Site icon Vistara News

Food Poisoning : ಹಾಸ್ಟೆಲ್​ ಊಟದಲ್ಲಿ ಸತ್ತ ಕಪ್ಪೆ, ವಿದ್ಯಾರ್ಥಿಗಳ ಮೋರೆ ಸಪ್ಪೆ

Hostel food

ಭುವನೇಶ್ವರ: ಭುವನೇಶ್ವರದ ಕೆಐಐಟಿ ಕಾಲೇಜಿನ ಹಾಸ್ಟೆಲ್​ನ ಮೆಸ್​​ನಲ್ಲಿ ನೀಡಲಾಗುವ ಆಹಾರದಲ್ಲಿ ಕಪ್ಪೆ ಪತ್ತೆಯಾಗಿದೆ (Food Poisoning) ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಅದರ ಚಿತ್ರವನ್ನು ಆನ್ ಲೈನ್ ನಲ್ಲಿ ಹಂಚಿಕೊಂಡ ನಂತರ ಈ ಘಟನೆಯು ವೈರಲ್​ ಆಗಿದೆ. ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ಗಂಭೀರ ಕಳವಳಗಳನ್ನು ಹುಟ್ಟುಹಾಕಿತು. ಅನೇಕರು ಹಾಸ್ಟೆಲ್ ಗಳಲ್ಲಿ ನೀಡಲಾಗುವ ಆಹಾರದ ಗುಣಮಟ್ಟದ ಬಗ್ಗೆ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

“ಇದು ಕೆಐಐಟಿ ಭುವನೇಶ್ವರ, ಭಾರತದ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ~ 42 ನೇ ಸ್ಥಾನದಲ್ಲಿದೆ. ಪೋಷಕರು ತಮ್ಮ ಮಕ್ಕಳಿಗೆ ಎಂಜಿನಿಯರಿಂಗ್ ಪದವಿ ನೀಡಲು ಇಲ್ಲಿ ಸುಮಾರು 17.5 ಲಕ್ಷ ಪಾವತಿಸುತ್ತಾರೆ. ಆದರೆ ಇಲ್ಲಿ ಕಳಪೆ ಆಹಾರ ಪೂರೈಕೆ ಮಾಡಲಾಗುತ್ತದೆ. ಕಳಪೆ ಆಹಾರ. ಶಿಕ್ಷಣ ಮತ್ತು ಸೌಲಭ್ಯಗಳಿಗಳಿಂದಾಗಿಯೇ ಭಾರತದಿಂದ ವಿದ್ಯಾರ್ಥಿಗಳು ಇತರ ದೇಶಗಳಿಗೆ ಹೋಗುತ್ತಾರೆ” ಎಂದು ಎಕ್ಸ್ ಬಳಕೆದಾರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನೆಯ ಬಳಿಕದ ವಿವರವನ್ನೂ ಮತ್ತೊಬ್ಬರು ಹಂಚಿಕೊಂಡಿದ್ದಾರೆ. ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡಲಾಗುತ್ತಿದೆ. ಡ್ಯಾಮೇಜ್​ ಕಂಟ್ರೋಲ್ ಮಾಡುವುದಕ್ಕಾಗಿ ಆಹಾರ ಪೂರೈಕೆದಾರರಿಗೆ ಒಂದು ದಿನದ ಪಾವತಿ ತಡೆ ಹಿಡಿಯಲಾಗಿದೆ ಎನ್ನಲಾಗುತ್ತಿದೆ. ಅದೇ ರೀತಿ ನೀಡಿದ ನೋಟಿಸ್ ಕೂಡ ನೀಡಲಾಗಿದೆ ಎನ್ನಲಾಗುತ್ತಿದೆ.

ಕಪ್ಪೆ ಪತ್ತೆಯಾದ ಮೊದಲ ಟ್ವೀಟ್ ಅನ್ನು ಒಂದು ದಿನದ ಹಿಂದೆ ಹಂಚಿಕೊಳ್ಳಲಾಗಿದೆ. ಇದು 1.7 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಅನೇಕರು ಚಿತ್ರವನ್ನು ರೀಟ್ವೀಟ್ ಮಾಡಿದ್ದಾರೆ. ಕೆಲವರು ಟ್ವೀಟ್​​ನಲ್ಲಿ ಕಾಮೆಂಟ್​ಗಳನ್ನೂ ಬಿಟ್ಟಿದ್ದಾರೆ. ಇದರಲ್ಲಿ ಅದೇ ಕಾಲೇಜಿನ ವಿದ್ಯಾರ್ಥಿಗಳೂ ಇದ್ದಾರೆ ಎನ್ನಲಾಗಿದೆ.

ವಿದ್ಯಾರ್ಥಿಯು ಇದೇ ರೀತಿಯ ಚಿತ್ರವನ್ನು ಹಂಚಿಕೊಂಡು, “ನಾನು ಕೂಡ ಅದೇ ಹಾಸ್ಟೆಲ್​ನಿಂದ (ಕೆಪಿ 8 ಎ) ಬಂದಿದ್ದೇನೆ. ಇದು ಹಾಸ್ಟೆಲ್ ಆಗಿದ್ದು, ಹೆಚ್ಚಿನ ವಿದ್ಯಾರ್ಥಿಗಳು ವಿದೇಶಿಯರಿದ್ದಾರೆ. ನೂರಾರು ವಿದ್ಯಾರ್ಥಿಗಳು ಮೆಸ್ ನಲ್ಲಿ ಜಮಾಯಿಸಿದ್ದಾರೆ. ಘಟನೆಯ ವಿರುದ್ಧ ನಾವು ದೂರು ದಾಖಲಿಸಿದ್ದೇವೆ. ಈಗ ಹಾಸ್ಟೆಲ್ ಮತ್ತು ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಬರೆದಿದ್ದಾರೆ.

ಜನ ಏನಂದರು?

ಕರುಣಾಜನಕ ಸ್ಥಿತಿಯಿದು. ಸಂಸ್ಥೆ, ಕ್ಯಾಂಟೀನ್ ಗುತ್ತಿಗೆದಾರ, ಉಸ್ತುವಾರಿ ಎಲ್ಲರ ವಿರುದ್ಧವೂ ಮೊಕದ್ದಮೆ ಹೂಡಬೇಕು. ಅವರ ಪರವಾನಗಿಗಳನ್ನು ಅಮಾನತುಗೊಳಿಸಬೇಕು ಎಂದು ವ್ಯಕ್ತಿಯೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. ಇನ್ನೊಬ್ಬರು ನನ್ನ ಹಾಸ್ಟೆಲ್ ಆಹಾರದಲ್ಲಿ ಬ್ಲೇಡ್ ಸಿಕ್ಕಿದ ಸಮಯವನ್ನು ನೆನಪಿಸಿಕೊಳ್ಳುವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : Mann Ki Baat: ಬೇಲೂರು, ಹಳೆಬೀಡು ದೇಗುಲಗಳಿಗೆ ವಿಶ್ವಮಾನ್ಯತೆ; ಮನ್‌ ಕಿ ಬಾತ್‌ನಲ್ಲಿ ಮೋದಿ ಸಂತಸ

ಒಮ್ಮೆ ನಮ್ಮ ಹಾಸ್ಟೆಲ್ ಮೆಸ್ನಲ್ಲಿ ಆಹಾರದಲ್ಲಿ ಹಲ್ಲಿ ಸಿಕ್ಕಿತು. ಅದರ ನಂತರ ಇಡೀ ಸೆಮಿಸ್ಟರ್​ನಲ್ಲಿ ಮೆಸ್​​ನಲ್ಲಿ ತಿನ್ನಲಿಲ್ಲ” ಎಂದು ಮೂರನೆಯವರು ಹಂಚಿಕೊಂಡರು. ಮೆಸ್ ಆಹಾರ ತಕ್ಷಣ ತೆಗೆದುಹಾಕಬೇಕು” ಎಂದು ನಾಲ್ಕನೆಯವರು ಪೋಸ್ಟ್ ಮಾಡಿದ್ದಾರೆ.

ವೈದ್ಯಕೀಯ ಕಾಲೇಜುಗಳ ಕ್ಯಾಂಟೀನ್​​ಗಳಲ್ಲಿ ನೀಡಲಾಗುವ ಆಹಾರದ ನೋಸಿ . ನಿಮಗೆ ಭೇದಿಯಾಗುವುದು ಗ್ಯಾರಂಟಿ ಎಂದು ಬರೆದುಕೊಂಡಿದ್ದಾರೆ.

Exit mobile version