Site icon Vistara News

Heart attack | ಚಳಿ ಗಾಳಿ ಎಫೆಕ್ಟ್‌: ಕಾನ್ಪುರದಲ್ಲಿ ಐದೇ ದಿನದೊಳಗೆ 98 ಮಂದಿ ಹೃದಯಾಘಾತಕ್ಕೆ ಬಲಿ! ಏನಿದಕ್ಕೆ ಕಾರಣ?

ಲಖನೌ: ಉತ್ತರ ಪ್ರದೇಶದಾದ್ಯಂತ ಚಳಿ ಗಾಳಿ ಹೆಚ್ಚಾಗಿದೆ. ಇದೇ ವೇಳೆ ಕಾನ್ಪುರ ನಗರವೊಂದರಲ್ಲೇ ಕಳೆದ ಐದು ದಿನಗಳಲ್ಲಿ 98 ಮಂದಿ ಹೃದಯಾಘಾತ(Heart attack) ಹಾಗೂ ಮೆದುಳು ಸ್ತಂಭನದಿಂದಾಗಿ ಮೃತಪಟ್ಟಿದ್ದಾರೆ. ಚಳಿ ಹೆಚ್ಚಾದ್ದರಿಂದ ಹೃದಯಾಘಾತ ಪ್ರಕರಣ ಹೆಚ್ಚಾಗುತ್ತಿದ್ದು, ಜನರು ಎಚ್ಚರಿಕೆಯಿಂದ ಇರಬೇಕು ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ: Rahul Gandhi T Shirt | ಚಳಿ ನಿಗ್ರಹಕ್ಕೆ ರಾಹುಲ್‌ ಟಿ ಶರ್ಟ್‌ ಒಳಗೆ ಥರ್ಮಲ್‌ ಉಡುಪು, ಕೈ-ಕಮಲ ಕೆಸರೆರಚಾಟ
ಕಾನ್ಪುರದ ಎಲ್‌ಪಿಎಸ್‌ ಇನ್‌ಸ್ಟಿಟ್ಯೂಟ್‌ ಆಫ್‌ ಕಾರ್ಡಿಯಾಲಜಿ ನೀಡಿರುವ ವರದಿಯ ಪ್ರಕಾರ ಕಳೆದ ಐದು ದಿನಗಳಲ್ಲಿ ಆಸ್ಪತ್ರೆಗಳಲ್ಲಿದ್ದ 44 ರೋಗಿಗಳು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಹಾಗೆಯೇ 54 ಮಂದಿ ಆಸ್ಪತ್ರೆಗೆ ಕರೆತರುವುದಕ್ಕೂ ಮೊದಲೇ ಪ್ರಾಣ ಬಿಟ್ಟಿದ್ದರು.
ಹಾಗೆಯೇ ಲಕ್ಷ್ಮೀಪತ್‌ ಸಿಂಘಾನಿಯಾ ಇನ್‌ಸ್ಟಿಟ್ಯೂಟ್‌ ಆಫ್‌ ಕಾರ್ಡಿಯಾಲಜಿ ನೀಡಿರುವ ವರದಿಯ ಪ್ರಕಾರ ಕಳೆದ ವಾರದಲ್ಲಿ 723 ಮಂದಿ ಹೃದಯಾಘಾತ ಸಮಸ್ಯೆಯಿಂದ ಆಸ್ಪತ್ರೆಗೆ ಭೇಟಿ ಕೊಟ್ಟಿದ್ದಾರೆ. ಶನಿವಾರದಂದು ಈ ಆಸ್ಪತ್ರೆಯಲ್ಲಿ ಹೃದಯಾಘಾತಕ್ಕೆ ಚಿಕಿತ್ಸೆ ಪಡೆಯುತ್ತಿದ್ದ ಆರು ಮಂದಿ ಸಾವನ್ನಪ್ಪಿದ್ದಾರೆ. ಹಾಗೆಯೇ ಚಳಿ ಸಮಸ್ಯೆಯಿಂದ ಆಸ್ಪತ್ರೆಗೆ ಸೇರಿದ್ದ 14 ರೋಗಿಗಳು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಅದಲ್ಲದೆ 8 ಮಂದಿ ಆಸ್ಪತ್ರೆಗೆ ಬರುವಾಗಲೇ ಪ್ರಾಣ ಬಿಟ್ಟಿದ್ದರು.

ಇದನ್ನೂ ಓದಿ: Viral Video | ಭಯಂಕರ ಚಳಿಯಲ್ಲಿ ಅಂಗಿ ಬಿಚ್ಚಿ ಕುಣಿದ ಕಾಂಗ್ರೆಸ್ ಕಾರ್ಯಕರ್ತರು; ಭಾರತ್ ಜೋಡೋ ಯಾತ್ರೆಯಲ್ಲಿ ಹುಮ್ಮಸ್ಸು
ನಗರದಲ್ಲಿರುವ ಎಸ್‌ಪಿಎಸ್‌ ಆಸ್ಪತ್ರೆಯಲ್ಲಿ 24 ಗಂಟೆಗಳಲ್ಲಿ 14 ಮಂದಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಈ ಆಸ್ಪತ್ರೆಯಲ್ಲಿ ಸದ್ಯ 604 ಮಂದಿ ಹೃದಯಾಘಾತಕ್ಕೆ ಸಂಬಂಧಿಸಿದಂತೆ ಚಿಕಿತ್ಸೆ ಪಡೆಯುತ್ತಿದ್ದಾರೆ.
ಚಳಿಯಿಂದಾಗಿ ರಕ್ತದೊತ್ತಡ ಹೆಚ್ಚಾಗುತ್ತಿದ್ದು, ಹೃದಯಾಘಾತ ಹೆಚ್ಚಾಗುತ್ತಿರುವುದಕ್ಕೆ ಕಾರಣವಿರಬಹುದು ಎನ್ನುವುದು ವೈದ್ಯರ ಅನಿಸಿಕೆ. ಹಿರಿಯರು ಕಿರಿಯರು ಎನ್ನುವ ಭೇದವಿಲ್ಲದೆ ಹೃದಯಾಘಾತ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆ ಪ್ರತಿಯೊಬ್ಬರು ಚಳಿಯಿಂದ ರಕ್ಷಿಸಿಕೊಳ್ಳುವ ಅವಶ್ಯಕತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ.

Exit mobile version