Site icon Vistara News

ಏನಾಗಲ್ಲ ಎಂಬ ಧೈರ್ಯದಿಂದ ಪರೋಟಾ ತಿಂದು ಮೃತಪಟ್ಟ ಕೇರಳದ ವಿದ್ಯಾರ್ಥಿನಿ!

Girl Died After Eat Parotta In Kerala

#image_title

ಇಡುಕ್ಕಿ: ಕೇರಳದ ತನ್ನಿಕಂಡಂ ನಿವಾಸಿಯಾಗಿದ್ದ ಬಾಲಕಿಯೊಬ್ಬಳು ಪರೋಟಾ ತಿಂದು ಅಸ್ವಸ್ಥರಾಗಿ ಮೃತಪಟ್ಟಿದ್ದಾಳೆ. ನಯನಾ​ ಮರಿಯಾ (16) ಮೃತ ಹುಡುಗಿ. ಈಕೆ ವಾಜತೊಪ್ಪುವಿನ ಸೇಂಟ್ ಜಾರ್ಜ್​ ಹೈಯರ್​ ಸೆಕೆಂಡರಿ ಶಾಲೆಯಲ್ಲಿ, ಜೀವಶಾಸ್ತ್ರ ವಿಜ್ಞಾನ ವಿದ್ಯಾರ್ಥಿನಿಯಾಗಿದ್ದಳು. ಯಾವಾಗ ಮೈದಾ ಮತ್ತು ಗೋಧಿ ಹಿಟ್ಟಿನ ಆಹಾರಗಳನ್ನು ತಿಂದರೂ, ಆಕೆಗೆ ಅಲರ್ಜಿಯಾಗುತ್ತಿತ್ತು. ತುಂಬ ಸಮಯದಿಂದಲೂ ಇದಕ್ಕೆ ಚಿಕಿತ್ಸೆ ಪಡೆಯುತ್ತಿದ್ದಳು. ಆಕೆಗೆ ಗೋಧಿ ಮತ್ತು ಮೈದಾ ಆಹಾರಗಳು ಆಗುವುದಿಲ್ಲ. ಹೀಗಾಗಿ ಸ್ವಲ್ಪ ಮಾತ್ರ ಕೊಡಿ ಎಂದು ವೈದ್ಯರು ಪಾಲಕರಿಗೆ ತಿಳಿಸಿದ್ದರು.

ಕಳೆದ ಕೆಲವು ದಿನಗಳಿಂದಲೂ ನಯನಾ ಗೋಧಿ ಮತ್ತು ಮೈದಾ ಆಹಾರಗಳನ್ನೇ ತೆಗೆದುಕೊಳ್ಳುತ್ತಿದ್ದಳು. ಶುಕ್ರವಾರವೂ ಆಕೆ ಮೈದಾದಿಂದ ಮಾಡಲಾದ ಪರೋಟಾವನ್ನು ತಿಂದಿದ್ದಾಳೆ. ಕೂಡಲೇ ಎಚ್ಚರ ತಪ್ಪಿ ಬಿದ್ದಿದ್ದಾಳೆ. ಇಡುಕ್ಕಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ.

ಇದನ್ನೂ ಓದಿ: ಕೇರಳದಲ್ಲಿ ಒಂದರ ಬೆನ್ನಿಗೆ ಒಂದರಂತೆ ಫುಡ್​ ಪಾಯ್ಸನ್​ ಕೇಸ್​​ಗಳು; ಬಿರ್ಯಾನಿ ತಿಂದ 20 ವರ್ಷದ ಯುವತಿ ಸಾವು

Exit mobile version