Site icon Vistara News

Hindu Munnani | ಹಿಂದೂಗಳ ಅಂಗಡಿಗಳಲ್ಲಿ ಮಾತ್ರ ಖರೀದಿಸಿ ಎಂದು ಭಿತ್ತಿಪತ್ರ ಹಂಚಿದ್ದಕ್ಕೆ ವ್ಯಕ್ತಿಯ ಬಂಧನ

Hindu Munnani

ಚೆನ್ನೈ: ದೀಪಾವಳಿ ಹಬ್ಬದ ವೇಳೆ ಹಿಂದೂಗಳ ಅಂಗಡಿಗಳಲ್ಲಿ ಮಾತ್ರ ವಸ್ತುಗಳನ್ನು ಖರೀದಿಸಿ ಎಂದು ಮುದ್ರಿಸಿದ ಭಿತ್ತಿಪತ್ರಗಳನ್ನು ಹಂಚಿದ ಕಾರಣ ತಮಿಳುನಾಡಿನಲ್ಲಿ ಹಿಂದು ಮುನ್ನಾನಿ ಸಂಘಟನೆ (Hindu Munnani) ಕಾರ್ಯಕರ್ತರೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಧಾರ್ಮಿಕ ವಿಭಜನೆಗೆ ಯತ್ನಿಸಿದ ಆರೋಪದಲ್ಲಿ ಹಿಂದೂ ಕಾರ್ಯಕರ್ತನನ್ನು ಬಂಧಿಸಲಾಗಿದೆ.

ತಮಿಳುನಾಡಿನ ಕರೂರ್‌ನಲ್ಲಿ ಶಕ್ತಿ ಎಂಬ ಕಾರ್ಯಕರ್ತನು, “ಹಿಂದೂಗಳು ಕೇವಲ ಹಿಂದೂಗಳ ಅಂಗಡಿಗಳಲ್ಲಿ ಮಾತ್ರ ದೀಪಾವಳಿ ವೇಳೆ ವಸ್ತುಗಳನ್ನು ಖರೀದಿಸಿ. ಹಾಗೆಯೇ, ಹಿಂದೂ ಅಂಗಡಿಗಳ ಮಾಲೀಕರು ದೇವರ ಫೋಟೊಗಳನ್ನು ಹಾಕುವ ಮೂಲಕ ಖರೀದಿ ಮಾಡುವವರಿಗೆ ನೆರವಾಗಿ” ಎಂದು ಮುದ್ರಿಸಿದ ಭಿತ್ತಿಪತ್ರಗಳನ್ನು ಹಂಚಿದ್ದಾನೆ.

ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್‌ ೧೫೩ (ಧರ್ಮ, ಸಮುದಾಯಗಳ ಮಧ್ಯೆ ದ್ವೇಷ ಬಿತ್ತುವುದು, ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ಉಂಟು ಮಾಡುವುದು) ಹಾಗೂ ೫೦೫ (ಸಾರ್ವಜನಿಕರ ದಾರಿ ತಪ್ಪಿಸುವ ಹೇಳಿಕೆ ನೀಡುವುದು) ಅಡಿಯಲ್ಲಿ ಶಕ್ತಿ ವಿರುದ್ಧ ದೂರು ದಾಖಲಿಸಲಾಗಿದೆ. ವ್ಯಕ್ತಿ ವಿರುದ್ಧ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಬಂಧಿಸಿದ್ದು, ಬಳಿಕ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

ಇದನ್ನೂ ಓದಿ | ಲವ್ ಜಿಹಾದ್ | ಮದುವೆ ಆಗಲು ಹೊರಟ ಯುವಕ-ಯುವತಿಯನ್ನು ಪೊಲೀಸರಿಗೆ ಒಪ್ಪಿಸಿದ ಹಿಂದೂ ಕಾರ್ಯಕರ್ತರು

Exit mobile version