Site icon Vistara News

Gujarat Election Result 2022 | ಸೇತುವೆ ದುರಂತ ಸಂಭವಿಸಿದ ಮೋರ್ಬಿ ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿ ಜಯಭೇರಿ!

BJP

ಮೋರ್ಬಿ: 135 ಜನರ ಸಾವಿಗೆ ಕಾರಣವಾಗಿದ್ದ ಮೋರ್ಬಿ ಸೇತುವೆ ದುರಂತವು ಗುಜರಾತ್ ಎಲೆಕ್ಷನ್ ಮೇಲೆ ಪರಿಣಾಮ ಬೀರುತ್ತದೆ ಎಂದು ಭಾವಿಸಲಾಗಿತ್ತು. ಆದರೆ, ರಿಸಲ್ಟ್ ವಿಶ್ಲೇಷಿಸಿದರೆ, ಜನರು ಈ ಬಗ್ಗೆ ತಲೆ ಕೆಡಿಸಿಕೊಂಡೇ ಇಲ್ಲ ಎಂಬುದು ವೇದ್ಯವಾಗುತ್ತದೆ. ಯಾಕೆಂದರೆ, ಭಾರತೀಯ ಜನತಾ ಪಾರ್ಟಿ(ಬಿಜೆಪಿ)ಯು ಮೋರ್ಬಿ ಜಿಲ್ಲೆಯ ಎಲ್ಲ ಮೂರೂ ವಿಧಾನಸಭೆ ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದೆ. 2017ರ ವಿಧಾನಸಭೆ ಚುನಾವಣೆ ವೇಳೆ, ಈ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು(Gujarat Election Result 2022).

ಮೋರ್ಬಿಯಲ್ಲಿ ಬಿಜೆಪಿ ಅಭ್ಯರ್ಥಿ ಕಾಂತಿಲಾಲ್ ಅಮೃತಿಯಾ ಅವರು ಕಾಂಗ್ರೆಸ್‌ನ ಜಯಂತಿಲಾಲ್ ಪಟೇಲ್ ವಿರುದ್ಧ ದಾಖಲೆಯ 62,079 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಕಾಂತಿಭಾಯಿ ಅಮೃತಿಯಾ ಅವರು, ಸೇತುವೆ ದುರಂತದ ವೇಳೆ, ಸ್ವತಃ ನದಿಗೆ ಧುಮುಕಿ ಜನರನ್ನು ರಕ್ಷಿಸುವ ಪ್ರಯತ್ನ ಮಾಡಿದ್ದರು. ಈ ತಮ್ಮ ಕಾರ್ಯವನ್ನು ಪ್ರಚಾರಕ್ಕೆ ಬಳಸಿಕೊಂಡರು ಎಂದು ಹೇಳಲಾಗುತ್ತಿದೆ.

ಇದೇ ವೇಳೆ, ಟಂಕಾರಾ ಕ್ಷೇತ್ರದಲ್ಲೂ ಹಾಲಿ ಶಾಸಕ ಕಾಂಗ್ರೆಸ್‌ನ ಶಾಸಕ ಕಗಥಾರಾ ಅವರನ್ನು ಬಿಜೆಪಿಯ ದುರ್ಲಭಜೀ ದೇಥಾರಿಯಾ ಅವರು 10,256 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಇನ್ನೂ ವಂಕಾನೇರ್ ಕ್ಷೇತ್ರದಲ್ಲೂ ಬಿಜೆಪಿ ವಿಜಯ ಸಾಧಿಸಿದೆ. ಈ ಕ್ಷೇತ್ರವೂ ಕಾಂಗ್ರೆಸ್‌ನ ಭದ್ರಕೋಟೆಯಾಗಿತ್ತು. ಈ ಬಾರಿ ಬಿಜೆಪಿ ತನ್ನಕೈವಶ ಮಾಡಿಕೊಂಡಿದೆ. ಬಿಜೆಪಿಯ ಜಿತು ಸೋಮಾನಿ ಅವರು ಕಾಂಗ್ರೆಸ್‌ನ ಮಹಮದ್‌ಜಾವಿದ್ ಪಿರ್ಜಾದಾ ಅವರನ್ನು 19,955 ಮತಗಳ ಅಂತರಿಂದ ಸೋಲಿಸಿದ್ದಾರೆ.

ಇದನ್ನೂ ಓದಿ | Gujarat Election Results | ಮಸ್ಲಿಮ್‌ ಬಾಹುಳ್ಯದ ಕ್ಷೇತ್ರಗಳಲ್ಲೂ ಬಿಜೆಪಿ ಜಯಭೇರಿ; ಏನಿದು ತಂತ್ರ?

Exit mobile version