ಜೈಪುರ: ಸಾಮಾಜಿಕ ಜಾಲತಾಣ ಬಂದ ಬಳಿಕ ಜಗತ್ತಿನ ಯಾವುದೇ ಮೂಲೆಯಲ್ಲಿ ಅಚ್ಚರಿಯ ಸಂಗತಿಗಳು ನಡೆಯಲಿ, ಕ್ಷಣ ಮಾತ್ರದಲ್ಲಿ ಜನರಿಗೆ ಸಿಗುತ್ತವೆ. ಅದರಂತೆ, ರಾಜಸ್ಥಾನದಲ್ಲಿ ಸ್ವಿಮ್ಮಿಂಗ್ ಪೂಲ್‌ನಲ್ಲಿ ಸಾಂಪ್ರದಾಯಿಕ ಗಾರ್ಬಾ ನೃತ್ಯ (Garba Dance) ಮಾಡಿದ್ದು, ಈ ವಿಡಿಯೊ ಈಗ ವೈರಲ್ ಆಗಿದೆ.
ರಾಜಸ್ಥಾನದ ಉದಯ್‌ಪುರದಲ್ಲಿರುವ ಸ್ವಿಮ್ಮಿಂಗ್ ಪೂಲ್ ಒಂದರಲ್ಲಿ ಒಂದಷ್ಟು ಹೆಣ್ಣುಮಕ್ಕಳು ಹಾಗೂ ಪುರುಷರು ಸಾಂಪ್ರದಾಯಿಕ ಗಾರ್ಬಾ ನೃತ್ಯ ಮಾಡಿದ್ದಾರೆ. ಇದುವರೆಗೆ ನೆಲದ ಮೇಲೆ ಗಾರ್ಬಾ ನೃತ್ಯ ಮಾಡುವುದು ರೂಢಿ. ಆದರೆ, ಈಗ ಸ್ವಿಮ್ಮಿಂಗ್ ಪೂಲ್‌ನಲ್ಲಿಯೂ ನೃತ್ಯ ಮಾಡಿದ್ದು ಗಮನ ಸೆಳೆದಿದೆ. ಲವ್‌ಯಾತ್ರಿಯ ಚೋಗಡ ತಾರಾ ಹಾಡಿಗೆ ಇವರು ನೃತ್ಯ ಮಾಡಿದ್ದಾರೆ. ರಾಜಸ್ಥಾನ ಸೇರಿ ಹಲವೆಡೆ ನವರಾತ್ರಿ ವೇಳೆ ಬಾರ್ಗಾ ನೃತ್ಯ ಮಾಡುವ ಸಂಪ್ರದಾಯವಿದೆ.
ಇದನ್ನೂ ಓದಿ | ಸೆ.26ಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ʼದಶಹರʼ ದಸರಾ ವೈಭವ ನೃತ್ಯ ರೂಪಕ