತರ ಕಚ್ಚಾವಸ್ತುಗಳನ್ನು ಪೊಲೀಸರು ಜಫ್ತಿ ಮಾಡಿದ್ದಾರೆ. ಸ್ಫೋಟದ ಸ್ಥಳದಿಂದಲೂ ಪೊಟ್ಯಾಷಿಯಂ ನೈಟ್ರೆಟ್, ಸಲ್ಫರ್ ಸಂಗ್ರಹಿಸಲಾಗಿತ್ತು.

ಇದನ್ನೂ ಓದಿ | Coimbatore Car Blast | ಕೊಯಮತ್ತೂರು ಸ್ಫೋಟಕ್ಕೆ ಉಗ್ರ ಲಿಂಕ್​; 45 ಪ್ರದೇಶಗಳಲ್ಲಿ ಎನ್​ಐಎ ರೇಡ್​

Exit mobile version