Site icon Vistara News

Maharaj Movie: `ಮಹಾರಾಜ್’ ಚಲನಚಿತ್ರ ನಿಷೇಧಕ್ಕೆ ಹಿಂದೂ ಜನಜಾಗೃತಿ ಸಮಿತಿ ಆಗ್ರಹ

Hindu Jana Jagruti Samiti demands immediate ban on Maharaj movie

ಪುಣೆ: ಹಿಂದೂ ಸಂತರು ಮತ್ತು ಸಂಪ್ರದಾಯಗಳ ತೇಜೋವಧೆ ಮಾಡುವ `ಮಹಾರಾಜ್’ ಚಲನಚಿತ್ರವನ್ನು (Maharaj Movie) ಕೂಡಲೇ ನಿಷೇಧಿಸಬೇಕು ಎಂದು ಆಗ್ರಹಿಸಿ, ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಬುಧವಾರ ಆಂದೋಲನ ನಡೆಸಲಾಯಿತು.

ಭಾರತವು ಸಾಧು-ಸಂತರ ಭೂಮಿಯಾಗಿದೆ. ಸಂತರು ಜಗತ್ತಿನಾದ್ಯಂತ ಸಂಚರಿಸಿ, ಭಾರತೀಯ ಸಂಸ್ಕೃತಿ, ಧರ್ಮ, ಜ್ಞಾನ, ಕಲೆ, ಸಭ್ಯತೆ, ಸದಾಚಾರ ಹಾಗೂ ಭಗವದ್ ಭಕ್ತಿ ಕಲಿಸಿ ಸಮಾಜಕ್ಕೆ ಆದರ್ಶ ಜೀವನವನ್ನು ನಡೆಸಲು ಪ್ರೋತ್ಸಾಹಿಸುತ್ತಿದ್ದಾರೆ. ಹೀಗಿರುವಾಗ ನಟ ಆಮೀರ್ ಖಾನ್ ಅವರ ಪುತ್ರ ಜುನೈದ್ ಖಾನ್ ನಟಿಸಿರುವ ಯಶ್‌ ರಾಜ್ ಫಿಲ್ಮ್ಸ್ ನಿರ್ಮಾಣದ ‘ಮಹಾರಾಜ್” ಚಲನಚಿತ್ರನಲ್ಲಿ ಸಾಧುಸಂತರನ್ನು ದುರಾಚಾರಿಗಳು, ಗೂಂಡಾಗಳೆಂದು ಬಿಂಬಿಸಿ ಅವರ ತೇಜೋವಧೆ ಮಾಡಲಾಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯು ಆರೋಪಿಸಿದ್ದು,. ಈ ಹಿನ್ನಲೆಯಲ್ಲಿ ಈ ಚಲನಚಿತ್ರವನ್ನು ಕೂಡಲೇ ನಿಷೇಧಿಸಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಆಗ್ರಹಿಸಲಾಯಿತು.

ಇದನ್ನೂ ಓದಿ: Karnataka Weather : ಕರಾವಳಿ ಸೇರಿ 11 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌; ಮಳೆ ಜತೆಗೆ ರಭಸವಾಗಿ ಬೀಸಲಿದೆ ಗಾಳಿ

ಪುಣೆಯ ಕೊಥರೂಡ ಎಂಬಲ್ಲಿನ ಶ್ರೀ ಶಿವಾಜಿ ಮಹಾರಾಜರ ಪುತ್ಥಳಿಯ ಸಮೀಪ ಬುಧವಾರ ಆಂದೋಲನ ನಡೆಸಿ ಒತ್ತಾಯಿಸಲಾಯಿತು. ಆಂದೋಲನದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಪರಾಗ ಗೋಖಲೆ ಅವರ ನೇತೃತ್ವದಲ್ಲಿ ಸಮವಿಚಾರಿ ಸಂಘಟನೆಗಳೂ ಪಾಲ್ಗೊಂಡಿದ್ದವು.

ಇದನ್ನೂ ಓದಿ: Benefits Of Eating Guava: ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕೆ? ಸೀಬೆಕಾಯಿ ತಿನ್ನಿ!

ಈ ಚಲನಚಿತ್ರದಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲು ಪ್ರಯತ್ನಿಸಲಾಗಿದೆ. ಕೇಂದ್ರ ಸರ್ಕಾರವು ಕೂಡಲೇ ಈ ಚಲಚಿತ್ರವನ್ನು ನಿಷೇಧಿಸಬೇಕು. ಅಲ್ಲದೆ, ದೇವತೆ, ಧರ್ಮ, ಸಂತರ ಅವಹೇಳನ ತಡೆಯಲು ದೇಶಾದ್ಯಂತ ‘ಧರ್ಮನಿಂದನೆ ತಡೆ ಕಾನೂನು’ಜಾರಿಗೊಳಿಸಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಆಗ್ರಹಿಸಲಾಯಿತು.

Exit mobile version