Site icon Vistara News

ತನ್ನ ನವಜಾತ ಶಿಶುವನ್ನು ಕಟ್ಟಡದಿಂದ ಎಸೆದು ಕೊಂದ 15 ವರ್ಷದ ʼಅಮ್ಮʼ; ಅತ್ಯಾಚಾರದಿಂದಾಗಿ ಗರ್ಭಿಣಿಯಾಗಿದ್ದ ಬಾಲಕಿ

Two killed as two bikes collide head on

ಸೂರತ್​: ಹೊಟ್ಟೆಯಲ್ಲಿ ಹುಟ್ಟಿದ ಶಿಶುವನ್ನು ಕೊಂದ 15ವರ್ಷದ ಅಪ್ರಾಪ್ತ ವಯಸ್ಸಿನ ‘ಅಮ್ಮ’ನನ್ನು ಪೊಲೀಸರು ಬಂಧಿಸಿದ್ದಾರೆ. ಈಕೆ ಗುಜರಾತ್​​ನ ಸೂರತ್​​​ನವಳಾಗಿದ್ದು, ಎರಡಂತಸ್ತಿನ ಕಟ್ಟಡದ ಮೇಲ್ಭಾಗದಿಂದ ತನ್ನ ಮಗುವನ್ನು ಎಸೆದು ಹತ್ಯೆ ಮಾಡಿದ್ದಾಳೆ.

ಸೂರತ್​​ನ ಮಗ್ದಲ್ಲಾ ಎಂಬ ಏರಿಯಾದಲ್ಲಿ ನವಜಾತ ಶಿಶುವಿನ ದೇಹ ರಕ್ತಸಿಕ್ತವಾಗಿ ನೆಲದ ಮೇಲೆ ಬಿದ್ದಿತ್ತು. ಅದನ್ನು ಸ್ಥಳೀಯರು ಲಗುಬಗೆಯಿಂದ ಆಸ್ಪತ್ರೆಗೆ ತೆಗೆದುಕೊಂಡು ಹೋದರು. ಆದರೆ ಅಷ್ಟರಲ್ಲಾಗಲೇ ಅದರ ಜೀವ ಹೋಗಿತ್ತು. ಉಸಿರು ಇಲ್ಲ ಎಂದು ವೈದ್ಯರು ಹೇಳಿದರು. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಆ ಶಿಶು ಬಿದ್ದ ಸಮೀಪದ ಸಿಸಿಟಿವಿ ಫೂಟೇಜ್​ ಪರಿಶೀಲನೆ ಮಾಡಿದಾಗ, ಅದನ್ನು ಕಟ್ಟಡವೊಂದರ ಮೇಲ್ಭಾಗದಿಂದ ಕೆಳಗೆ ಎಸೆದಿದ್ದು ದೃಢಪಟ್ಟಿದೆ. ಈ ಬಗ್ಗೆ ವಲಯ 4ರ ಪೊಲೀಸ್​ ಉಪ ಆಯುಕ್ತ ಸಾಗರ್ ಬಾಗ್ಮಾರ್​​ ಮಾಹಿತಿ ನೀಡಿದ್ದಾರೆ.

ಮಗುವನ್ನು ಎಸೆದ ಹುಡುಗಿಯನ್ನು ಪೊಲೀಸರು ವಶಕ್ಕೆ ಪಡೆದು ಪ್ರಶ್ನಿಸಿದಾಗ ‘ನಮ್ಮ ಮನೆಯ ಸಮೀಪದಲ್ಲೇ ಇದ್ದ ಯುವಕನೊಬ್ಬ ನನ್ನ ಮೇಲೆ ಅತ್ಯಾಚಾರ ಮಾಡಿದ್ದ. ಹೀಗಾಗಿ ಗರ್ಭಿಣಿಯಾಗಿದ್ದೆ. ಅದಕ್ಕಾಗಿಯೇ ಮಗು ಹುಟ್ಟುತ್ತಿದ್ದಂತೆ ಅದನ್ನು ಎಸೆದೆ’ ಎಂದು ಹೇಳಿಕೊಂಡಿದ್ದಾಳೆ. ಆಕೆ ಹೇಳಿಕೆ ಆಧರಿಸಿ ಆ ಹುಡುಗನನ್ನೂ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆಕೆ ಮತ್ತು ನನ್ನ ಮಧ್ಯೆ ಸಂಬಂಧ ಇತ್ತು ಎಂದು ಅವನು ಹೇಳಿಕೊಂಡಿದ್ದಾನೆ. ಪೊಲೀಸರು ತನಿಖೆ ಪ್ರಾರಂಭ ಮಾಡಿದ್ದಾರೆ.

ಇದನ್ನೂ ಓದಿ: Crime news | ಆಸ್ತಿ ಕೊಡದೆ ಎರಡನೇ ಮದುವೆಯಲ್ಲಿ ಮಗು ಮಾಡಿಕೊಂಡ ಅಪ್ಪ, ಸುಪಾರಿ ನೀಡಿದ ಮಕ್ಕಳು

Exit mobile version