Site icon Vistara News

Anti Naxal Operation | ಸರ್ಜಿಕಲ್​ ಸ್ಟ್ರೈಕ್​​ನಲ್ಲಿ ಸತ್ತಿದ್ದಾನಾ ನಕ್ಸಲ್​ ನಾಯಕ ಹಿದ್ಮಾ? ಮಾವೋವಾದಿ ವಕ್ತಾರೆ ಹೇಳಿದ್ದೇನು?

Hidma alive Says Chhattisgarh Maoists

ನವ ದೆಹಲಿ: 2024ರ ಲೋಕಸಭೆ ಚುನಾವಣೆ ಹೊತ್ತಿಗೆ ದೇಶವನ್ನು ನಕ್ಸಲ್​ ಮುಕ್ತ ಮಾಡುವುದಾಗಿ ಗೃಹ ಸಚಿವ ಅಮಿತ್​ ಶಾ ಘೋಷಣೆ ಮಾಡಿದ ಬೆನ್ನಲ್ಲೇ, ಕಳೆದ 4 ದಿನಗಳ ಹಿಂದೆ ಛತ್ತೀಸ್​ಗಢ್​, ಜಾರ್ಖಂಡ ಮತ್ತು ತೆಲಂಗಾಣದ ನಕ್ಸಲ್​ ಪೀಡಿತ ಪ್ರದೇಶಗಳಲ್ಲಿ ಭದ್ರತಾ ಪಡೆ ಸಿಬ್ಬಂದಿ ಬೃಹತ್​ ಕಾರ್ಯಾಚರಣೆ ನಡೆಸಿದ್ದರು. ಇದೊಂದು ಸರ್ಜಿಕಲ್​ ಸ್ಟ್ರೈಕ್​ ಎಂದೇ ಹೇಳಲಾಗಿತ್ತು. ಅದರಲ್ಲಿ ಛತ್ತೀಸ್​ಗಢ-ತೆಲಂಗಾಣ ಗಡಿ ಭಾಗದಲ್ಲಿ ಕಾರ್ಯಾಚರಣೆ ನಡೆಸುವ ವೇಳೆ ಮಹಿಳಾ ಮಾವೋವಾದಿಯೊಬ್ಬಳು ಹತ್ಯೆಗೀಡಾಗಿದ್ದಳು. ಹಾಗೇ, ಮಾವೋವಾದಿ ಮಿಲಿಟರಿ ಕಮಾಂಡರ್​ ಆಗಿದ್ದು, ಅದೆಷ್ಟೋ ದುಷ್ಕೃತ್ಯಗಳ ಮಾಸ್ಟರ್​ ಮೈಂಡ್ ಆಗಿರುವ ಮದ್ವಿ ಹಿದ್ಮಾ ಕೂಡ ಈ ದಾಳಿಯಲ್ಲಿ ಮೃತಪಟ್ಟಿದ್ದಾನೆ ಎಂಬುದೊಂದು ರೂಮರ್​ ಕೂಡ ಹರಡಿತ್ತು. ಆದರೆ ಆತ ಸತ್ತಿಲ್ಲ, ಸೆರೆಯೂ ಸಿಕ್ಕಿಲ್ಲ ಛತ್ತೀಸ್​ಗಢದ ನಕ್ಸಲರೇ ಹೇಳಿದ್ದಾರೆ.

ಜನವರಿ 11ರಂದು ಎನ್​ಸಿಜಿ ಕಮಾಂಡೋಗಳು, ವಾಯುಪಡೆಯನ್ನು ಬಳಸಿಕೊಂಡು ನಕ್ಸಲರ ಮೇಲೆ ಸರ್ಜಿಕಲ್​ ಸ್ಟ್ರೈಕ್​ ನಡೆಸಿದ್ದರು. ಈ ದಾಳಿಯ ಬಗ್ಗೆ ಈಗ ಮಾವೋವಾದಿ ವಕ್ತಾರೆ ಸಮತಾ ಹೇಳಿಕೆ ಬಿಡುಗಡೆ ಮಾಡಿದ್ದಾಳೆ. ‘ಜನವರಿ 11ನೇ ತಾರೀಖು ಛತ್ತೀಸ್​ಗಢದ ಪಾಲಿಗೆ ಕರಾಳ ದಿನ ಆಗಿ, ಇತಿಹಾಸದಲ್ಲಿ ಉಳಿಯಲಿದೆ. ಅಂದು ವಾಯುಮಾರ್ಗದಲ್ಲಿ ದಾಳಿಯಾಯಿತು. ಸುಕ್ಮಾ ಮತ್ತು ಬಿಜಾಪುರ ಗಡಿ ಭಾಗದ ಹಳ್ಳಿಗಳ ಮೇಲೆಲ್ಲ ಬಾಂಬ್​ ಬಿದ್ದಿವೆ. ಡ್ರೋನ್​, ಹೆಲಿಕಾಪ್ಟರ್​ಗಳ ಮೂಲಕ ದಾಳಿ ಮಾಡಲಾಗಿದೆ. ನಮ್ಮ ಮೇಲೆ ಮನಬಂದಂತೆ ಗುಂಡಿನ ದಾಳಿ ನಡೆಸಿದರು. ನಮ್ಮ ಸಿಬ್ಬಂದಿ ಪ್ರತಿದಾಳಿ ನಡೆಸಿದ್ದಾರೆ. ಅವರ ಸುಮಾರು ಆರು ಮಂದಿ ಯೋಧರು ಗಾಯಗೊಂಡಿದ್ದಾರೆ. ಸರ್ಜಿಕಲ್ ಸ್ಟ್ರೈಕ್​ ವಿಫಲಗೊಳಿಸಲು ನಾವು ಎಲ್ಲ ಪ್ರಯತ್ನ ಮಾಡಿದೆವು’ ಎಂದು ಹೇಳಿಕೊಂಡಿದ್ದಾಳೆ. ಹಾಗೇ, ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಆರ್ಮಿಯ ಸದಸ್ಯೆ ಪೊಟ್ಟಂ ಹಂಗಿ ಮೃತಪಟ್ಟಿದ್ದಾಗಿಯೂ ಸಮತಾ ಹೇಳಿದ್ದಾಳೆ. ಹಿದ್ಮಾ ಸತ್ತಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾಳೆ.

ಇದನ್ನೂ ಓದಿ: Anti Naxal Operation | ಅಮಿತ್‌ ಶಾ ಘೋಷಣೆ ಬೆನ್ನಲ್ಲೇ ಛತ್ತೀಸ್‌ಗಢ, ಜಾರ್ಖಂಡ್‌ನಲ್ಲಿ ನಕ್ಸಲರ ವಿರುದ್ಧ ಸರ್ಜಿಕಲ್‌ ಸ್ಟ್ರೈಕ್

Exit mobile version