ಡೆಹ್ರಾಡೂನ್: ಉತ್ತರಾಖಂಡ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಹಿರಿಯ ನಾಯಕ (Senior Congress Leader) ಹರೀಶ್ ರಾವತ್ (Harish Rawat) ಅವರಿದ್ದ ಕಾರು ಅಪಘಾತಕ್ಕೀಡಾಗಿದೆ. ಹಲ್‌ದ್ವಾನಿಯಿಂದ ಕಾಶಿಪುರಕ್ಕೆ ಮಂಗಳವಾರ (ಅಕ್ಟೋಬರ್ 25) ರಾತ್ರಿ ತೆರಳುವ ವೇಳೆ ಹರೀಶ್ ರಾವತ್ ಅವರಿದ್ದ ಕಾರು ಡಿವೈಡರ್‌ಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಹರೀಶ್ ರಾವತ್ ಅವರ ಎದೆಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಬಜ್ಪುರ್ ಬಳಿಯ ಹೆದ್ದಾರಿಯಲ್ಲಿ ಕಾರು ಚಲಿಸುವಾಗ ಚಾಲಕನ ನಿಯಂತ್ರಣ ತಪ್ಪಿದ ಕಾರಣ ಕಾರು ಡಿವೈಡರ್‌ಗೆ ಡಿಕ್ಕಿಯಾಗಿದೆ. ಅಪಘಾತದ ಕುರಿತು ಮಾಹಿತಿ ಲಭ್ಯವಾಗುತ್ತಲೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಅವರನ್ನು ಬಾಜ್ಪುರ ಸಿಎಚ್‌ಸಿ ಆಸ್ಪತ್ರೆಗೆ ಸಾಗಿಸಿದರು. ಇದಾದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಕೆವಿಆರ್ ಆಸ್ಪತ್ರೆಗೆ ಸಾಗಿಸಲಾಗಿದೆ. ಕಾರಿನಲ್ಲಿದ್ದ ಕಮಲ್ ಹಾಗೂ ಅಜಯ್ ಎಂಬುವವರಿಗೂ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಎದೆಗೆ ಗಾಯಗಳಾದ ಕಾರಣ ಕೆವಿಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಹರೀಶ್ ರಾವತ್ ಅವರು ಡಿಸ್‌ಚಾರ್ಜ್ ಆಗಿದ್ದು, ಹೋಟೆಲ್‌ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಹರೀಶ್ ರಾವತ್ ಅವರಿದ್ದ ಫಾರ್ಚುನರ್ ಕಾರು ಅಪಘಾತಕ್ಕೀಡಾಗಿದೆ ಎಂಬ ಸುದ್ದಿ ತಿಳಿಯುತ್ತಲೇ ಬಾಜ್ಪುರ, ಕಾಶಿಪುರ ಸೇರಿ ಸಮೀಪದ ಪಟ್ಟಣಗಳ ಕಾಂಗ್ರೆಸ್ ನಾಯಕರು ಹೋಟೆಲ್‌ಗೆ ತೆರಳಿ, ಅವರ ಆರೋಗ್ಯ ವಿಚಾರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
हल्द्वानी से काशीपुर को आते वक्त बाजपुर में मेरी गाड़ी थोड़ा सा डिवाइडर से टकरा गई तो थोड़े हल्के-फुल्के झटके लगे हैं, तो उसके लिए हॉस्पिटल में चेकअप करवाया और डॉक्टर्स ने सब ठीक बताया है और डिस्चार्ज कर दिया है।
— Harish Rawat (@harishrawatcmuk) October 25, 2023
1/2 pic.twitter.com/DmUMZe88Mb
ಇದನ್ನೂ ಓದಿ: ಕೇರಳದಲ್ಲಿ ಶಬರಿಮಲೆಗೆ ಹೊರಟಿದ್ದ ಬಸ್ ಅಪಘಾತ; ಕೋಲಾರದ 13 ಜನಕ್ಕೆ ಗಂಭೀರ ಗಾಯ
ಪ್ರಕರಣದ ಕುರಿತು ಹರೀಶ್ ರಾವತ್ ಅವರು ಪೋಸ್ಟ್ ಮಾಡಿದ್ದಾರೆ. “ನಾನು ಅಪಾಯದಿಂದ ಪಾರಾಗಿದ್ದೇನೆ ಹಾಗೂ ಯಾವುದೇ ತೊಂದರೆ ಇಲ್ಲ ಎಂದು ವೈದ್ಯರು ಹೇಳಿದ್ದಾರೆ. ಆಸ್ಪತ್ರೆಯಿಂದಲೂ ಬಿಡುಗಡೆ ಮಾಡಿದ್ದಾರೆ. ಹಾಗಾಗಿ, ಯಾರೂ ಯೋಚಿಸುವ ಅಗತ್ಯವಿಲ್ಲ” ಎಂದಿದ್ದಾರೆ. ಹರೀಶ್ ರಾವತ್ ಹಾಗೂ ಕಾರಿನಲ್ಲಿದ್ದ ಇಬ್ಬರು ಸೇರಿ ಮೂವರು ಕೂಡ ಅಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.