Site icon Vistara News

Election Result 2022 | ಗುಜರಾತ್‌, ಹಿಮಾಚಲ ಪ್ರದೇಶ ವಿಧಾನ ಸಭೆ ಚುನಾವಣೆ ಮತ ಎಣಿಕೆ ಶುರು

Election result_

ಅಹಮದಾಬಾದ್‌ : ನವೆಂಬರ್‌ ಹಾಗೂ ಈ ತಿಂಗಳ ಆರಂಭದಲ್ಲಿ ಮತದಾನ ನಡೆದಿದ್ದ ಗುಜರಾತ್‌ ಹಾಗೂ ಹಿಮಾಚಲ ಪ್ರದೇಶಗಳ ವಿಧಾನಸಭೆ ಚುನಾವಣೆಯ ಮತ ಎಣಿಕೆಗೆ ಶುರುವಾಗಿದ್ದು, ಗುಜರಾತ್‌ನಲ್ಲಿ ಬಿಜೆಪಿ ಮುನ್ನಡೆಯಲ್ಲಿದ್ದು, ಹಿಮಾಚಲ ಪ್ರದೇಶದಲ್ಲಿ ಜಿದ್ದಾಜಿದ್ದಿನ ಸ್ಪರ್ಧೆಯಿದೆ.

ಇದರ ಜತೆಗೆ ಉಭಯ ರಾಜ್ಯಗಳಲ್ಲಿ ನಡೆದ ಒಂದು ಲೋಕಸಭೆ ಹಾಗೂ ಆರು ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆಯ ಮತಗಳ ಎಣಿಕೆಯೂ ನಡೆಯುತ್ತಿದೆ.

ಗುಜರಾತ್‌ನ ಒಟ್ಟು ವಿಧಾನಸಭೆ ಕ್ಷೇತ್ರಗಳು 182. ಇದರಲ್ಲಿ 13 ಎಸ್‌ಸಿ ಹಾಗೂ 27 ಎಸ್‌ಟಿ ಮೀಸಲು ಕ್ಷೇತ್ರಗಳು. ಚುನಾವಣೆಯ ಮತದಾನಗಳು ಎರಡು ಹಂತಗಳಲ್ಲಿ, ಡಿಸೆಂಬರ್‌ 1 ಹಾಗೂ 5ರಂದು ನಡೆದಿದ್ದವು. ಗುಜರಾತ್‌ನಲ್ಲಿದ್ದ ಒಟ್ಟಾರೆ ಮತಗಳು 49,117,708. ಇದರಲ್ಲಿ 64.33% ಮತಗಳು ಚಲಾವಣೆಯಾಗಿದ್ದವು. ಕಳೆದ ಬಾರಿಯ ಫಲಿತಾಂಶ: ಬಿಜೆಪಿ 99, ಕಾಂಗ್ರೆಸ್‌ 77, ಐಎನ್‌ಡಿ 3, ಇತರ 2.

37 ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದೆ. ಸುಸಜ್ಜಿತ ವ್ಯವಸ್ಥೆ ಮಾಡಲಾಗಿದ್ದು, ಬಿಗಿ ಭದ್ರತೆ ಒದಗಿಸಲಾಗಿದೆ. 182 ಮತ ಎಣಿಕೆ ವೀಕ್ಷಕರು, 182 ಚುನಾವಣಾಧಿಕಾರಿಗಳು ಮತ್ತು 494 ಸಹಾಯಕ ಚುನಾವಣಾಧಿಕಾರಿಗಳು ಮತ ಎಣಿಕೆ ಕಾರ್ಯದಲ್ಲಿ ಭಾಗವಹಿಸಿದ್ದಾರೆ. ಎಣಿಕೆ ಪ್ರಕ್ರಿಯೆಯ ವಿಡಿಯೋ ಚಿತ್ರೀಕರಣ ನಡೆಯಯುತ್ತಿದೆ. ಮತಗಟ್ಟೆಗಳ ಬಳಿ ಸಿಎಪಿಎಫ್, ಎಸ್‌ಆರ್‌ಪಿಎಫ್‌ ಬಿಗಿ ಭದ್ರತೆ ಒದಗಿಸಲಾಗಿದೆ.

ಸಂಖ್ಯೆಯಲ್ಲಿ ಹಿಮಾಚಲ ಪ್ರದೇಶ

ಇಲ್ಲಿರುವ ವಿಧಾನಸಭೆ ಕ್ಷೇತ್ರಗಳು 68. ಎಲ್ಲ ಕಡೆಯೂ ಮೂರು ಪ್ರಮುಖ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಬಹುಜನ ಸಮಾಜ ಪಕ್ಷ ಕೂಡ 53 ಸ್ಥಾನಗಳಲ್ಲಿ ಸ್ಪರ್ಧಿಸಿದೆ. ನವೆಂಬರ್‌ 12ರಂದು ಇಲ್ಲಿ ಮತದಾನ ನಡೆಯಿತು. 74%ರಷ್ಟು ಮತದಾನವಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಅಧಿಕಾರಕ್ಕಾಗಿ ಹೋರಾಟ ನಡೆಯಲಿದೆ, ಮಧ್ಯೆ ಆಪ್‌ ತನ್ನ ಜಾಗ ಕಂಡುಕೊಳ್ಳಲಿದೆ ಎಂದು ಎಕ್ಸಿಟ್ ಪೋಲ್‌ಗಳು ಹೇಳಿವೆ. 2017ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 44 ಸ್ಥಾನಗಳನ್ನು ಗೆದ್ದು ಸರ್ಕಾರ ರಚಿಸಿತ್ತು. ಕಾಂಗ್ರೆಸ್ 21 ಸ್ಥಾನಗಳನ್ನು ಪಡೆದಿತ್ತು.

Exit mobile version