ಗಾಂಧಿನಗರ: ಪ್ರಧಾನಿ ನರೇಂದ್ರ ಮೋದಿ ಅವರ ಪದವಿ ಪ್ರಮಾಣಪತ್ರ (Modi Degree Certificate:) ನೀಡಬೇಕು ಎಂಬುದಾಗಿ ಗುಜರಾತ್ ವಿಶ್ವವಿದ್ಯಾಲಯಕ್ಕೆ ನಿರ್ದೇಶನ ನೀಡಬೇಕು ಎಂದು ಸಲ್ಲಿಸಿದ ಅರ್ಜಿಯ ಕುರಿತ ತೀರ್ಪನ್ನು ಗುಜರಾತ್ ಹೈಕೋರ್ಟ್ ಕಾಯ್ದಿರಿಸಿದೆ.
ನರೇಂದ್ರ ಮೋದಿ ಅವರ ಪದವಿ ಪ್ರಮಾಣಪತ್ರ ನೀಡಬೇಕು ಎಂಬುದಾಗಿ ಗುಜರಾತ್ ವಿಶ್ವವಿದ್ಯಾಲಯಕ್ಕೆ ಮುಖ್ಯ ಮಾಹಿತಿ ಆಯುಕ್ತರು (CIC) ಮಾಡಿದ ಆದೇಶ ಪ್ರಶ್ನಿಸಿ ಗುಜರಾತ್ ವಿವಿಯು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಎರಡೂ ಕಡೆಯ ವಾದ-ಪ್ರತಿವಾದ ಆಲಿಸಿದ ನ್ಯಾ.ಬಿರೇನ್ ವೈಷ್ಣವ್ ಅವರ ಏಕಸದಸ್ಯ ಪೀಠವು ತೀರ್ಪು ಕಾಯ್ದಿರಿಸಿದೆ.
ಇದನ್ನೂ ಓದಿ: Dawoodi Bohra Muslims: ನಾನಿಲ್ಲಿ ಬೋಹ್ರಾ ಮುಸ್ಲಿಂ ಕುಟುಂಬದ ಸದಸ್ಯನಾಗಿ ಬಂದಿರುವೆ ಎಂದ ಮೋದಿ, ಮುಖಂಡರ ಜತೆ ಒಡನಾಟ
ವಿವಿ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, “ಯಾವುದೇ ವಿವಿಯಿಂದ ಪದವಿ ಪಡೆದ ವ್ಯಕ್ತಿ ಮಾತ್ರ ತಾನು ಅಧ್ಯಯನ ಮಾಡಿದ ವಿವಿಯಿಂದ ಪದವಿ ಪ್ರಮಾಣಪತ್ರಕ್ಕೆ ಮನವಿ ಸಲ್ಲಿಸಬಹುದು. ಆದರೆ, ಮೂರನೇ ವ್ಯಕ್ತಿಯು ಕೋರಿಕೆ ಸಲ್ಲಿಸಲು ಆಗುವುದಿಲ್ಲ” ಎಂದರು. 1978ರಲ್ಲಿ ಗುಜರಾತ್ ವಿಶ್ವವಿದ್ಯಾಲಯದಿಂದ ಮೋದಿ ಪದವಿ ಪೂರ್ಣಗೊಳಿಸಿದ್ದು, 1983ರಲ್ಲಿ ದೆಹಲಿ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿರುವುದಾಗಿ ಅವರೇ ಹೇಳಿಕೊಂಡಿದ್ದಾರೆ.