Site icon Vistara News

Election Results Live Updates| ಗುಜರಾತ್​​ನಲ್ಲಿ 7ನೇ ಬಾರಿಗೆ ಅರಳಿದ ಕಮಲ; ಕೈ ಹಿಡಿದ ಹಿಮಾಚಲ ಪ್ರದೇಶ

election Result 2022

ಗುಜರಾತ್​ ಮತ್ತು ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ ಮತ ಎಣಿಕೆ ಇಂದು ಬೆಳಗ್ಗೆ 8ಗಂಟೆಯಿಂದ ಪ್ರಾರಂಭವಾಗಿದೆ. ಹಿಮಾಚಲ ಪ್ರದೇಶದಲ್ಲಿ ನವೆಂಬರ್​ 12ರಂದು ವಿಧಾನಸಭೆ ಚುನಾವಣೆ ನಡೆದಿತ್ತು. ಹಾಗೇ, ಗುಜರಾತ್​​ನಲ್ಲಿ ಡಿಸೆಂಬರ್​ 1 ಮತ್ತು 5ರಂದು, ಎರಡು ಹಂತದಲ್ಲಿ ಮತದಾನ ನಡೆದಿತ್ತು. ಇವೆರಡೂ ರಾಜ್ಯಗಳ ಮತ ಎಣಿಕೆ ಆಯಾ ರಾಜ್ಯಗಳಲ್ಲಿ ಪ್ರಾರಂಭವಾಗಿದೆ. ಹಿಮಾಚಲ ಪ್ರದೇಶ ಮತ್ತು ಗುಜರಾತ್​ ಎರಡೂ ರಾಜ್ಯಗಳಲ್ಲಿ ಬಿಜೆಪಿಯೇ ಗೆಲ್ಲುತ್ತದೆ ಎಂಬುದು ಚುನಾವಣೋತ್ತರ ಸಮೀಕ್ಷೆಗಳ ವರದಿ. ಈಗಾಗಲೇ ಎರಡೂ ರಾಜ್ಯಗಳಲ್ಲಿ ಪ್ರಾರಂಭ ಆಗಿರುವ ಮತ ಎಣಿಕೆಯ ಕ್ಷಣಕ್ಷಣದ ಮಾಹಿತಿ, ನಿಮ್ಮ ವಿಸ್ತಾರ ನ್ಯೂಸ್​ (http://www.vistaranews.com)ವೆಬ್​ಸೈಟ್​​ನಲ್ಲಿ.

Lakshmi Hegde

ಗುಜರಾತ್​ ರಿಸಲ್ಟ್​

ಗುಜರಾತ್​​ನ ಭುಜ್​ ವಿಧಾನ ಸಭಾ ಕ್ಷೇತ್ರದಲ್ಲಿ ಎಐಎಂಐಎಂ ಅಭ್ಯರ್ಥಿ ಶಕೀಲ್​ ಮೊಹಮ್ಮದ್​ ಸಮಾ ಅವರು ಮುನ್ನಡೆ ಸಾಧಿಸಿದ್ದಾರೆ. ಇಲ್ಲಿ ಬಿಜೆಪಿಯಿಂದ ಕೇಶವ್​ಲಾಲ್​ ಪಟೇಲ್​, ಕಾಂಗ್ರೆಸ್​​ನಿಂದ ಅರ್ಜನ್​ ಭಾಯ್​ ಭುಡಿಯಾ ಮತ್ತು ಆಮ್​ ಆದ್ಮಿ ಪಕ್ಷದಿಂದ ರಾಜೇಶ್ ಪಂಡೋರಿಯಾ ಚುನಾವಣಾ ಕಣದಲ್ಲಿದ್ದಾರೆ.

Lakshmi Hegde

ಗುಜರಾತ್​ ರಿಸಲ್ಟ್​

ಗುಜರಾತ್​​ನ ಮೊರ್ಬಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕಾಂತಿಲಾಲ್​​ ಅಮೃತಿಯಾ ಅವರು ಒಟ್ಟಾರೆ 10,156 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಈ ಮೊರ್ಬಿಯಲ್ಲಿ ಇತ್ತೀಚೆಗಷ್ಟೇ ಪುರಾತನ ಕಾಲದ ಸೇತುವೆ ಕುಸಿದು 140 ಮಂದಿ ಮೃತಪಟ್ಟಿದ್ದರು. ಆಗ ಗುಜರಾತ್​ ಸರ್ಕಾರದ ವಿರುದ್ಧ ತೀವ್ರ ಟೀಕೆ ಕೇಳಿಬಂದಿತ್ತು.

Lakshmi Hegde

ಗುಜರಾತ್​​ನಲ್ಲಿ 150ರ ಗಡಿ ದಾಟಿದ ಬಿಜೆಪಿ

ಗುಜರಾತ್​ ವಿಧಾನ ಸಭೆ ಚುನಾವಣೆಯಲ್ಲಿ ಈ ಸಲವೂ ಗುಜರಾತ್​ ಗೆಲ್ಲುವುದು ಪಕ್ಕಾ ಆಗಿದೆ. ಇಲ್ಲಿ ಈಗಲೇ 157 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್​ 16 ಮತ್ತು ಆಮ್​ ಆದ್ಮಿ ಪಕ್ಷ 7 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ. ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆಯೂ ಪ್ರಾರಂಭವಾಗಿದೆ.

Lakshmi Hegde

ಗುಜರಾತ್​​ ಆಪ್​ ಸಿಎಂ ಅಭ್ಯರ್ಥಿಗೆ ಮುನ್ನಡೆ

ಗುಜರಾತ್​ನಲ್ಲಿ ಆಮ್​ ಆದ್ಮಿ ಪಕ್ಷ ಕೇವಲ 6 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಇದರಲ್ಲಿ ಗುಜರಾತ್​​ನ ಆಮ್​ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಇಸುದನ್ ಗಧ್ವಿ ಅವರು ಖಂಬಾಲಿಯಾ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್​ ಅಭ್ಯರ್ಥಿಗಳಿಗಿಂತಲೂ ಮುಂದಿದ್ದಾರೆ.

Lakshmi Hegde

ಹಿಮಾಚಲ ಪ್ರದೇಶ ರಿಸಲ್ಟ್​

ಹಿಮಾಚಲ ಪ್ರದೇಶದ ನಾದೌನ್​ ವಿಧಾನಸಾಭಾ ಕ್ಷೇತ್ರದ ಅಭ್ಯರ್ಥಿ, ಹಿರಿಯ ಕಾಂಗ್ರೆಸ್​ ನಾಯಕ ಸುಖ್ವಿಂದರ್​ ಸಿಂಗ್​ ಸುಖು ಅವರು ಬಿಜೆಪಿ ಮತ್ತು ಆಪ್​ ಅಭ್ಯರ್ಥಿಗಳಿಗಿಂತಲೂ ಮುನ್ನಡೆ ಸಾಧಿಸಿದ್ದಾರೆ.

Exit mobile version