ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ ಮತ ಎಣಿಕೆ ಇಂದು ಬೆಳಗ್ಗೆ 8ಗಂಟೆಯಿಂದ ಪ್ರಾರಂಭವಾಗಿದೆ. ಹಿಮಾಚಲ ಪ್ರದೇಶದಲ್ಲಿ ನವೆಂಬರ್ 12ರಂದು ವಿಧಾನಸಭೆ ಚುನಾವಣೆ ನಡೆದಿತ್ತು. ಹಾಗೇ, ಗುಜರಾತ್ನಲ್ಲಿ ಡಿಸೆಂಬರ್ 1 ಮತ್ತು 5ರಂದು, ಎರಡು ಹಂತದಲ್ಲಿ ಮತದಾನ ನಡೆದಿತ್ತು. ಇವೆರಡೂ ರಾಜ್ಯಗಳ ಮತ ಎಣಿಕೆ ಆಯಾ ರಾಜ್ಯಗಳಲ್ಲಿ ಪ್ರಾರಂಭವಾಗಿದೆ. ಹಿಮಾಚಲ ಪ್ರದೇಶ ಮತ್ತು ಗುಜರಾತ್ ಎರಡೂ ರಾಜ್ಯಗಳಲ್ಲಿ ಬಿಜೆಪಿಯೇ ಗೆಲ್ಲುತ್ತದೆ ಎಂಬುದು ಚುನಾವಣೋತ್ತರ ಸಮೀಕ್ಷೆಗಳ ವರದಿ. ಈಗಾಗಲೇ ಎರಡೂ ರಾಜ್ಯಗಳಲ್ಲಿ ಪ್ರಾರಂಭ ಆಗಿರುವ ಮತ ಎಣಿಕೆಯ ಕ್ಷಣಕ್ಷಣದ ಮಾಹಿತಿ, ನಿಮ್ಮ ವಿಸ್ತಾರ ನ್ಯೂಸ್ (http://www.vistaranews.com)ವೆಬ್ಸೈಟ್ನಲ್ಲಿ.
ಹಿಮಾಚಲ ಪ್ರದೇಶದಲ್ಲಿ ಮುಂದುವರಿದ ಸಮಬಲದ ಫೈಟ್
ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಸಮಬಲದ ಫೈಟ್ ಹಾಗೇ ಮುಂದುವರಿದಿದೆ. ಬಿಜೆಪಿ 31 ಸ್ಥಾನಗಳಲ್ಲಿ ಮತ್ತು ಕಾಂಗ್ರೆಸ್ 33 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.
ಗುಜರಾತ್ನಲ್ಲಿ ವೋಟ್ ಶೇರಿಂಗ್ನಲ್ಲಿ ಬಿಜೆಪಿಗೆ ಸಿಂಹಪಾಲು
ಗುಜರಾತ್ನಲ್ಲಿ ವೋಟ್ ಶೇರಿಂಗ್ನಲ್ಲಿ ಬಿಜೆಪಿ ಶೇ.52.8ರಷ್ಟು ಮತ ಪಡೆದುಕೊಂಡಿದೆ. ಹಾಗೇ, ಕಾಂಗ್ರೆಸ್ ಶೇ. 26.8 ಮತ್ತು ಆಮ್ ಆದ್ಮಿ ಪಕ್ಷ ಶೇ.14ರಷ್ಟು ಮತ ಪಡೆದುಕೊಂಡಿವೆ.
ಗುಜರಾತ್ನಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ
ಗುಜರಾತ್ನಲ್ಲಿ ಶೇ. 50ರಷ್ಟು ಮತಗಳನ್ನು ಬಿಜೆಪಿ ಪಡೆದುಕೊಂಡಿದೆ. ಈಗಾಗಲೇ 150 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿರುವ ಬಿಜೆಪಿ ಗೆಲುವು ಪಕ್ಕಾ ಎನ್ನುವ ಸನ್ನಿವೇಶ ಈಗಲೇ ನಿರ್ಮಾಣವಾಗಿದೆ. ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ ಶುರುವಾಗಿದೆ.
ಹಿಮಾಚಲ ಪ್ರದೇಶ ವಿಧಾನಸಭೆ ರಿಸಲ್ಟ್
ಪರಿಣಾಮ ಬೀರದ ಆಪ್
ಈ ಬಾರಿ ಎಲೆಕ್ಷನ್ ನಲ್ಲಿ ಆಮ್ ಆದ್ಮಿ ಪಾರ್ಟಿ ಸ್ಪರ್ಧಿಸಿದ್ದರೂ ಅಂಥ ಪರಿಣಾಮ ಉಂಟಾಗಿಲ್ಲ. ನಿರೀಕ್ಷೆಯಂತೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಹೋರಾಟವೇ ಮತ್ತೆ ಪ್ರತಿಫಲನವಾಗಿದೆ. ಈ ವರೆಗಿನ ಟ್ರೆಂಡ್ ಪ್ರಕಾರ, ಕಾಂಗ್ರೆಸ್-ಬಿಜೆಪಿ ಮಧ್ಯೆ ನೇರ ಪೈಪೋಟಿ ಏರ್ಪಟ್ಟಿದೆ. ಸದ್ಯದ ಮಾಹಿತಿಯ ಪ್ರಕಾರ, ಕಾಂಗ್ರೆಸ್ 33 ಮತ್ತು ಬಿಜೆಪಿ 32 ಕ್ಷೇತ್ರಗಳಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿದೆ. ಆಪ್ ಲೆಕ್ಕಕ್ಕೇ ಇಲ್ಲ.
ಗುಜರಾತ್ ಎಲೆಕ್ಷನ್ ರಿಸಲ್ಟ್
ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಪತ್ನಿ ರಿವಾಬಾ ಜಡೇಜಾ ಅವರು ಜಾಮನಗರ ನಾರ್ತ್ ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.