ನವ ದೆಹಲಿ: ಕಾಂಗ್ರೆಸ್ ಪಕ್ಷವು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ʼಭಾರತ್ ಜೋಡೋ ಯಾತ್ರೆʼ ಮಾಡಿ ಮುಗಿಸಿದೆ. ಅದರ ಬೆನ್ನಲ್ಲೇ ಇದೀಗ ಬಿಜೆಪಿ ಕೂಡ ಯಾತ್ರೆಗೆ ಸಿದ್ಧವಾಗಿದೆ. ಆದರೆ ಇದು ಮನೆ ಮನೆಗಳನ್ನೂ ಜೋಡಿಸುವ (Ghar Ghar Jodo) ಯಾತ್ರೆ.
ಇದನ್ನೂ ಓದಿ: Viral News : ನಾಯಿ ಎಂದುಕೊಂಡು ಕರಡಿಯನ್ನು ಸಾಕಿದ ಮಹಿಳೆ! ದಿನಕ್ಕೆ ಬೇಕಿತ್ತು ಎರಡು ಬಕೆಟ್ ನೂಡಲ್ಸ್!
ಅಂಬೇಡ್ಕರ್ ಜಯಂತಿಯಾದ ಏಪ್ರಿಲ್ 14ರಂದು ಬಿಜೆಪಿ ದೇಶಾದ್ಯಂತ ʼಘರ್ ಘರ್ ಜೋಡೋʼ ಯಾತ್ರೆ ಆರಂಭಿಸಲಿದೆ. ದಲಿತ ಸಮುದಾಯವನ್ನು ಗುರಿಯಾಗಿಸಿಟ್ಟುಕೊಂಡು ಈ ಯಾತ್ರೆ ನಡೆಸಲಾಗುತ್ತಿದೆ. ಯಾತ್ರೆಯಲ್ಲಿ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ದೇಶದ ದಲಿತರ ಮನೆ ಮನೆಗೆ ತೆರಳಲಿದ್ದಾರೆ. ಈವರೆಗೆ ಅವರು ಯಾವ ಸೌಲಭ್ಯದಿಂದ ವಂಚಿತರಾಗಿದ್ದರೋ ಆ ಸೌಲಭ್ಯವನ್ನು ಅವರಿಗೆ ತಲುಪಿಸುವ ಕೆಲಸ ಮಾಡಲಾಗುವುದು ಎಂದು ಮೂಲಗಳು ಹೇಳಿವೆ.
ಅಂಬೇಡ್ಕರ್ ಜಯಂತಿಯಂದು ಆರಂಭವಾಗಲಿರುವ ಯಾತ್ರೆಯು ಬುದ್ಧ ಜಯಂತಿಯಾದ ಮೇ 5ಕ್ಕೆ ಮುಕ್ತಾಯವಾಗಲಿದೆ. ದೆಹಲಿಯ ತಲ್ಕತೊರ ಮೈದಾನದಲ್ಲಿ ಬೃಹತ್ ಕಾರ್ಯಕ್ರಮ ನಡೆಸಿ, ಯಾತ್ರೆಯನ್ನು ಮುಕ್ತಾಯ ಮಾಡಲಾಗುವುದು. ಪ್ರಧಾನಿ ನರೇಂದ್ರ ಮೋದಿ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ದಲಿತರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: Bangalore- Mysuru Express way : 1.5 ಕಿಮೀ ರೋಡ್ ಶೋಗೆ ಬಿಜೆಪಿ ರೆಡಿ, ಕ್ರೆಡಿಟ್‌ನಲ್ಲಿ ಪಾಲು ಕೇಳಿದ ಕಾಂಗ್ರೆಸ್
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಅದರ ಮೈತ್ರಿಕೂಟವಾದ ಎನ್‌ಡಿಎ ಒಕ್ಕೂಟವು 543 ಸ್ಥಾನಗಳ ಪೈಕಿ ಕನಿಷ್ಠ 350 ಸ್ಥಾನಗಳನ್ನು ಗೆದ್ದುಕೊಳ್ಳಲಿದೆ ಎಂದು ಬಿಜೆಪಿ ಮೈತ್ರಿಕೂಟದ ದಲಿತ ನಾಯಕರಾಗಿರುವ ರಾಮ್‌ದಾಸ್ ಅಟಾವಳೆ ಹೇಳಿದ್ದರು. ಈ ಬಾರಿ ದಲಿತರು ಮತ್ತು ಮುಸ್ಲಿಮರು ಎನ್‌ಡಿಎಗೇ ಮತ ನೀಡಬೇಕು ಎಂದು ಅವರು ಜನರಿಗೆ ಮನವಿ ಮಾಡಿದ್ದರು ಕೂಡ.