ಸೂರತ್: ದಿಲ್ಲಿ ಸಿಎಂ ಹಾಗೂ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಅವರು, ಆಪ್ ಸೂರತ್ ನಗರದಲ್ಲಿ 7ರಿಂದ 8 ಸೀಟು ಗೆದ್ದು, ಗುಜರಾತ್‌ನಲ್ಲಿ ಸರ್ಕಾರ ರಚನೆ ಮಾಡಲಿದೆ ಎಂದು ಲಿಖಿತ ಭವಿಷ್ಯ ನುಡಿದ್ದಾರೆ. ತಿಂಗಳ ಹಿಂದೆ ಅವರು ಇದೇ ರೀತಿ, ಕಾಂಗ್ರೆಸ್ ಐದಕ್ಕಿಂತ ಕಡಿಮೆ ಸೀಟು ಗೆಲ್ಲಲಿದೆ ಎಂದು ಲಿಖಿತ ಭವಿಷ್ಯ ನುಡಿದಿದ್ದರು. ಇದೀಗ ಮತ್ತೆ ಆಪ್ ಗುಜರಾತ್‌ನಲ್ಲಿ ಒಟ್ಟಾರೆ 92 ಸೀಟು ಗೆಲ್ಲಲಿದೆ ಎಂದು ಕಾಗದದ ಮೇಲೆ ಬರೆದು ಮಾಧ್ಯಮಗಳು ಎದುರು ಪ್ರದರ್ಶಿಸಿದ್ದಾರೆ.
ಸೂರತ್‌ನಲ್ಲಿ ಆಮ್ ಆದ್ಮಿ ಪಾರ್ಟಿ 7ರಿಂದ 8 ಕ್ಷೇತ್ರಗಳನ್ನು ಗೆಲ್ಲಲಿದೆ ಮತ್ತು ಗುಜರಾತ್ ಆಪ್ ಮುಖ್ಯಸ್ಥ 33 ವರ್ಷದ ಗೋಪಾಲ್ ಇಟಾಲಿಯಾ ಅವರು ಪ್ರಚಂಡ ಮತಗಳೊಂದಿಗೆ ಗೆಲುವು ಸಾಧಿಸಲಿದ್ದಾರೆ. ಗುಜರಾತ್ ಸಿಎಂ ಅಭ್ಯರ್ಥಿ ಇಸುದಾನ್ ಗಢವಿ ಮತ್ತು ಪಾಟಿದಾರ್ ಆಂದೋಲನದ ಮಾಜಿ ನಾಯಕ ಅಲ್ಪೇಷ್ ಕಥ್ರಿಯಾ ಅವರೂ ಗೆಲ್ಲಲಿದ್ದಾರೆಂದು ಅವರು ಭವಿಷ್ಯ ನುಡಿದಿದ್ದಾರೆ.
ಇದೇ ವೇಳೆ, ಆಮ್ ಆದ್ಮಿ ಪಾರ್ಟಿಗೆ ಮತ ನೀಡುವಂತೆ ಮಹಿಳೆಯರು ಮತ್ತು ಯುವಕರಿಗೆ ಮನವಿ ಮಾಡಿದರು. ಅಲ್ಲದೇ, ಯಾವುದೇ ಖಾಸಗಿ ಶಾಲೆಯು ಶುಲ್ಕವನ್ನು ಹೆಚ್ಚಿಸಲು ತಮ್ಮ ಸರ್ಕಾರ ಅವಕಾಶ ನೀಡುವುದಿಲ್ಲ. ಎಲ್ಲರಿಗೂ ಮುಕ್ತ ಮತ್ತು ಅತ್ಯುತ್ತಮ ವೈದ್ಯಕೀಯ ಚಿಕಿತ್ಸೆ ನೀಡಲಾಗುವುದು. ಅಲ್ಲದೇ ರಾಜ್ಯವನ್ನು ನಿರುದ್ಯೋಗ ಮುಕ್ತ ರಾಜ್ಯವನ್ನಾಗಿ ಮಾಡುವ ಭರವಸೆಯನ್ನು ಅವರು ನೀಡಿದರು.
ಇದನ್ನೂ ಓದಿ | Gujarat Elections 2022 | ಗುಜರಾತ್ ಗೆಲ್ಲಲು ಸಿದ್ಧತೆ; 24 ಗಂಟೆ ಉಚಿತ ವಿದ್ಯುತ್ ಭರವಸೆ ನೀಡಿದ ಕೇಜ್ರಿವಾಲ್