Site icon Vistara News

Kanwar Yatra : ಮುಗಿದ ಕನ್ವರ್‌ ಯಾತ್ರೆ; ಹರಿದ್ವಾರದಲ್ಲಿ 30,000 ಟನ್‌ ತ್ಯಾಜ್ಯ!

kanwar yatra garbage

ಡೆಹ್ರಾಡೂನ್‌: ಪ್ರತಿ ವರ್ಷ ಉತ್ತರಾಖಂಡದ ಹರಿದ್ವಾರದಲ್ಲಿ ಕನ್ವರ್‌ ಯಾತ್ರೆ (Kanwar Yatra) ನಡೆಸಲಾಗುತ್ತದೆ. ಈ ವರ್ಷ ಈ ಯಾತ್ರೆಯಲ್ಲಿ ದಾಖಲೆ ಎಂಬಂತೆ 4 ಕೋಟಿ ಭಕ್ತರು ಭಾಗವಹಿಸಿದ್ದರು. ಇಷ್ಟು ಸಂಖ್ಯೆಯ ಭಕ್ತರು ದಾಖಲೆಯ ಪ್ರಮಾಣದಲ್ಲಿ ಕಸವನ್ನೂ ಬಿಟ್ಟು ಹೋಗಿದ್ದಾರೆ! ಈ ಯಾತ್ರೆಯಿಂದಾಗಿ ಹರಿದ್ವಾರದಲ್ಲಿ ಬರೋಬ್ಬರಿ 30,000 ಟನ್‌ ತ್ಯಾಜ್ಯ ನಿರ್ಮಾಣವಾಗಿದೆ ಎಂದು ಸ್ಥಳೀಯ ಆಡಳಿತ ವರದಿ ಕೊಟ್ಟಿದೆ.

ಗಂಗಾ ಘಾಟ್‌, ಮಾರುಕಟ್ಟೆಗಳು, ವಾಹನ ನಿಲುಗಡೆ ಸ್ಥಳ, ರಸ್ತೆಗಳು ಹೀಗೆ ಎಲ್ಲೆಡೆಯೂ ಕಸದ ರಾಶಿಗಳೇ ಬಿದ್ದಿವೆ. ಹರ್‌ ಕಿ ಪೌರಿಯಿಂದ ಆರಂಭವಾಗುವ 42 ಕಿ.ಮೀ ಉದ್ದದ ಕನ್ವರ್‌ ದಾರಿಯ ತುಂಬೆಲ್ಲ ಕಸವೇ ರಾರಾಜಿಸುತ್ತಿದೆ. ಈ ತ್ಯಾಜ್ಯವನ್ನು ಸಂಪೂರ್ಣವಾಗಿ ತೆಗೆದುಹಾಕಲು ಸ್ಥಳೀಯ ಆಡಳಿತ ವರ್ಗ ಪ್ರಯತ್ನ ಮಾಡುತ್ತಿದ್ದು, ಈ ಕೆಲಸ ಮುಗಿಸಲು ವಾರಗಳೇ ಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Viral Video: ನಾಚ್‌ ಬಸಂತಿ; ಬಿಹಾರ ಸರ್ಕಾರಿ ಅಧಿಕಾರಿ ಬೀಳ್ಕೊಡುಗೆ ವೇಳೆ ಸೊಂಟ ಬಳುಕಿಸಿದ ಬಾರ್‌ ಡಾನ್ಸರ್
ಈ ಬಗ್ಗೆ ನಗರಸಭೆ ಪೌರಾಯುಕ್ತ ದಯಾನಂದ ಸರಸ್ವತಿ ಅವರು ಮಾತನಾಡಿದ್ದು, “ಶನಿವಾರದಿಂದ ತ್ಯಾಜ್ಯ ತೆಗೆಯುವ ಕೆಲಸ ಆರಂಭ ಮಾಡಿದ್ದೇವೆ. ಗಂಗಾ ಘಾಟ್‌ಗಳು, ರಸ್ತೆಗಳು, ಸೇತುವೆಗಳು, ವಾಹನ ನಿಲುಗಡೆ ಸ್ಥಳಗಳು ಮತ್ತು ತಾತ್ಕಾಲಿಕ ಬಸ್ ನಿಲ್ದಾಣಗಳಲ್ಲಿ ಹೆಚ್ಚಿನ ತ್ಯಾಜ್ಯವಿದ್ದು, ದಿನದ 24 ಗಂಟೆಯೂ ಕೆಲಸ ಮಾಡುತ್ತಿದ್ದೇವೆ. ಅದಕ್ಕೆಂದೇ 600 ಪೌರ ಕಾರ್ಮಿಕರನ್ನು ನಿಯೋಜಿಸಿಕೊಂಡಿದ್ದೇವೆ. ಈ ಯಾತ್ರೆ ಸಮಯದಲ್ಲಿ ದಿನವೊಂದಕ್ಕೆ 500-2000 ಟನ್‌ ತ್ಯಾಜ್ಯ ನಿರ್ಮಾಣವಾಗಿದೆ” ಎಂದು ಹೇಳಿದರು.

ಕನ್ವರ್ ಯಾತ್ರೆಯ ಸಂದರ್ಭದಲ್ಲಿ ಏಳು ದಿನಗಳ ಕಾಲ ಸುರಿದ ಮಳೆಯು ಕಸ ಸಂಗ್ರಹಣೆ ಮತ್ತು ವಿಲೇವಾರಿ ಮೇಲೆ ಪರಿಣಾಮ ಬೀರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹರಿದ್ವಾರ ಮುನ್ಸಿಪಲ್ ಕಾರ್ಪೊರೇಷನ್ 40 ಹೆಚ್ಚುವರಿ ಕಸ ಸಾಗಿಸುವ ವಾಹನಗಳನ್ನು ಕೆಲಸಕ್ಕೆ ನಿಯೋಜಿಸಿಕೊಂಡಿದೆ. ಸದ್ಯ 140 ಗಾಡಿಗಳು ಕಸ ವಿಲೇವಾರಿ ಮಾಡುವ ಕೆಲಸವನ್ನೇ ಮಾಡುತ್ತಿವೆ. ಈ ಬಗ್ಗೆ ಗಮನ ಹರಿಸಿದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಸಿಂಗ್ ಅವರು ಭಾನುವಾರದಂದು ನೂರಾರು ಪೊಲೀಸ್ ಸಿಬ್ಬಂದಿಯೊಂದಿಗೆ ಹರಿದ್ವಾರದ ವಿಷ್ಣು ಘಾಟ್‌ನಲ್ಲಿ ಸ್ವಚ್ಛತಾ ಅಭಿಯಾನ ನಡೆಸಿದರು.

ಇದನ್ನೂ ಓದಿ: Viral News: ಒಂದು ಕುಟುಂಬದಲ್ಲಿ 9 ಜನ, ಇವರೆಲ್ಲರ ಬರ್ತ್‌ಡೇ ಒಂದೇ ದಿನ; ಗಿನ್ನಿಸ್ ದಾಖಲೆಗೆ ಫ್ಯಾಮಿಲಿ ಭಾಜನ
ಈ ವಿಚಾರವಾಗಿ ಉದಾಸಿನ್‌ ಅಖಾಡದ ಮಹಾಮಂಡಲೇಶ್ವರದ ಹರಿ ಚೇತನಾನಂದ ಮಹಾರಾಜ್‌ ಅವರು ಪ್ರತಿಕ್ರಿಯಿಸಿದ್ದು, ಯಾತ್ರಿಗಳು ಈ ರೀತಿ ಗಂಗೆಯನ್ನು, ಘಾಟ್‌ಗಳನ್ನು ಅಥವಾ ಪೂಜಾ ಸ್ಥಳಗಳನ್ನು ಕಲುಷಿತಗೊಳಿಸಿದರೆ ತೀರ್ಥಯಾತ್ರೆ ಯಶಸ್ವಿಯಾಗಿದೆ ಎಂದು ಪರಿಗಣಿಸಲಾಗುವುದಿಲ್ಲ. ವೈದಿಕ ಗ್ರಂಥಗಳಲ್ಲಿ ಹರ್-ಕಿ-ಪೌರಿ ಅಥವಾ ಪೂಜ್ಯ ದೇವಾಲಯಗಳ ಬಳಿ ತಂಗುವುದು ಸೂಕ್ತವೆಂದು ಪರಿಗಣಿಸಲಾಗುವುದಿಲ್ಲ. ಏಕೆಂದರೆ ಅಂತಹ ಪವಿತ್ರ ಸ್ಥಳಗಳ ಪಾವಿತ್ರ್ಯತೆ ಹೊಂದಿರುತ್ತವೆ. ಭಕ್ತರು ಇಂತಹ ಯಾವುದೇ ಧರ್ಮ ವಿರೋಧಿ ಕೃತ್ಯ ಎಸಗದಂತೆ ನೋಡಿಕೊಳ್ಳಬೇಕು” ಎಂದು ಹೇಳಿದರು.

ಪ್ರತಿ ವರ್ಷ ಲಕ್ಷಾಂತರ ಭಕ್ತರು ಹರಿದ್ವಾರ, ಋಷಿಕೇಶ, ಗೋಮುಖ ಮುಂತಾದ ಸ್ಥಳಗಳಿಂದ ಗಂಗೆಯ ಪವಿತ್ರ ನೀರನ್ನು ತರಲು ವಾರ್ಷಿಕ ಕನ್ವರ್ ಯಾತ್ರೆಯನ್ನು ಕೈಗೊಳ್ಳುತ್ತಾರೆ. ಅವರು ತಮ್ಮ ಊರಿನ ಸ್ಥಳೀಯ ಶಿವ ದೇವಾಲಯಗಳಲ್ಲಿ ನೈವೇದ್ಯಕ್ಕಾಗಿ ನೀರನ್ನು ತಮ್ಮ ಹೆಗಲ ಮೇಲೆ ಒಯ್ಯುತ್ತಾರೆ.

Exit mobile version