Site icon Vistara News

Election Results Live Updates| ಗುಜರಾತ್​​ನಲ್ಲಿ 7ನೇ ಬಾರಿಗೆ ಅರಳಿದ ಕಮಲ; ಕೈ ಹಿಡಿದ ಹಿಮಾಚಲ ಪ್ರದೇಶ

election Result 2022

ಗುಜರಾತ್​ ಮತ್ತು ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ ಮತ ಎಣಿಕೆ ಇಂದು ಬೆಳಗ್ಗೆ 8ಗಂಟೆಯಿಂದ ಪ್ರಾರಂಭವಾಗಿದೆ. ಹಿಮಾಚಲ ಪ್ರದೇಶದಲ್ಲಿ ನವೆಂಬರ್​ 12ರಂದು ವಿಧಾನಸಭೆ ಚುನಾವಣೆ ನಡೆದಿತ್ತು. ಹಾಗೇ, ಗುಜರಾತ್​​ನಲ್ಲಿ ಡಿಸೆಂಬರ್​ 1 ಮತ್ತು 5ರಂದು, ಎರಡು ಹಂತದಲ್ಲಿ ಮತದಾನ ನಡೆದಿತ್ತು. ಇವೆರಡೂ ರಾಜ್ಯಗಳ ಮತ ಎಣಿಕೆ ಆಯಾ ರಾಜ್ಯಗಳಲ್ಲಿ ಪ್ರಾರಂಭವಾಗಿದೆ. ಹಿಮಾಚಲ ಪ್ರದೇಶ ಮತ್ತು ಗುಜರಾತ್​ ಎರಡೂ ರಾಜ್ಯಗಳಲ್ಲಿ ಬಿಜೆಪಿಯೇ ಗೆಲ್ಲುತ್ತದೆ ಎಂಬುದು ಚುನಾವಣೋತ್ತರ ಸಮೀಕ್ಷೆಗಳ ವರದಿ. ಈಗಾಗಲೇ ಎರಡೂ ರಾಜ್ಯಗಳಲ್ಲಿ ಪ್ರಾರಂಭ ಆಗಿರುವ ಮತ ಎಣಿಕೆಯ ಕ್ಷಣಕ್ಷಣದ ಮಾಹಿತಿ, ನಿಮ್ಮ ವಿಸ್ತಾರ ನ್ಯೂಸ್​ (http://www.vistaranews.com)ವೆಬ್​ಸೈಟ್​​ನಲ್ಲಿ.

Lakshmi Hegde

ಗುಜರಾತ್​​ನಲ್ಲಿ ಮ್ಯಾಜಿಕ್​ ನಂಬರ್​ ದಾಟಿ ಮುನ್ನಡೆ ಸಾಧಿಸಿದ ಬಿಜೆಪಿ

ಗುಜರಾತ್​ನಲ್ಲಿ ಬೆಳಗ್ಗಿನ ಟ್ರೆಂಡ್​​ನಲ್ಲೇ ಬಿಜೆಪಿ ಮ್ಯಾಜಿಕ್​ ನಂಬರ್​ ದಾಟಿ ಮುನ್ನಡೆ ಸಾಧಿಸಿದೆ. ಗುಜರಾತ್​ನಲ್ಲಿ ಸರ್ಕಾರ ರಚನೆ ಮಾಡಬೇಕೆಂದರೆ ಯಾವುದೇ ಪಕ್ಷ ಕನಿಷ್ಠ 92 ಸೀಟ್​​ಗಳನ್ನು ಗೆಲ್ಲಬೇಕು. ಸದ್ಯ ಬಿಜೆಪಿ 105 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್​ 44 ಮತ್ತು ಆಮ್​ ಆದ್ಮಿ ಪಕ್ಷ 7 ಕ್ಷೇತ್ರಗಳಲ್ಲಿ ಮುಂದಿವೆ.

Lakshmi Hegde

ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್​-ಬಿಜೆಪಿ ಸಮಬಲದ ಫೈಟ್​

ಹಿಮಾಚಲ ಪ್ರದೇಶದಲ್ಲಿ ಮತ ಎಣಿಕೆ ಶುರುವಾದಾಗಿನಿಂದಲೂ ಕಾಂಗ್ರೆಸ್​​ ಮತ್ತು ಬಿಜೆಪಿ ಮಧ್ಯೆ ಸಮಬಲದ ಫೈಟ್​ ಶುರುವಾಗಿದೆ. ಸದ್ಯದ ಟ್ರೆಂಡ್​​ನಲ್ಲಿ ಬಿಜೆಪಿ 31 ಕ್ಷೇತ್ರಗಳಲ್ಲಿ ಮತ್ತು ಕಾಂಗ್ರೆಸ್​ 33 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

Mallikarjun Tippar

ವೀರಗಾಮ್ ಕ್ಷೇತ್ರದಲ್ಲಿ ಹಾರ್ದಿಕ್ ಪಟೇಲ್ ಹಿನ್ನಡೆಯಲ್ಲಿದ್ದಾರೆ

Mallikarjun Tippar

ಗುಜರಾತ್ ರಿಸಲ್ಟ್

ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಮುನ್ನಡೆಯಲ್ಲಿದ್ದಾರೆ.

Lakshmi Hegde

ಗುಜರಾತ್​​ನಲ್ಲಿ ಬಿಜೆಪಿ ಮುನ್ನಡೆ

ಗುಜರಾತ್​​ನಲ್ಲಿ ಬಿಜೆಪಿ ನಾಗಾಲೋಟ ಮುಂದುವರಿದಿದೆ. ಕಮಲ 103 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಕಾಂಗ್ರೆಸ್​ 29 ಮತ್ತು ಆಮ್​ ಆದ್ಮಿ ಪಕ್ಷ 4 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

Exit mobile version