ನವದೆಹಲಿ: ಬಿಹಾರ ಸರ್ಕಾರ ಆರಂಭಿಸಿರುವ ಜಾತಿ ಗಣತಿ ಪ್ರಶ್ನಿಸಿ ದಾಖಲಾಗಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ (Supreme Court) ಜನವರಿ 20ರಂದು ನಡೆಸಲಿದೆ.
ಬಿಹಾರ ಸರ್ಕಾರದ ಈ ಜಾತಿ ಗಣತಿಯನ್ನು ಪ್ರಶ್ನಿಸಿ ಕನಿಷ್ಠ ಅರ್ಜಿಗಳು ಸುಪ್ರೀಂ ಕೋರ್ಟ್ ಮುಂದಿವೆ. ಬಿಹಾರ ನಾಗರಿಕರೇ ಪ್ರತ್ಯೇಕ ಅರ್ಜಿಗಳನ್ನು ದಾಖಲಿಸಿದ್ದಾರೆ. ಈ ರೀತಿಯ ಗಣತಿಯನ್ನು ಕೈಗೊಳ್ಳುವ ಯಾವುದೇ ಶಾಸನಾತ್ಮಕ ಅಥವಾ ಕಾರ್ಯಾಂಗದ ಅಧಿಕಾರಗಳು ರಾಜ್ಯ ಸರ್ಕಾರಕ್ಕಿಲ್ಲ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.
ಜಾತಿ ಗಣತಿಯಿಂದ ಎಲ್ಲರಿಗೂ ಲಾಭ
ಭಾರೀ ಚರ್ಚೆಗೆ ಕಾರಣವಾಗಿದ್ದ ಜಾತಿ ಆಧರಿತ ಜನಗಣತಿಯನ್ನು ಬಿಹಾರ ಸರ್ಕಾರವು ಶನಿವಾರದಿಂದ ಆರಂಭಿಸಿದೆ(Bihar Caste Census). ಜಾತಿ ಗಣತಿಯಿಂದ ಬಿಹಾರದ ಎಲ್ಲ ವರ್ಗದ ಜನರಿಗೆ ಲಾಭವಾಗಲಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಅವರು ಹೇಳಿದ್ದಾರೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಲಾಭಗಳನ್ನು ದಾಟಿಸಲು ಅನುಕೂಲವಾಗಲೆಂದೇ ಈ ಜಾತಿಗಣತಿ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
”ಜಾತಿ ಗಣತಿಯಿಂದ ಎಲ್ಲರಿಗೂ ಅನುಕೂಲವಾಗಲಿದೆ. ಸೌಲಭ್ಯ ವಂಚಿತರು ಸೇರಿದಂತೆ ಸಮಾಜದ ವಿವಿಧ ವರ್ಗಗಳ ಅಭಿವೃದ್ಧಿಗೆ ಸರ್ಕಾರ ಕೆಲಸ ಮಾಡಲು ಇದರಿಂದ ಸಾಧ್ಯವಾಗಲಿದೆ. ಗಣತಿ ಕಾರ್ಯ ಮುಗಿದ ಬಳಿಕ ಅಂತಿಮ ವರದಿ ಕೇಂದ್ರ ಸರ್ಕಾರಕ್ಕೂ ಕಳುಹಿಸಲಾಗುವುದು” ಎಂದು ಸಿಎಂ ನಿತೀಶ್ ಕುಮಾರ್ ಅವರು ಶೆಯೋಹರ್ ಜಿಲ್ಲೆಯಲ್ಲಿ ತಮ್ಮ ‘ಸಮಾಧಾನ ಯಾತ್ರೆ’ಯ ಎರಡನೇ ದಿನದಂದು ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.
ಇದನ್ನೂ ಓದಿ | Bihar Caste Census | ಬಿಹಾರದಲ್ಲಿ ಜಾತಿ ಗಣತಿ ಆರಂಭ, ಇದರಿಂದ ಏನು ಲಾಭ?