ಪಣಜಿ: ಕೇಂದ್ರ ಸರ್ಕಾರವು ಬಳಕೆಯಲ್ಲಿ ಇಲ್ಲದ 65ಕ್ಕೂ ಅಧಿಕ ಕಾನೂನುಗಳು ಹಾಗೂ ನಿಬಂಧನೆಗಳನ್ನು ರದ್ದುಗೊಳಿಸಲು (Centre To Remove 65 Laws) ಮಾರ್ಚ್ 13ರಿಂದ ಆರಂಭವಾಗುವ ಸಂಸತ್ ಬಜೆಟ್ ಅಧಿವೇಶನದಲ್ಲಿ ವಿಧೇಯಕ ಮಂಡಿಸಲಾಗುವುದು ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಮಾಹಿತಿ ನೀಡಿದ್ದಾರೆ.
ಗೋವಾದಲ್ಲಿ ನಡೆದ 23ನೇ ಕಾಮನ್‌ವೆಲ್ತ್ ಲಾ ಕಾನ್ಫರೆನ್ಸ್‌ನಲ್ಲಿ ಮಾತನಾಡಿದ ಅವರು, “ಕಳೆದ ಎಂಟೂವರೆ ವರ್ಷದಲ್ಲಿ ಕೇಂದ್ರ ಸರ್ಕಾರವು ಬಳಕೆಯಲ್ಲಿದ ಹಾಗೂ ಅನಗತ್ಯ 1,486 ಕಾನೂನುಗಳನ್ನು ರದ್ದುಗೊಳಿಸಿದೆ. ಇದೇ ಬಜೆಟ್ ಅಧಿವೇಶನದಲ್ಲಿ 65 ಕಾನೂನುಗಳನ್ನು ರದ್ದುಗೊಳಿಸುವ ದಿಸೆಯಲ್ಲಿ ವಿಧೇಯಕ ಮಂಡಿಸಲಾಗುವುದು” ಎಂದು ಮಾಹಿತಿ ನೀಡಿದರು.
“ನ್ಯಾಯಾಂಗದಲ್ಲಿ ಡಿಜಿಟಲ್ ವ್ಯವಸ್ಥೆ ಅಳವಡಿಕೆ ಕುರಿತು ಮಾತನಾಡಿದ ಅವರು, “ದೇಶದ ಕೋರ್ಟ್‌ಗಳಲ್ಲಿ 4.98 ಕೋಟಿ ಪ್ರಕರಣಗಳು ಬಾಕಿ ಇವೆ. ತಂತ್ರಜ್ಞಾನ ಬಳಸಿ ಇವುಗಳ ವಿಲೇವಾರಿಗೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ಪೇಪರ್‌ಲೆಸ್ ನ್ಯಾಯಾಂಗ ವ್ಯವಸ್ಥೆಯು ಸರ್ಕಾರದ ಗುರಿಯಾಗಿದೆ” ಎಂದರು.
ಇದನ್ನೂ ಓದಿ: Kiren Rijiju: ಸುಪ್ರೀಂ ಕೋರ್ಟ್ ನಮಗೆ ಎಚ್ಚರಿಕೆ ನೀಡುವ ಹಾಗಿಲ್ಲ, ಬಿಕ್ಕಟ್ಟು ಮುಂದುವರಿಸಿದ ಕಿರಣ್ ರಿಜಿಜು