Site icon Vistara News

ಬಹುದೊಡ್ಡ ಅಪಘಾತದಿಂದ ಕೂದಲೆಳೆ ಅಂತರದಲ್ಲಿ ಪಾರಾದ ಹರಿಯಾಣ ಗೃಹ ಸಚಿವ; ಇದು ಪವಾಡ ಎಂದ ಅನಿಲ್​ ವಿಜ್​

Haryana Minister Anil Vi Narrow escape From Accident

ಗುರುಗ್ರಾಮ: ಹರಿಯಾಣದ ಗೃಹ ಸಚಿವ ಅನಿಲ್​ ವಿಜ್​ ಅವರು ಕೂದಲೆಳೆ ಅಂತರದಲ್ಲಿ ಬಹುದೊಡ್ಡ ಅಪಾಯದಿಂದ ಪಾರಾಗಿದ್ದಾರೆ. ಅಂಬಾಲಾ ಕಂಟೋನ್ಮೆಂಟ್​​ನಿಂದ ಗುರುಗ್ರಾಮಕ್ಕೆ ಪ್ರಯಾಣಿಸುತ್ತಿದ್ದಾಗ ಅವರ ಮರ್ಸಿಡಿಸ್​ ಬೆಂಜ್​ ಕಾರು ಅಪಘಾತಕ್ಕೀಡಾಗಿದೆ.

ಅನಿಲ್​ ವಿಜ್​ ಅವರ ಕಾರು ಕುಂಡ್ಲಿ-ಮನೇಸರ್-ಪಲ್ವಾಲ್ ಎಕ್ಸ್‌ಪ್ರೆಸ್‌ವೇ (ವೆಸ್ಟರ್ನ್ ಪೆರಿಫೆರಲ್ ಎಕ್ಸ್‌ಪ್ರೆಸ್‌ ವೇ)ದಲ್ಲಿ ಸಂಚಾರ ಮಾಡುತ್ತಿದ್ದಾಗ, ಏಕಾಏಕಿ ಅದರ ಶಾಕ್​ ಅಬ್ಸರ್ವರ್​ ಮುರಿದು ಎರಡು ಚೂರಾಗಿಬಿದ್ದಿದೆ. ಕಾರು ನಿಧಾನಕ್ಕೆ ಚಲಿಸುತ್ತಿದ್ದುದರಿಂದ ಅಪಾಯವೇನೂ ಆಗಿಲ್ಲ. ಅದೇನಾದರೂ ವೇಗದಲ್ಲಿ ಇದ್ದಿದ್ದರೆ, ಖಂಡಿತ ದೊಡ್ಡಮಟ್ಟದ ಅಪಘಾತ ಆಗುತ್ತಿತ್ತು. ಇನ್ನು ಕಾರಿನ ಶಾಕ್​ ಅಬ್ಸರ್ವರ್​ ಮುರಿದ ಫೋಟೋವನ್ನು ಶೇರ್ ಮಾಡಿಕೊಂಡ ಅನಿಲ್​ ವಿಜ್​, ‘ಅಂಬಾಲಾ ಕಂಟೋನ್ಮೆಂಟ್​ನಿಂದ ಗುರುಗ್ರಾಮದತ್ತ ತೆರಳುತ್ತಿದ್ದ ನನ್ನ ಕಾರಿನ ಚಾಲಕನ ಬದಿಯ ಶಾಕ್​ ಅಬ್ಸರ್ವರ್​ ಮುರಿದು, ಎರಡು ಚೂರಾಗಿ ಬಿತ್ತು. ಕಾರು ಏನೂ ಅಪಘಾತಕ್ಕೀಡಾಗದೆ ಇರುವುದು, ನಾನು ಉಳಿದಿದ್ದು ಪವಾಡವರೇ ಸರಿ’ ಎಂದು ಕ್ಯಾಪ್ಷನ್​ ಬರೆದುಕೊಂಡಿದ್ದಾರೆ. ಸದ್ಯ ಕಾರನ್ನು ರಿಪೇರಿಗೆ ಬಿಡಲಾಗಿದೆ.

ಇದನ್ನೂ ಓದಿ: Viral Video | ಸೂಕ್ಷ್ಮತೆ ಅರ್ಥ ಮಾಡಿಕೊಳ್ಳದ ಹರ್ಯಾಣ ಗೃಹ ಸಚಿವರನ್ನು ಮುಜುಗರಕ್ಕೀಡು ಮಾಡಿದ ಗೃಹ ಸಚಿವ ಅಮಿತ್​ ಶಾ

Exit mobile version