Site icon Vistara News

Ghulam Nabi Azad | ಜಮ್ಮು ಕಾಶ್ಮೀರಕ್ಕೆ ಹೊರಟ ಗುಲಾಂ ನಬಿ ಆಜಾದ್​​; ಇಂದು ಹೊಸ ಪಕ್ಷ ಘೋಷಣೆ

Ghulam Nabi Azad set to begin fresh political journey in Jammu Kashmir

ಕಾಂಗ್ರೆಸ್​ ತೊರೆದ ಗುಲಾಂ ನಬಿ ಆಜಾದ್​ ಇಂದು (ಸೆಪ್ಟೆಂಬರ್​ 4) ಇಂದು ತಮ್ಮ ರಾಜಕೀಯ ಜೀವನದ ಹೊಸ ಅಧ್ಯಾಯ ಪ್ರಾರಂಭಿಸಲಿದ್ದಾರೆ. ತವರು ರಾಜ್ಯ ಜಮ್ಮು-ಕಾಶ್ಮೀರದಲ್ಲಿ ತಮ್ಮ ಹೊಸ ರಾಜಕೀಯ ಪಕ್ಷದ ಮೊದಲ ಘಟಕವನ್ನು ಆರಂಭ ಮಾಡಲಿದ್ದಾರೆ. ಇಂದು ಬೆಳಗ್ಗೆ 11 ಗಂಟೆ ಹೊತ್ತಿಗೆ ಜಮ್ಮು-ಕಾಶ್ಮೀರ ತಲುಪಲಿರುವ ಆಜಾದ್​ರನ್ನು ಅವರ ಬೆಂಬಲಿಗರು ಏರ್​ಪೋರ್ಟ್​​ನಲ್ಲಿಯೇ ಸ್ವಾಗತಿಸಲಿದ್ದಾರೆ. ಅಲ್ಲಿಂದ ನೇರವಾಗಿ ಸೈನಿಕ್ ಕಾಲೋನಿಗೆ ತೆರಳಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುವರು. ಆಜಾದ್​ ನಡೆಸಲಿರುವ ಱಲಿಯಲ್ಲಿ ಅಂದಾಜು 20 ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಗುಲಾಂ ನಬಿ ಆಜಾದ್​ ಅವರು ಕಾಂಗ್ರೆಸ್ ಜತೆಗಿನ ಬಾಂಧವ್ಯವನ್ನು ಆಗಸ್ಟ್​ 26ರಂದು ಕಳಚಿಕೊಂಡಿದ್ದಾರೆ. ಇಡೀ ಪಕ್ಷ ಸಂಪೂರ್ಣವಾಗಿ ನಾಶವಾಗಿದೆ. ಇದಕ್ಕೆ ನೇರ ಹೊಣೆ ರಾಹುಲ್​ ಗಾಂಧಿ ಎಂದು ಆರೋಪ ಮಾಡಿ, ರಾಜೀನಾಮೆ ಕೊಟ್ಟಿದ್ದಾರೆ. ಸೋನಿಯಾ ಗಾಂಧಿಗೆ ಐದು ಪುಟಗಳ ರಾಜೀನಾಮೆ ಪತ್ರ ಸಲ್ಲಿಸಿ, ‘ಇಂದು ಕಾಂಗ್ರೆಸ್​ ಅಧಃಪತನಕ್ಕೆ ಇಳಿದಿದ್ದು ನಿಮ್ಮ ಪುತ್ರನಿಂದಲೇ’ ಎಂಬುದನ್ನು ನೇರವಾಗಿಯೇ ಹೇಳಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಕಾಂಗ್ರೆಸ್​​ಗೆ ಪದೇಪದೆ ಹೊಡೆತ ಬೀಳುತ್ತಿದೆ. ಗಣ್ಯರು, ಹೆಸರು ಮಾತಿನ ನಾಯಕರೇ ಪಕ್ಷ ಬಿಟ್ಟು ಹೋಗುತ್ತಿದ್ದಾರೆ. ಕಪಿಲ್ ಸಿಬಲ್​, ಅಶ್ವನಿ ಕುಮಾರ್​ ಮತ್ತಿತರ ಪ್ರಮುಖ ನಾಯಕರು ರಾಜೀನಾಮೆ ಕೊಟ್ಟಿದ್ದಕ್ಕಿಂತಲೂ ಈ ಬಾರಿ ಗುಲಾಂ ನಬಿ ಆಜಾದ್​ ಹೊರಟಿದ್ದು ಕೈಗೆ ಜಾಸ್ತಿ ಆಘಾತ ಕೊಟ್ಟಿದೆ.

ಡಿಎನ್​ಎ ಬದಲಾಗದು !
ಗುಲಾಂ ನಬಿ ಆಜಾದ್ ಅವರು ಕಾಂಗ್ರೆಸ್​​ಗೆ ರಾಜೀನಾಮೆ ಕೊಟ್ಟ ಬೆನ್ನಲ್ಲೇ ಆ ಪಕ್ಷದ ನಾಯಕ ಜೈರಾಮ್​ ರಮೇಶ್​ ತೀವ್ರವಾಗಿ ಟೀಕಿಸಿದ್ದರು. ಟ್ವೀಟ್​ ಮಾಡಿದ್ದ ಅವರು, ‘ಆಜಾದ್ ಅವರ ಡಿಎನ್​ಎ ಮೋದಿ ಫೈಡ್​ (Modi Fied) ಆಗಿದೆ’ ಎಂದು ಹೇಳಿದ್ದರು. ಅದಕ್ಕೆ ಶನಿವಾರ (ಸೆಪ್ಟೆಂಬರ್​ 3) ತಿರುಗೇಟು ಕೊಟ್ಟ ಗುಲಾಂ ನಬಿ ಆಜಾದ್​ ‘ಪ್ರತಿಪಕ್ಷಗಳ ನಾಯಕರನ್ನು ಭೇಟಿಯಾಗಬಾರದು ಎಂಬ ನಿಯಮವಿಲ್ಲ. ಹಾಗೇ, ಮತ್ತೊಂದು ಪಕ್ಷದ ರಾಜಕೀಯ ನಾಯಕರನ್ನು ಭೇಟಿ ಮಾಡಿದಾಕ್ಷಣ ನಮ್ಮ ಡಿಎನ್​ಎ ಬದಲಾಗುವುದಿಲ್ಲ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: Ghulam Nabi Azad | ಗುಲಾಂ ನಬಿಗೆ ಬೆಂಬಲಿಸಿ ಜಮ್ಮುವಿನಲ್ಲಿ 20 ನಾಯಕರು ಕಾಂಗ್ರೆಸ್‌ಗೆ ವಿದಾಯ!

Exit mobile version