ಭೋಪಾಲ್: ಸುಕ್ಮಾ: ಛತ್ತೀಸ್‌ಗಢ (Chhattisgarh) ರಾಜ್ಯದ ಬಿಜಾಪುರ-ಸುಕ್ಮಾ ಗಡಿಯಲ್ಲಿ ಸೋಮವಾರ ಭದ್ರತಾ ಪಡೆಗಳು ಮತ್ತು ಮಾವೋವಾದಿಗಳ (Maoists) ನಡುವೆ ಗುಂಡಿನ ಚಕಮಕಿ ನಡೆದಿದ್ದು(Gun Fight), ಮೂವರು ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದು(3 jawans died), 14 ಗಾಯಾಳು ಭದ್ರತಾ ಪಡೆಯ ಸಿಬ್ಬಂದಿಯನ್ನು ಸುಕ್ಮಾದಿಂದ 400 ಕಿ.ಮೀ ದೂರವಿರುವ ರಾಯ್ಪುರಕ್ಕೆ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ(Security Personnel Injured).
ಸುಕ್ಮಾ ಜಿಲ್ಲೆಯ ತೆಕುಲಗುಡೆಮ್ ಗ್ರಾಮದಲ್ಲಿ ಭದ್ರತಾ ಶಿಬಿರವನ್ನು ಸ್ಥಾಪಿಸಲಾಗಿದ್ದು, ಈ ಪ್ರದೇಶದ ಜನರಿಗೆ ಮೂಲ ಸೌಕರ್ಯಗಳನ್ನು ಒದಗಿಸಲು ಮತ್ತು ಮಾವೋವಾದಿ ಚಟುವಟಿಕೆಗಳ ಮೇಲೆ ನಿಗಾ ಇಡಲಾಗುತ್ತಿದೆ. ಶಿಬಿರವನ್ನು ಸ್ಥಾಪಿಸಿದ ನಂತರ, ಜಿಲ್ಲಾ ರಿಸರ್ವ್ ಗಾರ್ಡ್, ಕೋಬ್ರಾ ಬೆಟಾಲಿಯನ್ ಮತ್ತು ವಿಶೇಷ ಕಾರ್ಯಪಡೆಗಳು ಗಸ್ತು ತಿರುಗುತ್ತಿದ್ದಾಗ ಮಾವೋವಾದಿಗಳು ಗುಂಡಿನ ದಾಳಿ ನಡೆಸಿದರು. ಭದ್ರತಾ ಪಡೆಗಳು ಪ್ರತಿದಾಳಿ ನಡೆಸಿದ್ದರಿಂದ ಮಾವೋವಾದಿಗಳು ಓಡಿಹೋಗಿ ಕಾಡಿನಲ್ಲಿ ರಕ್ಷಣೆ ಪಡೆದುಕೊಂಡರು ಎಂದು ತಿಳಿದು ಬಂದಿದೆ.
2021ರಲ್ಲಿ ಮಾರಣಾಂತಿಕ ದಾಳಿ
ಇದೇ ಅರಣ್ಯ ಪ್ರದೇಶದಲ್ಲಿ 2021ರಲ್ಲಿ ಗುಂಡಿನ ಕಾಳಗ ನಡೆದಿತ್ತು. ಆಗ 22 ಯೋಧರು ಹುತಾತ್ಮರಾಗಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಯೋಧರ ತ್ಯಾಗದ ಹೊರತಾಗಿಯೂ ತೆಕುಲಗುಡೆಮ್ ಗ್ರಾಮ ಕ್ಯಾಂಪ್ ಮಾಡಲಾಗಿತ್ತು. ಈ ಪ್ರದೇಶದಲ್ಲಿ ಶಾಂತಿ, ಭದ್ರತೆ ಹಾಗೂ ಅಭಿವೃದ್ಧಿಗಾಗಿ ಪ್ರಯತ್ನಿಸಲಾಗುತ್ತಿದೆ ಎಂದು ಬಸ್ತಾರ್ ರೇಂಜ್ ಐಜಿಪಿ ಸಂದರರಾಜ್ ಪಿ ಅವರು ಹೇಳಿದ್ದಾರೆ.
2021 ರ ಏಪ್ರಿಲ್‌ನಲ್ಲಿ ಬಿಜಾಪುರ ಜಿಲ್ಲೆಯಲ್ಲಿ ಮಾವೋವಾದಿ ನಾಯಕನ ಹುಡುಕಾಟದಲ್ಲಿ ಸುಮಾರು 2,000 ಭದ್ರತಾ ಸಿಬ್ಬಂದಿ ತೊಡಗಿದ್ದರು. ಆಗ ನಕ್ಸಲರು ಡೆಡ್ಲೀ ಹೊಂಚು ದಾಳಿ ನಡೆಸಿದ್ದರು. ಸುಮಾರು 400 ರಿಂದ 750 ತರಬೇತಿ ಪಡೆದ ಮಾವೋವಾದಿಗಳು ಮೂರು ಕಡೆಯಿಂದ ಜವಾನರನ್ನು ಸುತ್ತುವರೆದರು ಮತ್ತು ಅವರ ಮೇಲೆ ಹಲವಾರು ಗಂಟೆಗಳ ಕಾಲ ಮೆಷಿನ್-ಗನ್ ದಾಳಿ ನಡೆಸಿದ್ದರು. ಸ್ಪೋಟಕಗಳನ್ನು ಎಸೆದಿದ್ದರು.
ಬಂಡುಕೋರರು, ಮೃತರಾದ ಭದ್ರತಾ ಪಡೆ ಯೋಧರ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು, ಸಮವಸ್ತ್ರಗಳು ಮತ್ತು ಶೂಗಳನ್ನು ಲೂಟಿ ಮಾಡಿದ್ದರು. ಈ ವೇಳೆ ಸುಮಾರು 28ರಿಂದ 30 ನಕ್ಸರು ಕೂಡ ಮೃತಪಟ್ಟಿದ್ದರು ಎಂದು ಸಿಆರ್‌ಪಿಎಫ್ ಹೇಳಿದೆ.
ಈ ಸುದ್ದಿಯನ್ನೂ ಓದಿ: Naxal Suspicion : ನಕ್ಸಲ್ ಪ್ರದೇಶದ ಒಂಟಿ ಮನೆಗೆ ಮಧ್ಯರಾತ್ರಿ ಲಗ್ಗೆ ಇಟ್ಟವರ‍್ಯಾರು?