Site icon Vistara News

News Anchor : ಭಾರತದ ಮೊಟ್ಟ ಮೊದಲ ಇಂಗ್ಲಿಷ್​ ನ್ಯೂಸ್ ಮಹಿಳಾ ಆ್ಯಂಕರ್​ ಇನ್ನಿಲ್ಲ

Gitanjali Aiyar

#image_title

ನವ ದೆಹಲಿ: ಭಾರತದ ಮೊಟ್ಟ ಮೊದಲ ಇಂಗ್ಲಿಷ್​ ಸುದ್ದಿ ನಿರೂಪಕಿ (News Anchor) ಗೀತಾಂಜಲಿ ಅಯ್ಯರ್ ಬುಧವಾರ ನಿಧನ ಹೊಂದಿದ್ದಾರೆ. ದೂರದರ್ಶನದಲ್ಲಿ ವಾರ್ತೆಗಳನ್ನು ಓದುವ ಮೂಲಕ ದೇಶದ ಮನೆಮನೆಗಳಿಗೆ ಪರಿಚಿತರಾಗಿದ್ದ ಅವರು ನಿಧನ ಹೊಂದಿರುವ ವಾರ್ತೆಯನ್ನು ಅವರ ಸಹೋದ್ಯೋಗಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಂಡಿದ್ದಾರೆ. ದೂರದರ್ಶನದಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದ ನಂತರದಲ್ಲಿ ಸ್ವಂತ ಉದ್ಯಮ ನಡೆಸುತ್ತಿದ್ದಾರೆ. ಗೀತಾಂಜಲಿ ಅವರು 1971ರಲ್ಲಿ ದೂರದರ್ಶನಕ್ಕೆ ಸೇರಿದ್ದರು. ನಿರೂಪಕಿಯಾಗಿ ಮಾಡಿದ ಅಪ್ರತಿಮ ಸಾಧನೆಗಾಗಿ ಅವರು ನಾಲ್ಕು ಬಾರಿ ಅತ್ಯುತ್ತಮ ನಿರೂಪಕಿ ಪ್ರಶಸ್ತಿಯನ್ನು ಪಡೆದಿದ್ದಾರೆ.

ಕೊಲ್ಕತ್ತಾದ ಲೊರೆಟೊ ಕಾಲೇಜಿನಿಂದ ಪದವಿ ಪಡೆದಿದ್ದ ಗೀತಾಂಜಲಿ ಅಯ್ಯರ್, ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದಿಂದ ಡಿಪ್ಲೊಮಾ ಪಡೆದಿದ್ದಾರೆ. 1989ರಲ್ಲಿ ಅತ್ಯುತ್ತಮ ಮಹಿಳೆಯರಿಗಾಗಿ ನೀಡುವ ಇಂದಿರಾ ಗಾಂಧಿ ಪ್ರಿಯದರ್ಶಿನಿ ಪ್ರಶಸ್ತಿಯನ್ನು ಪಡೆದಿದ್ದಾರೆ.

ಆಲ್ ಇಂಡಿಯಾ ರೇಡಿಯೋದಲ್ಲಿ ಶುಕ್ರವಾರ ರಾತ್ರಿ ಇಂಗ್ಲಿಷ್ ಹಾಡಿನ ಕೋರಿಕೆಯ ಜನಪ್ರಿಯ ಕಾರ್ಯಕ್ರಮ ಎ ಡೇಟ್ ವಿತ್ ಯು ಕಾರ್ಯಕ್ರವನ್ನು ಅವರು ಪ್ರಸ್ತುತಪಡಿಸುತ್ತಿದ್ದರು. ಸುದ್ದಿ ಉದ್ಯಮದಲ್ಲಿ ದಶಕಗಳ ವೃತ್ತಿಜೀವನವನ್ನು ಹೊಂದಿದ್ದ ನಂತರ ಅವರು ಕಾರ್ಪೊರೇಟ್ ಸಂವಹನ, ಸರ್ಕಾರಿ ಸಂಪರ್ಕ ಮತ್ತು ಮಾರ್ಕೆಟಿಂಗ್​ ಕ್ಷೇತ್ರಕ್ಕೆ ಕಾಲಿಟ್ಟಿದ್​ದರು. ಅವರು ಭಾರತದ ವರ್ಲ್ಡ್ ವೈಡ್ ಫಂಡ್​​ ಸಂಸ್ಥೆಯ ಪ್ರಮುಖ ದಾನಿಗಳಲ್ಲಿ ಒಬ್ಬರಾಗಿದ್ದರು.

ಗಣ್ಯರ ಸಂತಾಪಗಳು

ಗೀತಾಂಜಲಿ ಅಯ್ಯರ್ ಅವರು ನಮ್ಮ ಟಿವಿ ಪರದೆಗಳನ್ನು ಅಲಂಕರಿಸಿದ ದಿನಗಳನ್ನು ನಾವು ಪ್ರೀತಿಯಿಂದ ನೆನಪಿಸಿಕೊಳ್ಳುತ್ತೇವೆ. ಅವರು ಸುದ್ದಿ ನೋಡುವ ಅನುಭವಗಳ ಮೇಲೆ ಅಳಿಸಲಾಗದ ಛಾಪು ಮೂಡಿಸಿದವರು. ಅಕಾಲಿಕ ನಿಧನದಿಂದ ದುಃಖಿತನಾಗಿದ್ದೇನೆ. ಅವರ ಪ್ರೀತಿಪಾತ್ರರಿಗೆ ನನ್ನ ಸಂತಾಪಗಳು. ಅವರಿಗೆ ಚಿರಶಾಂತಿ ಸಿಗಲಿ ಎಂದು ಕಾಂಗ್ರೆಸ್ ನಾಯಕಿ ನೆಟ್ಟಾ ಡಿಸೋಜಾ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: Narendra Modi: ಅಮೆರಿಕ ಸಂಸತ್‌ನಲ್ಲಿ ಮೋದಿ ಭಾಷಣದ ಮೋಡಿ; ಆಹ್ವಾನ ಸ್ವೀಕರಿಸಿದ ಪ್ರಧಾನಿ

ಖ್ಯಾತ ಪತ್ರಕರ್ತೆ ಶೀಲಾ ಭಟ್, ಭಾರತದ ಅತ್ಯುತ್ತಮ ಟಿವಿ ನ್ಯೂಸ್ ರೀಡರ್​ಗಳಲ್ಲಿ ಒಬ್ಬರಾದ ಗೀತಾಂಜಲಿ ಅಯ್ಯರ್ ಅವರು ಇಂದು ನಿಧನರಾದರು. ಅವರ ಕುಟುಂಬಕ್ಕೆ ನನ್ನ ಸಂತಾಪಗಳು ಎಂದು ಬರೆದುಕೊಂಡಿದ್ದಾರೆ.

Exit mobile version