Site icon Vistara News

Demat Account | ಮಿಸ್‌ ಆಗಿ ವ್ಯಕ್ತಿಯ ಖಾತೆಗೆ 11 ಸಾವಿರ ಕೋಟಿ ರೂ. ಜಮೆ, ಮುಂದೇನಾಯಿತು?

stock trading

ಗಾಂಧಿನಗರ: ನಮ್ಮ ಬ್ಯಾಂಕ್‌ ಖಾತೆಗೆ ಅನಾಮಧೇಯ ವ್ಯಕ್ತಿಗಳು ಅಥವಾ ಖಾತೆಯಿಂದ ನೂರು ರೂ. ಜಮೆಯಾದರೂ, ಯಾರು ಜಮೆ ಮಾಡಿದರು ಎಂಬ ಪ್ರಶ್ನೆ ಮೂಡುತ್ತದೆ. ಇಂತಹದ್ದರಲ್ಲಿ ಗುಜರಾತ್‌ನಲ್ಲಿ ವ್ಯಕ್ತಿಯೊಬ್ಬನ ಡಿಮ್ಯಾಟ್‌‌ (Demat Account) (ಆನ್‌ಲೈನ್‌ ಮೂಲಕ ಹೂಡಿಕೆಗಾಗಿ ತೆಗೆಯುವ ಅಕೌಂಟ್) ಖಾತೆಗೆ ೧೧,೬೭೭ ಕೋಟಿ ರೂ. ಜಮೆಯಾಗಿದೆ. ಇದರಿಂದ ಆನಂದ ತುಂದಿಲನಾದ ವ್ಯಕ್ತಿಯು ಎರಡು ಕೋಟಿ ರೂ.ಗಳನ್ನು ಸ್ಟಾಕ್‌ ಮಾರ್ಕೆಟ್‌ನಲ್ಲಿ ಹೂಡಿಕೆ ಮಾಡಿದ್ದಾನೆ. ಆದರೆ, ಇಷ್ಟೆಲ್ಲ ಸಂತೋಷವು ಕೆಲವೇ ಗಂಟೆವರೆಗೆ ಇತ್ತು ಎಂಬುದು ಮಾತ್ರ ವ್ಯಕ್ತಿಗೆ ಅರಗಿಸಿಕೊಳ್ಳಲು ತುಂಬ ದಿನ ಬೇಕಾಗಿದೆ.

ಅಹಮದಾಬಾದ್‌ ನಿವಾಸಿಯಾಗಿರುವ ರಮೇಶ್‌ ಸಾಗರ್‌ ಎಂಬುವರು ಆರು ವರ್ಷದಿಂದ ಸ್ಟಾಕ್‌ ಮಾರ್ಕೆಟ್‌ನಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಕಳೆದ ವರ್ಷ ಇವರು ಕೋಟಕ್‌ ಸೆಕ್ಯುರಿಟೀಸ್‌ ಡಿಮ್ಯಾಟ್‌ ಅಕೌಂಟ್‌ ತೆರೆದಿದ್ದಾರೆ. ಈ ಖಾತೆಗೆ ೧೧,೬೭೭ ಕೋಟಿ ರೂ. ಬ್ಯಾಂಕ್‌ ಸಿಬ್ಬಂದಿಯ ಎಡವಟ್ಟಿನಿಂದ ಜಮೆಯಾಗಿದೆ. ಇದಾದ ಬಳಿಕ ಹಣವನ್ನು ಹಿಂಪಡೆದ ಕಾರಣ ವ್ಯಕ್ತಿಯ ಸಂತಸವು ಕೆಲವೇ ಗಂಟೆಗಳಲ್ಲಿ ಕೊನೆಯಾಗಿದೆ.

“ಜುಲೈ ೨೬ರಂದು ನನ್ನ ಖಾತೆಗೆ 116,77,24,43,277 ರೂ. ಜಮೆಯಾಯಿತು. ಇದಾದ ಬಳಿಕ ನಾನು ಸ್ಟಾಕ್‌ ಮಾರ್ಕೆಟ್‌ನಲ್ಲಿ ಎರಡು ಕೋಟಿ ರೂ. ಹೂಡಿಕೆ ಮಾಡಿದೆ. ಅದರಿಂದ ಐದು ಲಕ್ಷ ರೂ. ಗಳಿಸಿದೆ. ಹಣ ಜಮೆಯಾದ ಎಂಟು ಗಂಟೆ ಬಳಿಕ ಬ್ಯಾಂಕ್‌ ಹಣವನ್ನು ವಾಪಸ್‌ ತೆಗೆದುಕೊಂಡಿತು” ಎಂದು ರಮೇಶ್‌ ತಿಳಿಸಿದ್ದಾರೆ. ಆದಾಗ್ಯೂ, ಈ ಕುರಿತು ಕೋಟಕ್‌ ಸೆಕ್ಯುರಿಟೀಸ್‌ನಿಂದ ಪ್ರತಿಕ್ರಿಯೆ ಬಂದಿಲ್ಲ.

ಇದನ್ನೂ ಓದಿ | Bank Fraud | ಹೂಡಿಕೆ ಮಾಡಿದ್ದ ಹಣ ವಾಪಸ್‌ ಕೇಳಿದರೆ ಧಮ್ಕಿ; ಕೋಆಪರೇಟಿವ್‌ ಬ್ಯಾಂಕ್‌ನಿಂದ ವಂಚನೆ ಆರೋಪ

Exit mobile version