ನವ ದೆಹಲಿ: ಮಾವೋವಾದಿಗಳ ಸಂಪರ್ಕ ಹೊಂದಿರುವ ಅಪರಾಧಕ್ಕಾಗಿ ಜೀವಾವಧಿ ಶಿಕ್ಷೆ ಎದುರಿಸುತ್ತಿದ್ದ ದೆಹಲಿ ವಿಶ್ವವಿದ್ಯಾಲಯದ ಮಾಜಿ ಪ್ರೊಫೆಸರ್ ಜಿ ಎನ್ ಸಾಯಿಬಾಬಾ ಅವರನ್ನು ಬಾಂಬೆ ಹೈಕೋರ್ಟ್ (G N Saibaba) ಖುಲಾಸೆಗೊಳಿಸಿದೆ. ತಕ್ಷಣವೇ ಜೈಲಿನಿಂದ ಅವರನ್ನು ಬಿಡುಗಡೆ ಮಾಡಲು ಆದೇಶಿಸಿದೆ. ವ್ಹೀಲ್ ಚೇರ್ ಆಶ್ರಯ ಹೊಂದಿರುವ ಸಾಯಿಬಾಬಾ ಅವರು ಸದ್ಯ ನಾಗ್ಪುರ್ ಕೇಂದ್ರ ಕಾರಾಗೃಹದಲ್ಲಿದ್ದಾರೆ.
ಮಾವೋವಾದಿಗಳೊಂದಿಗೆ ಸಂಪರ್ಕ ಹೊಂದಿದ್ದಾರೆಂಬ ಆರೋಪದ ಮೇರೆ ಪೊಲೀಸರು ಜಿ ಎನ್ ಸಾಯಿಬಾಬಾ ಅವರನ್ನು 2014ರಲ್ಲಿ ಬಂಧಿಸಿ, ಅವರನ್ನು ಜೈಲಿಗೆ ಕಳುಹಿಸಿದ್ದರು. ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠದಲ್ಲಿಈ ಬಗ್ಗೆ ವಿಚಾರಣೆ ಕೈಗೊಂಡಿತ್ತು. ಇದಕ್ಕೂ ಮೊದಲು, 2017ರಲ್ಲಿ ಕೆಳ ಹಂತದ ವಿಚಾರಣಾ ನ್ಯಾಯಾಲಯವು ಜಿ ಎನ್ ಸಾಯಿಬಾಬಾ ಅವರಿಗೆ ಈ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು.
ಕೆಳ ಹಂತದ ನ್ಯಾಯಾಲಯದ ಈ ತೀರ್ಪನ್ನು ಜಿ ಎನ್ ಸಾಯಿಬಾಬಾ ಅವರು ಬಾಂಬೆ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಈ ಕುರಿತು ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠದ ರೋಹಿದ್ ದೇವ್ ಮತ್ತು ಅನಿಲ್ ಪನ್ಸಾರೆ ಅವರು ಸಾಬಿಬಾಬಾ ಅವರನ್ನು ಪ್ರಕರಣದಿಂದ ಖುಲಾಸೆಗೊಳಿಸಿದೆ ಮತ್ತು ತಕ್ಷಣವೇ ಅವರನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ಆದೇಶಿಸಿದೆ. ಸಾಯಿಬಾಬಾ ಜತೆಗೆ ಉಳಿದ ಐವರನ್ನು ಈ ಪ್ರಕರಣದಿಂದ ಖುಲಾಸೆಗೊಳಿಸಲಾಗಿದೆ.
ಇದನ್ನೂ ಓದಿ | Rane Bungalow | ಕೇಂದ್ರ ಸಚಿವ ರಾಣೆಗೆ ಸೇರಿದ ಬಂಗ್ಲೆ ನೆಲಸಮಕ್ಕೆ ಬಾಂಬೆ ಹೈಕೋರ್ಟ್ ಆದೇಶ