ಪಟನಾ: ಇತ್ತೀಚೆಗೆ ಅತಿಯಾದ ಡಿಜೆ ಶಬ್ದದಿಂದ ಹೃದಯಾಘಾತವುಂಟಾಗಿ ಮೃತಪಡುತ್ತಿರುವವರ ಸಂಖ್ಯೆ ಜಾಸ್ತಿಯಾಗುತ್ತಿದೆ. ಈ ಮಾತಿಗೆ ನಿದರ್ಶನ ಎಂಬಂತೆ, ಬಿಹಾರದಲ್ಲಿ ಮದುವೆ ವೇದಿಕೆ ಮೇಲೆಯೇ ಕುಸಿದು ಮದುಮಗ (Bihar Groom Dies) ಮೃತಪಟ್ಟಿದ್ದು, ಜೋರಾದ ಡಿಜೆ ಶಬ್ದವೇ ಇದಕ್ಕೆ ಕಾರಣ ಎಂದು ತಿಳಿದುಬಂದಿದೆ.
ಬಿಹಾರದ ಸೀತಾಮರ್ಹಿ ಜಿಲ್ಲೆಯಲ್ಲಿ ಕಳೆದ ಬುಧವಾರ ಮದುಮಗ ಮೃತಪಟ್ಟಿದ್ದಾನೆ. ಸುರೇಂದ್ರ ಕುಮಾರ್ ಹಾಗೂ ಮದುಮಗಳು ವೇದಿಕೆ ಮೇಲೆ ನಿಂತಿದ್ದರು. ಆಗಷ್ಟೇ ಇಬ್ಬರೂ ಹಾರ ಬದಲಾಯಿಸಿಕೊಂಡಿದ್ದರು. ಇದೇ ವೇಳೆ ಡಿಜೆ ಶಬ್ದ ಜೋರಾಗಿ ಕೇಳಿಸುತ್ತಿತ್ತು. ಹಲವು ಬಾರಿ ಸೌಂಡ್ ಕಡಿಮೆ ಮಾಡುವಂತೆ ಸುರೇಂದ್ರ ಕುಮಾರ್ ಹೇಳಿದ್ದರು. ಆದರೂ, ಡಿಜೆ ಶಬ್ದವು ಕಡಿಮೆ ಮಾಡಿರಲಿಲ್ಲ. ಇದರಿಂದಾಗಿ ಸುರೇಂದ್ರ ಕುಮಾರ್ ವೇದಿಕೆ ಮೇಲೆಯೇ ಕುಸಿದಿದ್ದಾರೆ.
ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟೊತ್ತಿಗಾಗಲೇ ಅವರು ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ. ಹಾಗೆಯೇ, ಡಿಜೆ ಅತಿಯಾದ ಶಬ್ದದಿಂದ ಹೃದಯಾಘಾತವುಂಟಾಗಿ ಸುರೇಂದ್ರ ಕುಮಾರ್ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಗಣೇಶ ವಿಸರ್ಜನೆ | ಡಿಜೆ ಸೌಂಡ್‌ಗೆ ವ್ಯಕ್ತಿ ಹೃದಯಾಘಾತದಿಂದ ಸಾವು?