Site icon Vistara News

Odisha Train Accident : ಅಯ್ಯೊ ದುರ್ವಿಧಿ, ಟ್ರೈನ್ ಕೆಳಗೆ ಮಲಗಿದ್ದವರು ಅಲ್ಲೇ ಅಪ್ಪಚ್ಚಿ!

Good Train Accident

#image_title

ನವದೆಹಲಿ: ಒಡಿಶಾದ ಜಜ್ಪುರ್ ರೋಡ್ ರೈಲ್ವೆ ನಿಲ್ದಾಣದಲ್ಲಿ ಬುಧವಾರ ಗೂಡ್ಸ್ ರೈಲಿನಡಿಗೆ ಸಿಲುಕಿ ನಾಲ್ವರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ನಾಲ್ವರು ಗಂಭೀರ ಗಾಯಗೊಂಡಿದ್ದಾರೆ. ದುರದೃಷ್ಟವೆಂದರೆ ಇವರೆಲ್ಲರೂ ಕೆಲಸ ಮಾಡಿ ಸುಸ್ತಾಯಿತು ಎಂದು ನಿಂತಿದ್ದ ಗೂಡ್ಸ್​ ರೈಲಿನಡಿ ಮಲಗಿದ್ದರು. ಏಕಾಏಕಿ ಟ್ರೈನ್​ ಹೊರಟ ಕಾರಣ ಗಾಡ ನಿದ್ದೆಯಲ್ಲಿದ್ದ ನಾಲ್ವರು ಸ್ಥಳದಲ್ಲೇ ಅಪ್ಪಚ್ಚಿಯಾದರೆ, ಇನ್ನೂ ನಾಲ್ವರು ಗಾಯಗೊಂಡಿದ್ದಾರೆ. ಒಡಿಶಾದ ಬಾಲಾಸೋರ್ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ತ್ರಿವಳಿ ರೈಲು ಅಪಘಾತದಲ್ಲಿ (Odisha Train Accident) 288 ಜನರು ಮೃತಪಟ್ಟ ಘಟನೆ ನಡೆದು ನಾಲ್ಕು ದಿನಗಳ ಒಳಗೆ ಅದೇ ರಾಜ್ಯದಲ್ಲಿ ಘಟನೆ ನಡೆಸಿದೆ.

ನಿಲ್ದಾಣದಲ್ಲಿ ನಿಂತಿದ್ದ ಗೂಡ್ಸ್ ರೈಲು ಬೇಗ ಹೊರಡದು ಎಂದು ಅಂದುಕೊಂಡ ಕಾರ್ಮಿಕರು ಅದರಡಿಯಲ್ಲಿ ಮಲಗಿದ್ದರು. ಇದರ ಬಗ್ಗೆ ಅರಿವೇ ಇಲ್ಲದ ಲೋಕೋಪೈಲೆಟ್​ ಸಿಗ್ನಲ್​ ದೊರೆತ ತಕ್ಷಣ ರೈಲನ್ನು ಮುಂದಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಘಟನೆ ವಿಚಾರ ತಿಳಿದ ತಕ್ಷಣ ಸಾವಿರಾರು ಮಂದಿ ರೈಲ್ವೇ ಸ್ಟೇಷನ್​ ಬಳಿ ಜಮಾಯಿಸಿದ್ದಾರೆ. ಹೀಗಾಗಿ ರೈಲ್ವೇ ಅಧಿಕಾರಿಗಳು ಘಟನೆ ನಡೆದ ಸ್ಥಳದಲ್ಲಿ ಭದ್ರತೆಯನ್ನು ಹೆಚ್ಚಿಸಿದ್ದಾರೆ.

ಕೋರಮಂಡಲ ಎಕ್ಸ್​ಪ್ರೆಸ್​​ ಪ್ರಯಾಣ ಶುರು

ಕಳೆದ ಶುಕ್ರವಾರ ಅಪಘಾತಕ್ಕೆ ಈಡಾಗಿ ನೂರಾರು ಜನರ ಸಾವಿಗೆ ಕಾರಣವಾದ ಕೋರಮಂಡಲ ಎಕ್ಸ್​ಪ್ರೆಸ್​ ಟ್ರೈನ್​ ಮತ್ತೆ ತನ್ನ ಸಂಚಾರ ಆರಂಭಿಸಿದೆ. ಬುಧವಾರ ಮಧ್ಯಾಹ್ನ ಚೆನ್ನೈನ ಶಾಲಿಮರ್​ ಸ್ಟೇಷನ್​ನಿಂದ ಸಂಚಾರ ಶುರುಮಾಡಿತು.

ಇದನ್ನೂ ಓದಿ : Goods Train Derails: ಮಧ್ಯಪ್ರದೇಶದಲ್ಲಿ ಹಳಿ ತಪ್ಪಿದ ಎಲ್‌ಪಿಜಿ ಸಾಗಿಸುತ್ತಿದ್ದ ರೈಲು; ಯಾರನ್ನು ‘ಹಳಿ’ಯಬೇಕು?

ಕೋರಮಂಡಲ್ ಎಕ್ಸ್​ಪ್ರೆಸ್​​ ಶುಕ್ರವಾರ ಸಂಜೆ ವೇಳೆಗೆ ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿತ್ತು. ಗೂಡ್ಸ್ ರೈಲು ನಿಂತಿದ್ದ ಲೂಪ್​ಲೈನ್​ಗೆ ತಪ್ಪು ಸಿಗ್ನಲ್​ ಸಿಕ್ಕಿದ್ದರಿಂದ ಪ್ರವೇಶಿಸಿ ಗೂಡ್ಸ್​​ ರೈಲಿಗೆ ಡಿಕ್ಕಿ ಹೊಡೆದು ಹಳಿ ತಪ್ಪಿತ್ತು. ರೈಲಿನ ಬೋಗಿಗಳು ಎದುರಿನಿಂದ ಬರುತ್ತಿದ್ದ ಹೌರಾದಿಂದ ಬೆಂಗಳೂರಿಗೆ ಹೊರಟಿದ್ದ ರೈಲು ಸಂಚರಿಸುತ್ತಿದ್ದದ ಹಳಿಗೆ ಬಿದ್ದ ಕಾರಣ ಆ ರೈಲು ಕೂಡ ಅಪಘಾತಕ್ಕೆ ಈಡಾಗಿತ್ತು.

Exit mobile version